CONNECT WITH US  

ವಾಜಪೇಯಿ ಮೇರು ವ್ಯಕ್ತಿತ್ವದ ವ್ಯಕ್ತಿ

ತಿಪಟೂರು: ದೇಶಕಂಡ ಅಪ್ರತಿಮ ರಾಜಕಾರಣಿ, ಸಜ್ಜನ ಪ್ರಧಾನಿ, ಅಜಾತಶತ್ರುವಾಗಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜಾತ್ಯತೀತ ನಾಯಕರಾಗಿದ್ದು, ತಮ್ಮ ಜೀವನದಲ್ಲೇ ಭ್ರಷ್ಟಾಚಾರದ ಕಪ್ಪು ಚುಕ್ಕಿಯನ್ನು ಅಂಟಿಸಿಕೊಳ್ಳದ ಮೇರು ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು ಎಂದು ಶಾಸಕ ಬಿ.ಸಿ.ನಾಗೇಶ್‌ ಹೇಳಿದರು.

ನಗರದ ಸಿಂಗ್ರಿ ಸರ್ಕಲ್‌ ತಾಲೂಕು ಬಿಜೆಪಿಯಿಂದ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಅಟಲ್‌ ಅವರು 93 ವರ್ಷಗಳ ಜೀವನದಲ್ಲಿ ಯಾವ ಕಪ್ಪು ಚುಕ್ಕೆಯಿಲ್ಲದೆ ಬದುಕಿ ಜೀವನ ಸಾಗಿಸಿದವರು. ತಮ್ಮ ಸೈದ್ಧಾಂತಿಕ ವಿಚಾರಗಳ ಮೂಲಕ ವಿಪಕ್ಷದ ರಾಜಕಾರಣಿಗಳಲ್ಲಿಯೂ ತಮ್ಮ ವಿಚಾರಗಳಿಗೆ ತಲೆದೂಗುವಂತೆ ಮಾಡುತ್ತಿದ್ದ ಏಕೈಕ ವ್ಯಕ್ತಿ ವಾಜಪೇಯಿ ಎಂದರು.

ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಎಚ್‌.ಬಿ.ದಿವಾಕರ್‌, ನಗರ ಘಟಕದ ಅಧ್ಯಕ್ಷ ಲೋಕೇಶ್‌, ತುಮೂಲ್‌ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್‌, ನಗರಸಭಾ ಸದಸ್ಯರಾದ ತರಕಾರಿ ಗಂಗಾಧರ್‌, ರಾಮ್‌ ಮೋಹನ್‌, ತಾಪಂ ಸದಸ್ಯ ಪುಟ್ಟಸ್ವಾಮಿ, ಹರಿಸಮುದ್ರ ಗಂಗಾಧರ್‌, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗಂಗರಾಜು, ಸಿರಿಗಂಧ ಗುರು, ಬೊರವೆಲ್‌ ಜಗದೀಶ್‌, ನಾಗರಾಜು ಹಾಲ್ಕರಿಕೆ, ಅರುಳಗುಪ್ಪೆ ಯೋಗೀಶ್‌, ಶಂಕರಪ್ಪ, ಮತ್ತಿಹಳ್ಳಿ ಗಂಗಾಧರ ಇತರರು ಇದ್ದರು.


Trending videos

Back to Top