CONNECT WITH US  

ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ

ಕುಣಿಗಲ್‌: ಕ್ರೀಡೆಗಳಿಂದ ಮನುಷ್ಯನ ದೆ„ಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಹೀಗಾಗಿ ಗ್ರಾಮೀಣ ಪ್ರದೇಶದ  ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡಾಭಿಮಾನ ಬೆಳೆಸಿಕೊಳ್ಳಬೇಕೆಂದು  ಶಾಸಕ ಡಾ.ಎಚ್‌.ಡಿ ರಂಗನಾಥ್‌ ತಿಳಿಸಿದ್ದಾರೆ. ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಖೋ ಖೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆ ಅವಿಭಾಜ್ಯ ಅಂಗ: ಕ್ರೀಡೆ ಮಾನವನ ಅವಿಭಾಜ್ಯ ಅಂಗವಾಗಿದೆ, ಇದರಿಂದ ವಿದ್ಯಾರ್ಥಿಗಳ  ಮನಸ್ಸು ಉಲ್ಲಾಸಭರಿತವಾಗುತ್ತದೆ. ಜೀವನದ ಜಂಟಾಟದಿಂದ ಹೊರ ಬರಲು ಸಹಕಾರಿಯಾಗಿದೆ, ಅಲ್ಲದೆ ಸದೃಢ ದೇಹ ಹಾಗೂ ಸದೃಢ ಮನಸ್ಸು ನಿರ್ಮಾಣಗೊಳ್ಳುತ್ತದೆ.

ಕ್ರೀಡೆಗಳಿಂದ ದೇಶ, ದೇಶಗಳ ನಡುವೆ  ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ. ಗ್ರಾಮೀಣ ಭಾಗದ ಪ್ರತಿಭೆಗಳು ತಮ್ಮ ಪ್ರತಿಭೆಗಳನ್ನು ಹೊರ ಹಾಕಲು ಹೆಚ್ಚು ಹೆಚ್ಚು ಕ್ರೀಡಾ ವಟುವಟಿಕೆ ಹಮ್ಮಿಕೊಳ್ಳುವ ಮೂಲಕ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಹೇಳಿದರು.

ಕ್ರೀಡೆಗಳಿಂದ ಶಿಸ್ತು, ಮಾನಸಿಕ ಸ್ಥೈರ್ಯ, ನಾಯಕತ್ವ ಗುಣಗಳು ಬೆಳೆಯುತ್ತವೆ. ಕ್ರೀಡೆಯತ್ತ ಎಲ್ಲರೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಗೆ   ಹಿರಿಯರು, ಕಿರಿಯರು ಎಂಬ ಭೇದ ಭಾವವಿಲ್ಲ. ಕಿರಿಯರು, ಪ್ರೌಢ ಕ್ರೀಡಾಪಟುಗಳು ಸ್ಫೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸುವ ಮೂಲಕ ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿತರಬೇಕೆಂದು ಶಾಸಕರು ತಿಳಿಸಿದರು.

ಉತ್ತಮ ಸಾಧನೆ: ಇತ್ತೀಚಿನ ದಿನಗಳಲ್ಲಿ ಭಾರತೀಯ ಪುರುಷ ಹಾಗೂ ಮಹಿಳಾ ಕ್ರೀಡಾ ಪಟುಗಳು ಕಾಮನ್‌ ವೆಲ್ತ್‌, ಏಷ್ಯನ್‌ ಕ್ರೀಡಾ ಕೂಟ ಹಾಗೂ ಒಲಿಂಪಿಕ್ಸ್‌ ಕ್ರೀಡೆಯಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಗೆಲುವ ಮೂಲಕ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.

ಹೀಗಾಗಿ ಪುರುಷ ಹಾಗೂ ಮಹಿಳೆಯರು ಎನ್ನದೆ ಪ್ರತಿಯೊಬ್ಬರು ಒಂದಲ್ಲಾ ಒಂದು ಕ್ರೀಡೆಯಲ್ಲಿ ಭಾಗವಹಿಸಿ ನಿರಂತರ ಅಭ್ಯಾಸ ಮಾಡುವ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ಮತಷ್ಟು ಪದಕಗಳನ್ನು ಗೆಲುವ ಮೂಲಕ ದೇಶದ ಹಿರಿಮೆಯನ್ನು ಎತ್ತಿ ಹಿಡಿಯಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಣಿಗಲ್‌ ಹಿರೇಮಠದ ಶಿವಕುಮಾರ್‌ಸ್ವಾಮೀಜಿ,  ತಾಪಂ ಸದಸ್ಯ ಕೆಂಪೇಗೌಡ, ಮಹಾತ್ಮಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯರಾದ ಮಮತಾಮಣಿ, ಬಿಆರ್‌ಸಿ ಕೃಷ್ಣಪ್ಪ, ಮುಖಂಡರಾದ ಕೆಂಪೀರೇಗೌಡ, ನಾರಾಯಣ್‌, ಆಲ್ಕೆರೆ ಕುಮಾರ್‌, ನಂಜಪ್ಪ, ಪಟೇಲ್‌ ಪ್ರಕಾಶ್‌, ಮುಖ್ಯ ಶಿಕ್ಷಕಿ ಶೋಭಾರಾಣಿ, ನಿವೃತ್ತ ಪೊಲೀಸ್‌ ಪೇದೆ ಗಂಗಪ್ಪ ಇತರರು ಇದ್ದರು.


Trending videos

Back to Top