CONNECT WITH US  

ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಿ

ತುಮಕೂರು: ಇದು ಸ್ಪರ್ಧಾತ್ಮಕ ಯುಗವಾಗಿದ್ದು  ವಿದ್ಯಾಭ್ಯಾಸ  ಎನ್ನುವುದು ಕೇವಲ ಪದವಿ, ಪದಕಕ್ಕೇ ಸಮಯ ಸೀಮಿತಗೊಳಿಸದೆ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಕನ್ನಿಕಾ ಪರಮೇಶ್ವರ್‌ ತಿಳಿಸಿದರು. 

ಶಿಸ್ತು, ಸಮಯಪ್ರಜ್ಞೆ ಅಗತ್ಯ: ನಗರದ ತುಮಕೂರು ವಿವಿಯ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ಗೋವಾ ಎನ್‌ಸಿಸಿ ನಿರ್ದೇಶನಾಲಯದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ  ಥಲ್‌ ಸೈನಿಕ ಶಿಬಿರದ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಒಗ್ಗಟ್ಟು ಅತೀ ಮುಖ್ಯವಾದದ್ದು,

ಇವುಗಳನ್ನು ಮೈಗೂಡಿಸಿಕೊಂಡರೆ ಎಂತಹ ಸಮಸ್ಯೆಗಳನ್ನು  ಬೇಕಾದರೂ ಎದುರಿಸಬಹುದು ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ  ಶಿಸ್ತು ಇದ್ದಲ್ಲಿ ಮಾತ್ರ ನಮ್ಮ ಶ್ರಮಕ್ಕೆ ಪ್ರತಿಫ‌ಲ ಸಿಗುತ್ತದೆ. ನಮ್ಮ ಆಲೋಚನೆ, ಗುರಿ, ಬದ್ಧತೆ ಎಂತಹ ಸಮಸ್ಯೆಯನ್ನಾದರೂ ಎದುರಿಸುವ ಶಕ್ತಿ ನೀಡುತ್ತದೆ. ವಿದ್ಯಾರ್ಥಿಗಳು ಇವುಗಳನ್ನು ಬೆಲೆಸಿಕೊಂಡರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಬಹುದು ಎಂದು ನುಡಿದರು. 

ಎನ್‌ಸಿಸಿ ಕ್ಯಾಂಪ್‌ನಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ, ಹೊಂದಾಣಿಕೆ, ಮಾತುಗಾರಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಇದರ ಜತೆಗೆ ವಿದ್ಯಾಭ್ಯಾಸದಲ್ಲೂ ಆಸಕ್ತಿ ಹೊಂದಬೇಕು.  ಎಲ್ಲಾ ವಿದ್ಯಾರ್ಥಿಗಳು ಎನ್‌ಸಿಸಿಗೆ ಪ್ರವೇಶ ಪಡೆಯಬೇಕು. ನಾನು ನನ್ನ ಕಾಲೇಜು ದಿನಗಳಲ್ಲಿ ಎನ್‌ಸಿಸಿ ಕೆಡೆಟ್‌ ಆಗಿದ್ದು, ನಿಮ್ಮನ್ನು ಕಂಡಾಗ ನನ್ನ ಕಾಲೇಜಿನ ಸವಿ ನೆನಪು ಮರುಕಳಿಸುತ್ತಿದೆ ಎಂದರು.

ಎನ್‌ಸಿಸಿಯಿಂದ  ಕಲಿಯುವುದು ಬಹಳಷ್ಟಿದೆ:  ಎನ್‌ಸಿಸಿಯಿಂದ ವಿದ್ಯಾರ್ಥಿಗಳು ಕಲಿಯುವುದು ಬಹಳಷ್ಟಿದೆ. ವಿದ್ಯಾಭ್ಯಾಸದ ಜತೆಗೆ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಶಿಸ್ತು, ಸಮಯ ಪ್ರಜ್ಞೆ, ದೃಢ ಮನಸ್ಸು ಪಡೆಯಬಹುದು. ಇವುಗಳೇ ದೇಶ ರಕ್ಷಣೆಗೆ ಪ್ರಮುಖವಾದ ಅಸ್ತ್ರ.  ನಿಮ್ಮ ಜೀವನ ಸಮಯದ ಮೇಲೆ ನಿಂತಿದ್ದು, ಪ್ರತಿಯೊಂದು ನಿಮಿಷವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಹೇಳಿದರು. 

ಶಿಬಿರ ಯಶಸ್ವಿ: ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯದ ಡೆಫ್ಯೂಟಿ ಡೈರೆಕ್ಟರ್‌ ಜನರಲ್‌ ಬ್ರಿಗೆಡಿಯರ್‌ ಡಿ.ಎಂ.ಪೂರ್ವಿಮs…  ಮಾತನಾಡಿ, ತುಮಕೂರಿನಲ್ಲಿ ಮೊದಲ ಬಾರಿ ಮಹಿಳಾ ಎನ್‌ಸಿಸಿ ಶಿಬಿರ ನಡೆದಿದ್ದು, ಬಹಳ ಯಶಸ್ವಿಯಾಗಿದೆ. ಈ  ಶಿಬಿರದಲ್ಲಿ ಬೆಳಗಾಂ, ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ಒಟ್ಟು 270 ಮಹಿಳಾ ಕೆಡೆಟ್‌ಗಳು 10 ದಿನಗಳ ಶಿಬಿರದಲ್ಲಿ  ಉತ್ಸಾಹದಿಂದ  ಭಾಗವಹಿಸಿದ್ದಾರೆ.

ಮಹಿಳಾ ಕೆಡೆಟ್‌ಗಳು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಹೆಚ್ಚು ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತರಬೇಕು. ಇದಕ್ಕೆ ಕರ್ನಾಟಕ ಸರಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಲ್‌ ರಾಜೇಶ್‌ ವರ್ಮಾ, ಕರ್ನಲ್‌ ವೈ,ಎಸ್‌.ಪರಮಾರ್‌, ರಿಜಿಸ್ಟರ್‌ ಡಾ.ಟಿ.ಎ. ವೆಂಕಟೇಶ್‌, ಶಾಲಿನಿ ರಜನೀಶ್‌, ರಾಜೇಶ್‌ ಶರ್ಮಾ  ಮೊದಲಾದವರು ಇದ್ದರು. 

ನಗರದಲ್ಲಿ  ಹತ್ತು ದಿನಗಳಿಂದ ನಡೆದ  4ನೇ ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ಥಲ್‌ ಸೈನಿಕ್‌ ಬಾಲಕಿಯರ ಶಿಭಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗೆಳ 270 ಕ್ಕೂ ಹೆಚ್ಚು ಮಹಿಳಾ ಕೆಡೆಟ್‌ಗಳು ಭಾಗವಹಿಸಿ ಶಿಭಿರದಲ್ಲಿ ಅಂತರ್‌ಗೂಪ್‌ ಸ್ಪರ್ಧೆ, ಹಾಗೂ  ಸಂಯುಕ್ತ ವಾರ್ಷಿಕ ಶಿಭಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಶಿಸ್ತು, ಏಕತೆ, ದೇಶಪ್ರೇಮ, ಸಮಯಪ್ರಜ್ಞೆ, ಸಾಮಾಜಿಕ ಕಳಕಲೀ, ಪರಿಸರ ಕಾಳಜಿ, ಸಾಹಸ ಪ್ರವೃತ್ತಿಯಂತಹ ನಾಯಕತ್ವದ ಗುಣಗಳೊಂದಿಗೆ ದೇಶದ ಉತ್ತಮ ನಾಯಕರನ್ನಾಗಿಸವ ತರಬೇತಿಯನ್ನು ಈ ಶಿಬಿರದಲ್ಲಿ ನೀಡಲಾಗಿದೆ.

ಇದರ ಜೊತೆಗೆ ಎನ್‌ಸಿಸಿ ಉದ್ದೇಶ  ಮತ್ತು ಎನ್‌ಸಿಸಿ ವಿಷಯಗಳಾದ ಡ್ರಿಲ್‌, ಮ್ಯಾಪ್‌ ರೀಡಿಂಗ್‌, ಬಂದೂಕು ಬಳಕೆ ತರಬೇತಿ, ಟೆಂಟ್‌ ಪಿಚ್ಚಿಂಗ್‌, ಫೈರ್‌ ಫೈಟಿಂಗ್‌, ಟ್ರಾಫಿಕ್‌ ಸಿಗ್ನಲ್‌ ಮೊದಲಾದ ವಿಷಗಳೊಂದಿಗೆ ವ್ಯಕ್ತಿತ್ವ ವಿಕಸನದೊಂದಿಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. 

Trending videos

Back to Top