CONNECT WITH US  

ಮಧುಗಿರಿಯಲ್ಲಿ ರಾಯರ ಆರಾಧನೆ 

ಮಧುಗಿರಿ: ಪಟ್ಟಣದ  ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.27 ರಿಂದ 29 ರವರೆಗೆ  ಮೂರು ದಿನಗಳ ಕಾಲ ರಾಯರ 347ನೇ ಆರಾಧನೆಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಪ್ರತಿದಿನ ಬೆಳಿಗ್ಗೆ ನಿರ್ಮಾಲ್ಯ, ಪಂಚಾಮೃತ ಅಭಿಷೇಕ, ಪಾದಪೂಜೆ, ಪಾರಾಯಣ, ಅರ್ಚನೆ, ಕನಕಾಭಿಷೇಕ, ಹಸ್ತೋದಕ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಮಠದ ಅರ್ಚಕ ಹಾಗೂ ವಂಶಸ್ಥರಾದ ಎಂ.ಜಿ.ಶೇಷಗಿರಿ ಆಚಾರ್‌ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಗಳು ನಡೆಯಿತು. ಪ್ರತಿದಿನ ಸಾವಿರಾರು ಭಕ್ತಾಗಳು ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದು ಪುನೀತರಾದರು. ರಥೋತ್ಸವದಲ್ಲಿ ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಸೂರ್ಯಮಿತ್ರ ಸ್ಟೂಡಿಯೋದ ರಾಘವೇಂದ್ರ, ಬಾಬಣ್ಣ, ಶೇಷಣ್ಣ ಹಾಗೂ ಇತರರು ಇದ್ದರು.


Trending videos

Back to Top