ಸಮ್ಮೇಳನ ರದ್ದುಪಡಿಸಿ: ನೆರೆ ಸಂತ್ರಸ್ತರಿಗೆ ಹಣ ನೀಡಿ


Team Udayavani, Sep 1, 2018, 5:39 PM IST

tmk-1.jpg

ತುಮಕೂರು: ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನ ರದ್ದುಪಡಿಸಿ ನೆರೆ ಸಂತ್ರಸ್ತರ ನಿಧಿಗೆ ಹಣ ವರ್ಗಾಯಿಸುವಂತೆ ತಾ. ಕಸಾಪ ಮಾಜಿ ಅಧ್ಯಕ್ಷ ಆರ್‌.ವಿ.ಪುಟ್ಟಕಾಮಣ್ಣ ಒತ್ತಾಯಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡೀಸಿ ರಾಕೇಶ್‌ ಕುಮಾರ್‌ಗೆ ಮನವಿ ಸಲ್ಲಿಸಿ ಮಾತನಾಡಿ, ರಾಜ್ಯವು ಬರಗಾಲ ಮತ್ತು ಜಲಪ್ರಳಯದಂತಹ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಜನರು ಸಂಕಷ್ಟದಲ್ಲಿ ಸಿಲುಕಿ ರುವುದರಿಂದ 2018-19 ಸಾಲಿಗೆ ಉದ್ದೇಶಿಸಿರುವ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಕಸಾಪದ ಎಲ್ಲಾ ಸಮ್ಮೇಳವನ್ನು ರದ್ದು ಪಡಿಸಿ ನೆರೆ ಸಂತ್ರಸ್ತರ ನಿಧಿಗೆ ಹಣವನ್ನು ನೀಡಬೇಕು ಎಂದರು. 

ನೆರವಾಗಬೇಕು: ಕೊಡಗು, ಕರಾವಳಿ ಪ್ರದೇಶಗಳಲ್ಲಿ ಜನರು ವಾಸದ ಮನೆ ಜತೆಗೆ ಜೀವನೋಪಾಯಕ್ಕೆ ಇದ್ದ ತೋಟ, ತುಡಿಕೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅನೇಕ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಅವರಿಗೆ ನೆರವಾಗುವುದು ಕನ್ನಡ ತಾಯಿಗೆ ಸೇವೆ ಸಲ್ಲಿಸಿದಂತೆ, ಈ ಹೊತ್ತಿನಲ್ಲಿ ಕಸಾಪ ಸಮ್ಮೇಳನಗಳನ್ನು ನಡೆಸುವುದು ಸರ್ವತಾ ಸಾಧುವಲ್ಲ, ಅವರಿಗೆ ನೆರವಾಗುವುದು ಸಮ್ಮೇಳನಕ್ಕಿಂತ ಮಿಗಿಲಾದುದ್ದು ಎಂದು ತಿಳಿಸಿದರು.

ಶತಮಾನದಿಂದ ಕಸಾಪ ತನ್ನ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿದೆ. ಮಹಾರಾಜರು ಒಳ ಗೊಂಡಂತೆ ಅನೇಕ ಚಿಂತಕರು, ವಿದ್ವಾಂಸರು, ಸಾಹಿತಿಗಳು, ಲೇಖಕರು ಇದೂವರೆಗೂ ಕಸಾಪ ಅಧ್ಯಕ್ಷರಾಗಿ ಕಸಾಪ ನಿಬಂಧನೆಗಳಿಗೆ ಅನುಗುಣವಾಗಿ ಕನ್ನಡ ಸಾಹಿತ್ಯ ಸೇವೆ ಮಾಡುತ್ತಾ ಬಂದಿದೆ.
 
ಗೌರವಯುತ ಜವಾಬ್ದಾರಿಯನ್ನು ಅಧಿಕಾರವೆಂದು ತಿಳಿದು 3 ವರ್ಷಕ್ಕೆ ಇದ್ದ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕಾರಿ ಸಮಿತಿಯನ್ನೇ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
 
ರಾಜ್ಯ ಸಹಕಾರಿ ಸಂಘಗಳ ನೋಂದಣಿ ಸಂಸ್ಥೆ ಪರಿಷತ್ತಿನ ಅಧ್ಯಕ್ಷರ ಅವಧಿ ಹೆಚ್ಚಿಸಬೇಕೆಂಬ ಪ್ರಸ್ತಾವನೆಯನ್ನು ಏಕಾಏಕಿ ತಿರಸ್ಕರಿಸಿ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ. ಆದೇಶಕ್ಕೆ ಬೆಲೆಕೊಡದೆ ಪರಿಷತ್ತಿನ ರಾಜ್ಯಾಧ್ಯಕ್ಷರು ಹೈಕೋರ್ಟ್ಗೆ ಮೇಲ್ಮನವಿಸಲ್ಲಿಸಲು ಚಿಂತನೆ ನಡೆಸಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಸ್ವಾರ್ಥಕ್ಕಾಗಿ ಪರಿಷತ್ತನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಅಧ್ಯಕ್ಷರ ಈ ಧೋರಣೆ ಖಂಡನೀಯ ಎಂದು ಹೇಳಿದರು.

ಮೂರು ಲಕ್ಷದ ಹನ್ನೆರಡು ಸಾವಿರ ಕಸಾಪ ಸದಸ್ಯರನ್ನು ಮತ್ತು ಆರು ಕೋಟಿ ಕನ್ನಡಿಗರನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಮಾಡಿರುವುದು ಸರಿಯಲ್ಲ. ಇಷ್ಟಕ್ಕೂ ಡಾ.ಮನುಬಳಿಗಾರ್‌ ಅವರನ್ನು ಕಸಾಪ ಸದಸ್ಯರು ಆಯ್ಕೆ ಮಾಡಿರುವುದು 3 ವರ್ಷದ ಅವಧಿಗೆ ಮಾತ್ರ. ಅಧ್ಯಕ್ಷರ ಅವಧಿ ಮಾರ್ಚ್‌ 2019ಕ್ಕೆ ಕೊನೆಗೊಳ್ಳುವುದರಿಂದ ಪರಿಷತ್ತಿನ ನಿಯಮಾನುಸಾರ 3 ತಿಂಗಳು ಮುಂಚಿತವಾಗಿ ಡಿಸೆಂಬರ್‌ 2018ಕ್ಕೆ ಆಡಳಿತಾಧಿಕಾರಿ ನೇಮಿಸಿ ಕಸಾಪ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಮಾರ್ಚ್‌ 2019ಕ್ಕೆ ಚುನಾವಣೆ ನಡೆಸಿ ರಾಜ್ಯ ಮತ್ತು ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು. 

ಟಾಪ್ ನ್ಯೂಸ್

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

1-aaaa

2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.