ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ;ಗೂಬೆ ಕತ್ತರಿಸಿ ರಕ್ತಹಾರ
Team Udayavani, Sep 02, 2018, 3:12 PM IST

ಸಾಂಧರ್ಭಿಕವಾಗಿ ಬಳಸಿಕೊಳ್ಳಲಾದ ಗೂಬೆ ಚಿತ್ರ
ತುಮಕೂರು: ಮಧುಗಿರಿಯ ದೊಡ್ಡಹಟ್ಟಿ ಯಲ್ಲಿ ಸ್ಥಳೀಯ ಸಂಸ್ಥೆಗೆ ಮತದಾನ ನಡೆದ ಬೆನ್ನಲ್ಲೇ, ಫಲಿತಾಂಶ ಪ್ರಕಟವಾಗುವ ಮನ್ನ ಕಾಂಗ್ರೆಸ್ ನಾಯಕರೊಬ್ಬರ ಮನೆ ಮುಂದೆ ವಾಮಾಚಾರ ಮಾಡಲಾಗಿದೆ.
ಕಾಂಗ್ರೆಸ್ ಮುಖಂಡ ಅಬ್ದುಲ್ ಖುದ್ದೂಸ್ ಅವರ ಮನೆ ಮುಂದೆ ಭಾನುವಾರ ಬೆಳಗ್ಗೆ ಗೂಬೆಯ ಕತ್ತರಿಸಿದ ಕತ್ತು ಪತ್ತೆಯಾಗಿದ್ದು ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ.
ಪುರಸಭೆ ವಾರ್ಡ್ ನಂ ಬರ್ 12 ರ ಅಭ್ಯರ್ಥಿ ಶೋಭಾ ರಾಣಿ ಪರ ಪ್ರಚಾರ ನಡೆಸಿದ ವೈಷಮ್ಯದಲ್ಲಿ ಖುದ್ದೂಸ್ ಅವರ ಮನೆ ಮುಂದೆ ವಿಪಕ್ಷದ ಅಭ್ಯರ್ಥಿಗಳು ವಾಮಾಚಾರ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.