CONNECT WITH US  

ಕುಮಾರಸ್ವಾಮಿ ಸರಕಾರ ರೈತಪರ

ಮಧುಗಿರಿ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ರಾಜ್ಯದ ರೈತರ ಹಿತ ಕಾಯುತ್ತಿದೆ. 49 ಕೋಟಿ ರೂ. ಸಾಲ ಮನ್ನಾ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ತಾಲೂಕಿನ ಪ‌ುರವರ ಹೋಬಳಿಯ ಕೊಂಡವಾಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಶೀತಲೀಕರಣ (ಬಿ.ಎಂ.ಸಿ.) ಕೇಂದ್ರದ ಕಟ್ಟಡ ಹಾಗೂ ಸರಕಾರಿ ಶಾಲಾ ಕಟ್ಟಡ ಮತ್ತು ಅಂಗನವಾಡಿ ಕಟ್ಟಡ‌ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಈಗಾಗಲೇ ಸಹಕಾರ ಸಂಘಗಳಲ್ಲಿ ಇರುವ 10 ಸಾವಿರ ಕೋಟಿ ರೂಗಳ ಸಾಲ ಮನ್ನಾ ಮಾಡಲಾಗಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರಮೋದಿ ರಾಜ್ಯದ ರೈತರ ಸಾಲ ಮನ್ನಾ ಮಾಡಲು ಯಾವುದೇ ನೆರವು ನೀಡಲಿಲ್ಲ ಎಂದು ಕಿಡಿಕಾರಿದರು.

ತುಮುಲ್‌ (ತುಮಕೂರು ಹಾಲು ಒಕ್ಕೂಟ) ರೈತ ಸಮುದಾಯಕ್ಕೆ ವರದಾನವಾಗಿದೆ ಎಂದರು. ರಾಜ್ಯದಲ್ಲಿ ಪ್ರತಿದಿನ 76 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಅಷ್ಟೂ ಹಣ ರೈತರಿಗೆ ಸಂದಾಯವಾಗುತ್ತಿದೆ ಎಂದರು. ಕೊಂಡವಾಡಿ ಚಂದ್ರಶೇಖರ್‌ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾದ ನಂತರ ನಮ್ಮ ಜಿಲ್ಲೆಯಲ್ಲಿ 105 ಭಾಗಗಳಲ್ಲಿ ಶೀತಲೀಕರಣ ಕೇಂದ್ರಗಳನ್ನು ಆರಂಭಿಸಿರುವುದು ಶ್ಲಾಘನೀಯ ಎಂದರು.

ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ತುಮುಲ್‌ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್‌, ವ್ಯವಸ್ಥಾಪಕ ನಿರ್ದೇಶಕ ಮುನೇಗೌಡ, ಜಿ.ಪಂ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆಂಚಮಾರಯ್ಯ, ಪುರವರ ಜಿ.ಪಂ ಸದಸ್ಯ ಕೊಂಡವಾಡಿ ತಿಮ್ಮಯ್ಯ, ತಾ.ಪಂ ಅದ್ಯಕ್ಷೆ ಇಂದಿರಾ ದೇನಾನಾಯ್ಕ,

ಕೊಂಡವಾಡಿ ಗ್ರಾ.ಪಂ ಅಧ್ಯಕ್ಷೆ ಮಂಜುಳಾಅಶ್ವ‌ತ್ಥನಾರಾಯಣ್‌, ಪ‌ುರವರ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಮುಖಂಡ‌ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ನಿರ್ದೇಶಕ ಹೆಚ್‌.ಸಿ.ಬೆ„ರಪ್ಪ, ತುಮುಲ್‌ ಮಧುಗಿರಿ ವ್ಯವಸ್ಥಾಪಕರಾದ ಶಂಕರ್‌ನಾಗ್‌, ಗಿರೀಶ್‌, ದಿಲೀಪ್‌, ಡಾ.ದೀಕ್ಷಿತ್‌, ಶ್ರೀರಂಗ ಮುಂತಾದವರು ಇದ್ದರು.


Trending videos

Back to Top