ಬ್ಯಾಂಕಿಗೆ ನೀರವ್‌ ನಾಮ,ಹೀಗಿದೆ ಟ್ವೀಟರ್‌ ಡ್ರಾಮ

Team Udayavani, Feb 24, 2018, 4:20 AM IST

Twitter-Land.jpg

ಸೌರಭ್‌ ಪಂತ್‌
ನೀರವ್‌ ಮೋದಿ ಮತ್ತು ವಿಜಯ್‌ ಮಲ್ಯ ಪ್ರಕರಣಗಳು ನಮಗೆ , ಅಂದರೆ- ಜನಸಾಮಾನ್ಯರಿಗೆ ಕಲಿಸುತ್ತಿರುವ ಪಾಠವೇನು? ಯಾವುದೇ ಕಾರಣಕ್ಕೂ 30-50 ಲಕ್ಷ ಗೃಹ ಸಾಲ ಪಡೆಯಬೇಡಿ. ಆಗ ಬ್ಯಾಂಕಿಗೆ ಬಡ್ಡಿ ಸಮೇತ ಸಾಲ ಹಿಂದಿರುಗಿಸಬೇಕಾಗುತ್ತದೆ. ಅದರ ಬದಲು 3000-5000 ಕೋಟಿ ರೂಪಾಯಿ ಸಾಲ ಪಡೆಯಿರಿ. ಸಾಲ ಮಾಫಿ! 

ರಾಧಾ
ಸಾಮಾನ್ಯ ಭಾರತೀಯನ ಚಿಂತೆ…
1) ಕ್ರಿಕೆಟ್‌ನಲ್ಲಿ ಹಣ ತೊಡಗಿಸಿದರೆ ಲಲಿತ್‌ ಮೋದಿ ತೆಗೆದುಕೊಳ್ಳುತ್ತಾನೆ
2) ಬ್ಯಾಂಕಲ್ಲಿ ಹಣವಿಟ್ಟರೆ ನೀರವ್‌ ಮೋದಿ ತೆಗೆದುಕೊಳ್ಳುತ್ತಾನೆ..
3) ಮನೆಯಲ್ಲಿ ಹಣವಿಟ್ಟರೆ ನರೇಂದ್ರ ಮೋದಿ ತೆಗೆದುಕೊಳ್ಳುತ್ತಾನೆ!

ರಮೇಶ್‌ ಶ್ರೀವತ್ಸ್
ನೀರವ್‌ ಮೋದಿ ಹಗರಣ ಪ್ರೇಮಿಗಳ ದಿನದಂದೇ ಜಗಜ್ಜಾಹೀರಾಗಿದ್ದು ಸರಿಯಾಗಿಯೇ ಇದೆ. ಎಷ್ಟಿದ್ದರೂ ಅದು ಔಟಖೀ ದಿನ!

ಶಿರಿಶ್‌ ಕುಂದೆರ್‌
ಹಿಂದಿನ ದಿನಗಳು ನೆನಪಿವೆಯೇ? ಆಗೆಲ್ಲ ಬ್ಯಾಂಕ್‌ಗಳನ್ನು ಲೂಟಿ ಮಾಡುವವರನ್ನು “ಕಳ್ಳರು’ “ದರೋಡೆಕೋರರು’ ಎನ್ನುತ್ತಿದ್ದರು. ಈಗ ಅವರನ್ನೆಲ್ಲ “ಉದ್ಯಮಿಗಳು’ ಮತ್ತು “ಕೋಟ್ಯಧಿಪತಿಗಳು’ ಎನ್ನುತ್ತಾರೆ. 

ರಾಮ್‌ ಸುಬ್ರಮಣ್ಯಂ
ನೀರವ್‌ ಮೋದಿ, ವಿಜಯ್‌ ಮಲ್ಯರಿಗೆ ಶುಭೋದಯ. ಉಳಿದ ಭಾರತೀಯರು ಅಚ್ಛೇದಿನದ ಕನಸು ಕಾಣುತ್ತಾ ಕುಳಿತುಕೊಳ್ಳಿ!

ಮೈಡ್ಲಿಕ್ಲಾಸಿಕ್‌
ಈ ಮೋದಿ ಅನ್ನುವ ಹೆಸರಿನವರಿಗೆ ಏನಾಗಿದೆಯೋ ತಿಳಿಯದು. ಇವರೆಲ್ಲ ನಮ್ಮ ಹಣ ತೆಗೆದುಕೊಂಡು ವಿದೇಶಗಳಿಗೆ ಹೋಗುತ್ತಾರೆ! 

ಅತುಲ್‌ ಖಾತ್ರಿ
2018ರ ನವರಾತ್ರಿ ವೇಳೆಯಲ್ಲಿ ಇದೇ ಮಾಧ್ಯಮದ ಮಂದಿ ನೀರವ್‌ ಮೋದಿ ಮತ್ತವರ ಮಡದಿ ನೂಜೆರ್ಸಿಯಲ್ಲಿ ದಾಂಡಿಯಾ ಆಡುವುದನ್ನು ಅತ್ಯುತ್ಸಾಹದಿಂದ ಬಿತ್ತರಿಸುತ್ತವೆ ನೋಡುತ್ತಿರಿ. ಬೇಕಿದ್ದರೆ ನೂರು ರೂಪಾಯಿ ಬೆಟ್‌ ಕಟ್ಟಲು ಸಿದ್ಧವಿದ್ದೀರಾ?

ಆರ್‌.ಕೆ.ರಾವ್‌
ಕಸ್ಟಮರ್‌ ಕೇರ್‌: ನಮಸ್ಕಾರ ಸಾರ್‌. 
ನಾವು ಬ್ಯಾಂಕಿಂದ ಕಾಲ್‌ ಮಾಡ್ತಿದೀವಿ. 
ನಿಮ್ಮ ಜೊತೆ ನಾವು ಲೋನ್‌ ಬಗ್ಗೆ ಮಾತಾಡºಹುದಾ? 
ನಾನು: ಅಯ್ಯೋ ನನಗೆ ಸಾಲ ಬೇಡ ರೀ…
ಕಸ್ಟಮರ್‌ ಕೇರ್‌: ಸಾರ್‌ ನಾವು ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಂದ ಮಾತಾಡ್ತಿರೋದು.  ನಿಮಗಲ್ಲ, ನಮಗೆ ಸಾಲ ಬೇಕಿತ್ತು!

ತೂಜಾನೇನಾ 
ಮುಂದಿನ ತಿಂಗಳು ನನ್ನ ಪತ್ನಿಯ ಜೊತೆ ಲಂಡನ್‌ಗೆ ಹೊರಟಿದ್ದೇನೆ. ಎಲ್ಲಿ ನನ್ನ ವೀಸಾ ರಿಜೆಕ್ಟ್ ಆಗುತ್ತೋ ಅಂತ ಭಯ ಶುರುವಾಗಿದೆ. ಯಾಕಂದ್ರೆ ನಾನು ಇದುವರೆಗೂ ಸಾಲ ಮಾಡಿ ಉದ್ದೇಶಪೂರ್ವಕ ಸುಸ್ತಿದಾರನಾಗಿಲ್ಲ! 

ಬಂಕಿಂಸುಂದರ್‌
ಈ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ಕೆಲಸ ಏನು? ಸಾವಿರಾರು ಕೋಟಿ ರೂಪಾಯಿ ಹಗರಣಗಳಾದ ನಂತರ ಎಚ್ಚೆತ್ತು ಕುಳಿತು ಅವಸರವಾಗಿ ಸಭೆ ನಡೆಸೋದೇ ಅದರ ಕೆಲಸವೇ? 

ಅಮೃತ್‌ ಸಿಂಗ್‌
ಪಾಪ, ಒಂದೆಡೆ ನಮ್ಮ ದೇಶದಲ್ಲಿ ಪ್ರತೀ ವರ್ಷವೂ ರೈತರು ಸಾಲ ತೀರಿಸಲಾಗದೆ, ಬ್ಯಾಂಕುಗಳ 
ಕಾಟ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಉದ್ಯಮಿಗಳು ಬ್ಯಾಂಕಿನಿಂದ ಸಾಲದ ರೂಪವಾಗಿ ಪಡೆದ-ಲಪಟಾಯಿಸಿದ ಹಣದಲ್ಲೇ ಅದ್ದೂರಿ ಜೀವನ ನಡೆಸುತ್ತಿದ್ದಾರೆ!

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.