CONNECT WITH US  

ರಾಷ್ಟ್ರಪತಿಯಾಗಿ ಕೋವಿಂದ್‌ ಆಯ್ಕೆ: ಏನಂತಾರೆ ಜನ?

ಅಭಿನವ್‌ ಪ್ರಕಾಶ್‌
19 ರಾಜ್ಯಗಳಲ್ಲಿ ಅಡ್ಡಮತದಾನ ನಡೆದಿದೆ. ವಿರೋಧ ಪಕ್ಷದ ಅನೇಕ ನಾಯಕರು ಕಾಂಗ್ರೆಸ್‌ ಅಭ್ಯರ್ಥಿಯನ್ನು ತ್ಯಜಿಸಿ ರಾಮ್‌ನಾಥ್‌ ಕೋವಿಂದ್‌ರಿಗೆ ಮತ ಹಾಕಿದ್ದಾರೆ. ಇವರಲ್ಲಿ ಕಾಂಗ್ರೆಸ್‌ ಶಾಸಕರೂ ಇದ್ದಾರೆ!

 ರಿಷಿ ಬಾಗ್ರಿ
ರಾಮ್‌ನಾಥ್‌ ಕೋವಿಂದ್‌-702644 ಮತಗಳು. ಮೀರಾ ಕುಮಾರ್‌-367314 ಮತಗಳು. ಕೋವಿಂದ್‌ಗೆ 65 ಪ್ರತಿಶತಕ್ಕಿಂತಲೂ ಹೆಚ್ಚಿನ ಮತಗಳು ಸಿಕ್ಕಿವೆ. ಬಿಜೆಪಿಯನ್ನು "31 ಪರ್ಸೆಂಟ್‌ ಪಾರ್ಟಿ' ಎಂದು ಕರೆಯುತ್ತಿದ್ದ ಪ್ರಗತಿಪರರಿಗೆ ಇದು ದೊಡ್ಡ ಹೊಡೆತ. 

ಪಿಎಚ್‌ಡಿಇನ್‌ಬಕ್ಚೋದಿ 
"ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಪತ್ರಗಳನ್ನೇಕೆ ಬಳಸಿದ್ದು? ಇವಿಎಂ ಬಳಸಬಹುದಿತ್ತಲ್ಲವೇ? ಇದೆಲ್ಲ ಮೋದೀಜೀ ಅವರ ಕುತಂತ್ರ' ಎಂದು ಕೇಜ್ರಿವಾಲ್‌ ಇನ್ನೂ ಹೇಳಿಲ್ಲವಾ? 

ರಾಹುಲ್‌ ರೋಷನ್‌
ರಾಮ್‌ನಾಥ್‌ ಕೋವಿಂದ್‌ಗೆ ದೆಹಲಿಯಿಂದ 6 ಮತಗಳು ಹೋಗಿವೆ. 3 ಬಿಜೆಪಿ, 1 ಅಕಾಲಿ, 1 ಕಪಿಲ್‌ ಮಿಶ್ರಾ. ಇನ್ನೊಂದು ಮತ ಯಾರದ್ದು ಎಂದು ಕೇಜ್ರಿವಾಲ್‌ ನಿದ್ದೆಗೆಡಿಸಿಕೊಂಡರೆ ಕಷ್ಟ.  

ಮದನ್‌ ಚಿಕ್ನಾ
ಮೀರಾ ಕುಮಾರ್‌: ಬೈಠ್ ಜಾಯಿಯೇ ಬೈಠ್.. ಜಾಯಿಯೇ(ಕೂತ್ಕೊಳ್ಳಿ ಕೂತ್ಕೊಳಿ)
ರಾಮ್‌ನಾಥ್‌ ಕೋವಿಂದ್‌ ರಾಷ್ಟ್ರಪತಿ ಕುರ್ಚಿಯ ಮೇಲೆ ಕೂರುತ್ತಾ: "ಸರಿ, ಕೂತ್ಕೊಂಡೆ ನೋಡಮ್ಮ!'

ಸಿದ್ದಿಕಿಶಾಹಿದ್‌
ಕಾಂಗ್ರೆಸ್ಸಿಗರು ಅಡ್ಡಮತದಾನ ಮಾಡಿರುವುದು ರಾಹುಲ್‌ ಗಾಂಧಿಯವರ ಪಾಲಿನ ಹೊಸ ಕಪ್ಪು ಚುಕ್ಕೆಯಿದ್ದಂತೆ. ಕಾಂಗ್ರೆಸ್‌ ಪಕ್ಷ ಈಗಲಾದರೂ ಎಚ್ಚೆತ್ತುಕೊಳ್ಳಲಿ. 

ಅಂಕಿತ್‌ ಸಿಂಗ್‌
ಆತ್ಮಸಾಕ್ಷಿಗೆ ಕಿವಿಗೊಟ್ಟು ಮತದಾನ ಮಾಡಿ ಎಂದು ಸೋನಿಯಾ ಗಾಂಧಿ ಕರೆಕೊಟ್ಟಿದ್ದರು. ಅವರ ಮಾತಿಗೆ ಕಿವಿಗೊಟ್ಟ ಕೆಲವು ಕಾಂಗ್ರೆಸ್‌ ಶಾಸಕರು ಕೋವಿಂದ್‌ಗೆ ಮತ ಹಾಕಿದ್ದಾರೆ. 

ಕುಮಾರ್‌ಸೀನು
ಬಡ ಕುಟುಂಬದಿಂದ ಮೇಲೇರಿ ರೈಸೀನಾ ಹಿಲ್ಸ್‌ವರೆಗಿನ ಪಯಣವಿದು! ರಾಮ್‌ನಾಥ್‌ ಕೋವಿಂದ್‌ರ ಜೀವನ ಯಾತ್ರೆಯೇ ರೋಚಕವಾದದ್ದು. 

ಇಂಡೋಪಾಲಿಟಿ
ರಾಮ್‌ನಾಥ್‌ ಕೋವಿಂದ್‌ ದೇಶವಾಸಿಗಳಿಗೆ, ಜನಪ್ರತಿನಿಧಿಗಳಿಗೆ ಧನ್ಯವಾದ ಅರ್ಪಿಸಿದರೆ, ಮೀರಾ ಕುಮಾರ್‌ ಸೋನಿಯಾ ಗಾಂಧಿಗೆ ಮತ್ತು ಪಕ್ಷಗಳಿಗೆ ಧನ್ಯವಾದ ಅರ್ಪಿಸುತ್ತಾರೆ!

ಸುಜಿತ್‌ಸಿಯಾಲ್‌
ರಾಮ್‌ನಾಥ್‌ ಕೋವಿಂದ್‌ ಅಭ್ಯರ್ಥಿಯಾಗಿ ಆಯ್ಕೆಯಾದಾಗ ಮಾಧ್ಯಮಗಳೆಲ್ಲ ಯಾರು ಈ ಕೋವಿಂದ್‌ ಎಂದು ಹಂಗಿಸಿದವು. ನಂತರ ಅವರನ್ನು ದಲಿತ ನಾಯಕ ಎಂದು ಕರೆದವು. ಈಗ ಅವರನ್ನು ಆರ್‌ಎಸ್‌ಎಸ್‌-ಬಿಜೆಪಿಯ ರಾಷ್ಟ್ರಪತಿ ಎನ್ನುತ್ತಿವೆ!

ಸುಜಿತ್‌ಸಿಯಾಲ್‌
ಬಿಜೆಪಿಯೇನಾದರೂ ರಾಮ್‌ನಾಥ್‌ಅವರ‌ನ್ನು ಆಯ್ಕೆ ಮಾಡಿರಲಿಲ್ಲ ಅಂದರೆ, ಕಾಂಗ್ರೆಸ್‌ ಮೀರಾರನ್ನು ಕಣಕ್ಕಳಿಸುತ್ತಿತ್ತೇ? ಈ ವರ್ಷದ ಮಿಲಿಯನ್‌ ಡಾಲರ್‌ ಪ್ರಶ್ನೆಯಿದು. ಉತ್ತರವೂ ನಮಗೆ ಗೊತ್ತಿದೆ!


Trending videos

Back to Top