CONNECT WITH US  

ಬಿಹಾರ ರಾಜಕೀಯ ಟ್ವಿಸ್ಟ್‌: ಟ್ವೀಟಿಗರು ಏನಂತಾರೆ?

   ಆಫೀಸ್‌ಆಫ್ಪಪ್ಪು                             
ನಿತೀಶ್‌ಕುಮಾರ್‌ ಮತ್ತೆ ಮೋದಿಯವರತ್ತ ಬರಬಹುದಾದರೆ ನೀನೇಕೆ ನನ್ನ ಬಳಿ ಬರಲಾರೆ ಓ ನನ್ನ ಮಾಜಿ ಪ್ರೇಯಸಿಯೇ? 

  ಸರ್‌ ರವೀಂದ್ರ ಜಡೇಜಾ 
ಇಲ್ಲಿಯವರೆಗೂ ಪ್ರಗತಿಪರರ ಕಣ್ಣಿಗೆಲ್ಲ ನಿತೀಶ್‌ ಕುಮಾರ್‌ ಅವರೇ ಪ್ರಧಾನಿ ಹುದ್ದೆಗೆ ಅರ್ಹ ವ್ಯಕ್ತಿಯಾಗಿದ್ದರು. ಈಗ ನಿತೀಶ್‌ ಮೋದಿ ಭಕ್ತ, ಅವಕಾಶವಾದಿಯಂತೆ! 

  ರಮೇಶ್‌ ಶ್ರೀವತ್ಸ
ನಿತೀಶ್‌ ಕುಮಾರ್‌ ಮಹಾಗಠ ಬಂಧನವನ್ನು ತೊರೆಯುವ ನಿರ್ಧಾರ ಕೇಳಿ ಲಾಲೂ ಏನಂದರು? "ನಿತೀಶ್‌, ನೀನು "ಮಹಾಘಠಬಂ' ಇಟ್ಕೊ. ನಾನು "ಧನ' ಇಟ್ಕೊàತೇನೆ!'

  ಕವಲ್‌ಪ್ರೀತ್‌ಕೌರ್‌
ನಿತೀಶ್‌ ಕುಮಾರ್‌ ಇವತ್ತು ಬಹಳ ಬ್ಯುಸಿ ಇದ್ದಾರೆ. ಮೋದಿ ಸರ್ಕಾರವನ್ನು ಕೋಮುವಾದಿಯೆಂದು ಟೀಕಿಸಿ ಬರೆದಿದ್ದ ಟ್ವೀಟ್‌ಗಳನ್ನೆಲ್ಲ ಅವರು ಡಿಲೀಟ್‌ ಮಾಡಬೇಕಲ್ಲ!  

  ರಾಜೀವ್‌ಸಿ
ಜುಲೈ 22: ನಿತೀಶ್‌ ಕುಮಾರ್‌ಗೆ ಮನವರಿಕೆ ಮಾಡಿಸಲು ಅವರನ್ನು ರಾಹುಲ್‌ ಭೇಟಿಯಾದರು. 
ಜುಲೈ 26: ನಿತೀಶ್‌ ಕುಮಾರ್‌ಗೆ ಮನವರಿಕೆ ಆಯಿತು!

  ಸಿಂಪ್ಲಿ ಇರ್ಫಾನ್‌
ನಿತೀಶ್‌ ಯಾವಾಗಲೂ ಹೊಸ ಮನೆ ಹುಡುಕುತ್ತಲೇ ಇರುತ್ತಾರೆ. ರೆಂಟ್‌ ಅಗ್ರಿಮೆಂಟ್‌ 2019ರವರೆಗೂ ಇದೆಯಂತೆ. ರಿನಿವಲ್‌ ಸಮಯದಲ್ಲಿ ಸಮಸ್ಯೆ ಹುಟ್ಟಿಕೊಳ್ಳಬಹುದು! 

  ಶಾಯರ್‌ಕ್ಯಾಸಮ್‌
ಅದ್ಯಾರಪ್ಪಾ ಅದು, ನಿತೀಶ್‌ ಕುಮಾರ್‌ ಅವರನ್ನ ರಾಜ ನಿತೀಶ್‌ ಕುಮಾರ್‌ ಅಂತ ಕರೀತಾ ಇರೋದು?

  ಚಿಕನ್‌ ಬಿರ್ಯಾನಿ
ನಾನು ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದಾಗ: ನಿತೀಶ್‌ ರಾಜೀನಾಮೆ ನೀಡಿದರು. 
ಹೆಬ್ಟಾಳ ಫ್ಲೈಓವರ್‌ಗೆ ಬಂದಾಗ: ಮಹಾ ಘಠಬಂಧನ್‌ ಮುರಿದಿತ್ತು. 
ಸಿಲ್ಕ್ಬೋರ್ಡ್‌ ತಲುಪೋಷ್ಟರಲ್ಲಿ: ನಿತೀಶ್‌ ಸಿಎಂ ಸ್ಥಾನಕ್ಕೆ ಕಚೀìಫ‌ು ಹಾಕಿದರು.
ಮನೆಗೆ ಹೋದೆ: ನಿತೀಶ್‌ ಸಿಎಂ ಆದರು!

  ಭಕ್‌ಸಾಲಾ
ಲಾಲೂ ಪ್ರಸಾದ್‌ ಯಾದವ್‌ ಅವರು ಮೊನ್ನೆವರೆಗೂ ಸರ್ಜಿಕಲ್‌ ಸ್ಟ್ರೈಕ್‌ ಮೇಲೆ ಚಟಾಕಿ ಹಾರಿಸುತ್ತಿದ್ದರು. ಈಗ ಸರ್ಜಿಕಲ್‌ ಸ್ಟ್ರೈಕ್‌ನ ನಿಜ ಅರ್ಥ ಅವರಿಗೆ ತಿಳಿದಿರಬಹುದು! 

  ಹಿಂದೂಬಾಯ್‌
ಮಕ್ಕಳು ಮುರಿಯುತ್ತಿದ್ದಾರೆ ಮನೆ. ಉತ್ತರಪ್ರದೇಶದಲ್ಲಿ ಅಖೀಲೇಶ್‌. ಬಿಹಾರದಲ್ಲಿ ತೇಜಸ್ವಿ ಮತ್ತು ಇಡೀ ದೇಶದಲ್ಲಿ ರಾಹುಲ್‌ ಗಾಂಧಿ! 

  ವೀರ್‌ಸಾಂಘವಿ 
ಈ ಪ್ರಗತಿಪರರ ಮನಸ್ಸೇ ನನಗೆ ಅರ್ಥವಾಗೋಲ್ಲ. ಮೊದಲು ನಿತೀಶ್‌ಗೆ ಇಲ್ಲದ ಮೌಲ್ಯಗಳನ್ನೆಲ್ಲ ಕಟ್ಟಿಬಿಟ್ಟರು. ಈಗ ನಿತೀಶ್‌ ಬಿಜೆಪಿ ಜೊತೆ ಕೈಜೋಡಿಸಿದ್ದೇ ಜಾತ್ಯತೀತತೆಯ ವೈಫ‌ಲ್ಯ ಎನ್ನುತ್ತಿದ್ದಾರೆ. 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

Trending videos

Back to Top