CONNECT WITH US  

ರಾಜ್ಯಸಭೆ ಚುನಾವಣೆ ನೋಡಿ ಏನಂದ್ರು ಟ್ವೀಟರ್‌ ಮಂದಿ?

 ಸಹೀಲ್‌ ರಾವಲ್‌ 
ಒಂದು ರಾಜ್ಯಸಭೆ ಸೀಟಿಗೆ ಇಷ್ಟೆಲ್ಲ ತಲೆ ಕೆಡಿಸ್ಕೊಳ್ಳೋರು ದೇಶದ ಬಗ್ಗೆ ಸ್ವಲ್ಪ ತಲೆ ಕೆಡಿಸ್ಕೊಳ್ತಿದ್ರೆ ಎಂದೋ ಉದ್ಧಾರ ಆಗ್ತಿತ್ತು!

 ಪುಲಿಕಲಿ 
ರಾಜ್ಯಸಭೆ ಚುನಾವಣೆ ನೋಡೋಕೆ ಎಂದೂ ಈ ಪಾಟಿ ನಿದ್ದೆಗೆಟ್ಟ ನೆನಪು ನನಗೆ ಬರ್ತಾನೇ ಇಲ್ಲ!

 ರೋಹಿತ್‌ ಸಿನ್ಹಾ 
ಎರಡು ಅಚ್ಚರಿಗಳು: ಗುಜರಾತ್‌ ರಾಜ್ಯಸಭೆ ಮತ ಎಣಿಕೆಗೆ ಇಷ್ಟು ಕಷ್ಟ ಆಯ್ತು, ಇದಕ್ಕೂ ಮೊದಲು ಆರ್‌ಬಿಐಗೆ ನೋಟು ಎಣಿಸೋದಿಕ್ಕೆ ಎಷ್ಟು ಕಷ್ಟ ಆಯೊ¤à?

 ರಿಶಿ ಗೋಡ್ಸೆ
ನೋಡಿ ಕಾಲದ ಮಹಿಮೆ, ಕಾಂಗ್ರೆಸ್ಸಿಗರು ಅಕ್ಷರಶಃ ನಮ್ಮ ಶಾಸಕರ ಮತಗಳನ್ನು ಅನೂರ್ಜಿತಗೊಳಿಸಿ ಅಂತ ಗೋಳಿಟ್ರಾ!

 ಗೌರವ್‌ ಸಕಾಲ್‌ 
ಅಮಿತ್‌ ಶಾ ಎಂಬ ಮನುಷ್ಯ ಇಲ್ಲದೇ ಇರಿ¤ದ್ರೆ, ರಾಜ್ಯಸಭೆ ಚುನಾವಣೆ ಇಷ್ಟು ಇಂಟ್ರೆಸ್ಟಿಂಗ್‌ ಆಗ್ತಿರ್ಲಿಲ್ಲ

 ರೇಬಿಸ್‌
ರಾಜ್ಯಸಭೆ ಚುನಾವಣೆ ಹೈಲೈಟ್ಸ್‌: ರಾಹುಲ್‌ ಗಾಂಧಿಗೆ ವೈರಲ್‌ ಫಿವರ್‌, ಸಾಮಾಜಿಕ ತಾಣಗಳಲ್ಲಿ ಅಮಿತ್‌ ಶಾ ವೈರಲ್‌!

 ಅಭಿಜಿತ್‌ ಮಜುಂದಾರ್‌
ರಾಜ್ಯಸಭೆ ಚುನಾವಣೆಯಿಂದ ಅತಿಹೆಚ್ಚು ಸಂಕಟ ಅನುಭವಿಸಿದ್ದೆಂದರೆ ದಿನಪತ್ರಿಕೆಗಳು! ಅದೆಷ್ಟೂ ಅಂತ ಡೆಡ್‌ಲೈನ್‌ ಮುಂದೆ ತಳ್ಳೋಕ್ಕೆ ಆಗುತ್ತೆ ಸ್ವಾಮಿ?

 ನಿಖೀಲ್‌ಸುತ್ರಾ
ಕೆಲವೊಮ್ಮೆ ದೊಡ್ಡ ಕದನಗಳನ್ನು ಗೆಲ್ಲುವುದಕ್ಕೆ ಚಿಕ್ಕ ಸೋಲುಗಳು ಅನಿವಾರ್ಯ. ಚಿಂತೆ ಮಾಡಬೇಡಿ. ಅಮಿತ್‌ ಶಾ ಹಿಂದಿರುಗುತ್ತಾರೆ! 

 ಶೆಹಜಾದ್‌ ಪೂನಾವಾಲಾ 
ಅದ್ಭುತ ವಿಜಯ ಸಾಧಿಸಿದ ಅಹಮದ್‌ ಪಟೇಲ್‌ಗೆ ಅಭಿನಂದನೆಗಳು. ನಿಜವಾದ ಚಾಣಕ್ಯ ಯಾರು ಎನ್ನುವುದು "ರಿಪಬ್ಲಿಕ್‌' ಟಿ.ವಿ.ಗೆ ಅರ್ಥವಾಗಿರಬಹುದು. 

 ಪ್ರೀತಿ ಗಾಂಧಿ
ರಾಜದೀಪ್‌ ಸರ್ದೇಸಾಯಿ ರಾಜ್ಯಸಭಾ ಚುನಾವಣೆಗಳ ಬಗ್ಗೆ ಮಾತಾಡೋದನ್ನ ನೋಡಿದೆ. ಅವರು ಅಹ್ಮದ್‌ ಪಟೇಲ್‌ಗಿಂತಲೂ ಹೆಚ್ಚು ಚಿಂತಿತರಾಗಿದ್ದರು. 

 ಸಂದೀಪ್‌ಪಾಲ್‌
ನೀವು ಅಮಿತ್‌ ಶಾರನ್ನು ಪ್ರೀತಿಸಿ/ ದ್ವೇಷಿಸಿ. ಆದರೆ ಅವರು ಸೋನಿಯಾ ಮತ್ತು ಅವರ ಲುಟೆನ್‌ ತಂಡದ ನಿದ್ದೆ ಕಸಿದುಕೊಂಡಿದ್ದಾರೆನ್ನುವುದಂತೂ ಸತ್ಯ. 

 ಮಧುರ್‌ ಭಂಡಾರ್‌ಕರ್‌
ಇಷ್ಟೊಂದು ಕುತೂಹಲಕರ ರಾಜ್ಯಸಭಾ ಚುನಾವಣೆಯನ್ನು ಎಂದಿಗೂ ನೋಡಿರಲಿಲ್ಲ. ಭಾರತ-ಪಾಕ್‌ ಕ್ರಿಕೆಟ್‌ ಮ್ಯಾಚ್‌ಗಿಂತಲೂ ಎಕ್ಸೆ„ಟಿಂಗ್‌ ಆಗಿತ್ತು. 

ಸಂಜುಸಿದ್ಧಾರ್ಥ್
ಅಹ್ಮದ್‌ ಪಟೇಲ್‌ ಗೆಲುವು ಅವರೊಬ್ಬರ  ಗೆಲುವಷ್ಟೆ. ಅದನ್ನು ಕಾಂಗ್ರೆಸ್‌ ಗೆಲುವು ಎನ್ನುವಂತಿಲ್ಲ!

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

Trending videos

Back to Top