CONNECT WITH US  

ಇಂದಿರಾ ಕ್ಯಾಂಟೀನ್‌ ಬಗ್ಗೆ ಜನ ಏನಂತಾರೆ? 

 ಅರ್ನಾಬ್‌ ಗೋಸ್ವಾಮಿ 
ಇಂದಿರಾ ಕ್ಯಾಂಟೀನಲ್ಲಿ ಇದನ್ನೂ ಕೊಡಬಾರದಿತ್ತೇ?: ಇಟಲಿ ಸಾಂಬಾರ್‌, ವಾದ್ರಾ ವಡೆ, ಮಮತಾ ಮಸಾಲ ದೋಸಾ, ಲಾಲೂ ಮಟರ್‌, ತರೂರ್‌ ರೋಟಿ, ರಾಹುಲ್‌ ರಾಗಿ ಮಾಲ್ಟ್!

 ನಿಶಾಚರ್‌ 
ಇಂದಿರಾ ಕ್ಯಾಂಟೀನಲ್ಲಿ ನಾನು ಎಂಎಲ್‌ಎ ದೋಸಾ ಇದ್ಯಾ ಅಂತ ಕೇಳಿದೆ. ಅದನ್ನು ಅಮಿತ್‌ ಶಾ ತಗೊಂಡೋಗಿದ್ದಾರೆ ಅಂತಂದ್ರು!

 ಟ್ವಿಸ್ಟೆಡ್‌ಲಾಜಿಕ್ಸ್‌ 
ಇಂದಿರಾ ಕ್ಯಾಂಟೀನ್‌ ಅಂತ ಈ ಸರ್ಕಾರ ಯಾಕೆ ಹೆಸರಿಡಬೇಕಿತ್ತು? ಸಿಂಪಲ್ಲಾಗಿ "ಪ್ರಿಯಾ "ದರ್ಶಿನಿ' ಅಂತ ಹೆಸರಿಡಬಾರದಿತ್ತೇ

 ಆರ್‌.ಕೆ. 
ಕರ್ಮ ಎಂದರೆ ಇದೇ ನೋಡಿ, ಚಹಾ ಮಾರುವವರು ಪ್ರಧಾನಿಯಾದ್ರು, ಪ್ರಧಾನಿ ಕುಟುಂಬದವರು ಕ್ಯಾಂಟೀನ್‌ ಶುರುಮಾಡಿದ್ರು!

 ಶೂಟಿಂಗ್‌ ಥಾಟ್ಸ್‌ 
ಇಂದಿರಾ ಕ್ಯಾಂಟೀನಲ್ಲಿ ಯಾಕೆ ದನದ ಮಾಂಸ ಕೊಡ್ತಿಲ್ಲ? ಇದು ತಾರತಮ್ಯವಲ್ಲವೇ?

 ಸುದತ್ತ 
ವಿಮಾನದಲ್ಲಿ ಬಂದ ರಾಹುಲ್‌ ಗಾಂಧಿಯವರು, ಇಂದಿರಾ ಕ್ಯಾಂಟೀನಲ್ಲಿ ಹತ್ತು ರೂಪಾಯಿಗೆ ತಡಕಾಡಿದ್ದು, ನಿಜಕ್ಕೂ ಅಚ್ಚರಿಯೇ!

 ಪರಾಗ್‌ ಶರ್ಮಾ 
ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿಕೆಯಾದ್ರೆ, ಇಂದಿರಾ ಕ್ಯಾಂಟೀನಲ್ಲಿ ಆಹಾರ ಕೊಡ್ತಾರಾ?

 ಅನಾಮಿಕ
5 ರೂ.ಗೆ ತಿಂಡಿ ಸಿದ್ದರಾಮಯ್ಯನವರ ಭಾಗ್ಯ, ಮಧ್ಯಾಹ್ನ ಮುದ್ದೆ ಊಟ ದೇವೇಗೌಡರ ಭಾಗ್ಯ. ಇನ್ನು ಉಳಿದಿದ್ದು ಯಡಿಯೂರಪ್ಪನವರು ಮಾತ್ರ, ಅವರೇನಾದ್ರೂ ರಾತ್ರಿ ಎಣ್ಣೆಗೆ ವ್ಯವಸ್ಥೆ ಮಾಡಿದ್ರೆ ಸುಖೀ ರಾಜ್ಯ ಕರ್ನಾಟಕ!

 ಕುಮಾರ್‌ 
ಇಂದಿರಾ ಕ್ಯಾಂಟೀನ್‌ಗೆ ಆಹಾರ ಬಂದಿದ್ದು ಮದ್ವೆ ಹಾಲ್‌ನಿಂದ. ಹೌದು ಏನಾಯ್ತಿàಗ.. ಕಡಿಮೆ ದರಕ್ಕೆ ಒಳ್ಳೆ ಆಹಾರ ಎಲ್ಲಿ ಸಿಗುತ್ತೆ ಹೇಳಿ? 

 ಪ್ರಶಾಂತ್‌ ಸಿಸಿಎ 
ಇಂದಿರಾ ಕ್ಯಾಂಟೀನ್‌ ಬಗ್ಗೆ ಹೇಳುವವರಿಗೆ ಒಂದು ಪ್ರಶ್ನೆ: ಸ್ವಾತಂತ್ರ್ಯ ಸಿಕ್ಕಿ ಇಷ್ಟು ದಿನಗಳಾದ್ರೂ, ದೇಶದ ಜನರನ್ನು ಹಸಿವಿನಲ್ಲೇ ಇರುವಂತೆ ಮಾಡಿದವರು ಯಾರು..? 

 ದೀಪಕ್‌ ಮಾಯಸಂದ್ರ 
ಗುಜರಾತ್‌ನಲ್ಲಿ ಮಳೆ ಬಂದಾಗ ಅಲ್ಲಿನ ಶಾಸಕರು ಕರ್ನಾಟಕದ ರೆಸಾರ್ಟ್‌ ನಲ್ಲಿದ್ದರು. ಬೆಂಗಳೂರಲ್ಲಿ ಮಳೆ ಬಂದಾಗ, ಅಲ್ಲಿನ ಸಿಎಂ ಇಂದಿರಾ ಕ್ಯಾಂಟೀನ್‌ನಲ್ಲಿದ್ದರು. 

 ಮಂಜು 
ಇಂದಿರಾ ಕ್ಯಾಂಟೀನ್‌ ಇಡ್ಲಿಗೆ ಕಾಂಗ್ರೆಸ್‌ ಗಿಡದ ಸೊಪ್ಪಿನ ಸಾಂಬಾರ್‌ ಅಂತ ಯಾರ್ರೀ ಅದು ಹೇಳಿದ್ದು..? 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews


Trending videos

Back to Top