CONNECT WITH US  

ಭಾರತಕ್ಕೆ ಸೋತು ಶರಣಾದ ಶ್ರೀಲಂಕಾ: ಏನನ್ನುತ್ತೆ ಟ್ವೀಟ್‌ ಲೋಕ?

ಅಭಿಷೇಖ್‌ ಸಿಂಗ್‌
ಭಾರತ ಶ್ರೀಲಂಕಾವನ್ನು ವೈಟ್‌ವಾಶ್‌ ಮಾಡಿದೆ. ಈ ಸರಣಿಯಲ್ಲಿ ಶ್ರೀಲಂಕಾ ಗೆದ್ದದ್ದು ಬರೀ ಟಾಸ್‌ ಮಾತ್ರ! 

ಹರಿನ್‌ 
ಏನು ಅನ್ಯಾಯಾರೀ ಇದು. ಪಾಪ ತಮ್ಮ ತಂಡದ ಹೀನಾಯ ಸೋಲನ್ನು ತಡೆಯಲು ಶ್ರೀಲಂಕಾದ ವಾತಾವರಣಕ್ಕೂ ಸಾಧ್ಯವಾಗಲಿಲ್ಲವಲ್ಲ! ಸರಣಿ ಮುಗಿದ ಮೇಲೆ ಜೋರು ಮಳೆಯಾಗುತ್ತಿದೆಯಂತೆ...

ಕೌಶಲ್‌ ಗೌತಮ್‌
ಶ್ರೀಲಂಕನ್‌ ಪ್ರೇಕ್ಷಕರೆಲ್ಲ ರೊಚ್ಚಿಗೆದ್ದು ಮೈದಾನದಲ್ಲಿ ಬಾಟಲ್‌ ಎಸೆದು ದಾಂಧಲೆ ಮಾಡಿದರೆ ಕೂಲ್‌ ಧೋನಿ ಮಾಡಿದ್ದೇನು? ಗಡದ್ದಾಗಿ ನಿದ್ದೆ! ಯಪ್ಪಾ ಇಷ್ಟು ಥಂಡಾ ಥಂಡಾ ಕೂಲ್‌ ಕೂಲ್‌ ಯಾರೂ ಇರಬಾರದು.

ಶ್ರೀರವಿ
ಟಿ20: 1 - 0, ಟೆಸ್ಟ್‌:3-0, ಒನ್‌ಡೇ: 5-0! ಭಾರತದ ಅತಿದೊಡ್ಡ ವಿಕ್ಟರಿ ಮತ್ತು ಶ್ರೀಲಂಕಾ ಕ್ರಿಕೆಟ್‌ನ ಅತಿದೊಡ್ಡ ಶೇಮ್‌ ಶೇಮ್‌ ಸಂದರ್ಭವಿದು. 

ಮೊಹಮ್ಮದ್‌ ಕೈಫ್
ಕೋಹ್ಲಿಯ ಕನ್ಸಿಸ್ಟೆನ್ಸಿ ಮತ್ತು ಹಸಿವು ನಿಜಕ್ಕೂ ಗಾಬರಿಹುಟ್ಟಿಸುವಂಥದ್ದು. ದುರ್ಬಲ ಶ್ರೀಲಂಕಾ ತಂಡದ ವಿರುದ್ಧ ಆಟವಾಡುವಾಗಲೂ ಅವರಲ್ಲಿ 
ಈ ಗುಣ ಇದೆ! 

 ಮಾಸ್ಟರ್‌ ವೇಯ್ನ
ವಿರಾಟ್‌ ಕೊಹ್ಲಿ ಮತ್ತು ಸೆಂಚುರಿ. ಮಹೇಂದ್ರ ಸಿಂಗ್‌ ಧೋನಿ ಮತ್ತು ಸ್ಟಂಪಿಂಗ್‌. ಇದಕ್ಕಿಂತ ಬೆಸ್ಟ್‌ ಲವ್‌ ಸ್ಟೋರಿ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಹೇಳಿ ನೋಡೋಣ? 

ಗಾಡ್‌ಮನ್‌ ಚಿಕ್ನಾ
ಹುಡುಗ: ಯಾವುದಾದರೂ ವಿಶೇಷ ಸುದ್ದಿಯಿದ್ದರೆ ಹೇಳು...
ಹುಡುಗಿ: ಇವತ್ತು ವಿರಾಟ್‌ 
ಕೊಹ್ಲಿ ಸೆಂಚುರಿ ಹೊಡೆದ
ಹುಡುಗ: ಅಯ್ಯೋ ಅದು 
ದಿನಾ ಇದ್ದದ್ದೇ...ಬೇರೇ ಯಾವುದಾದರೂ ಹೇಳು!
ಹುಡುಗಿ: ನನಗೆ ಇವತ್ತು 
ಮುಂಬೈ ಲೋಕಲ್‌ ಟ್ರೇನಲ್ಲಿ 
ಜಾಗ ಸಿಕ್ಕಿತ್ತು...
ಹುಡುಗ: ವಾಹ್‌, ಅದ್ಭುತ!

 ಶ್ರೀರಂಗ 
ಮಹೇಂದ್ರ ಸಿಂಗ್‌ ಧೋನಿ ಕಾಲ ಮುಗಿಯಿತು ಎಂದವರ ಕಾಲೆಳೆಯುತ್ತಿದೆ ಕಾಲ!

 ಬ್ರೋಕನ್‌ ಕ್ರಿಕೆಟ್‌
30 ಶತಕ ಬಾರಿಸಿ ಪಾಂಟಿಂಗ್‌ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿ. ಈಗ ದೇವರಷ್ಟೇ ಅವರ ಮೇಲಿದ್ದಾನೆ! 

 ಜಲಂಧರ್‌ಕಾಪುತರ್‌
ಎಲ್ಲರೂ ಕೊಹ್ಲಿ-ಧೋನಿಯನ್ನು ಹೊಗಳುತ್ತಿರುವ ವೇಳೆಯಲ್ಲೇ, ರೋಹಿತ್‌ ಶರ್ಮಾ ಎಂಬ ಚಾಂಪಿಯನ್‌ ಜೋರಾಗಿ ಸದ್ದು ಮಾಡಿಬಿಟ್ಟ! 

 ಸರ್‌ ರವೀಂದ್ರ ಜಡೇಜಾ
ಹಿಂದಿನ ಬಾರಿ ಶ್ರೀಲಂಕಾಕ್ಕೆ ಈ ಪಾಟಿ ಡ್ಯಾಮೇಜ್‌ ಆಗಿದ್ದು, ಹನುಮಂತ ಲಂಕಾ ದಹನ ಮಾಡಿದಾಗ ಅನ್ನಿಸುತ್ತೆ!

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

Trending videos

Back to Top