CONNECT WITH US  

ಬುಲೆಟ್‌ಟ್ರೇನ್‌ಗೆ  ಶಿಲಾನ್ಯಾಸ: ಏನನ್ನುತ್ತವೆ ಟ್ವೀಟ್ಸ್‌?

ಪ್ರಶಾಂತ್‌ ಭೂಷಣ್‌
ನೋಟು ರದ್ದತಿ ವಿಫ‌ಲವಾದರೂ ಉತ್ತರ ಪ್ರದೇಶದ ಚುನಾವಣೆಯಲ್ಲಿ ಆ ನಡೆ ಬಿಜೆಪಿಗೆ ಲಾಭ ಮಾಡಿಕೊಟ್ಟಿತು. ಬುಲೆಟ್‌ ಟ್ರೇನ್‌ ಕೂಡ ವಿಫ‌ಲವಾಗಬಹುದು. ಆದರೆ ಗುಜರಾತ್‌ ಚುನಾವಣೆಗಳಲ್ಲಿ ಅದು ಸಹಾಯ ಮಾಡಬಹುದಲ್ಲ! 

ತೇಜಿಂದರ್‌ ಬಗ್ಗಾ
ಮಾನ್ಯ ಶಿಂಜೋ ಅಬೆ ಸರ್‌. ನಿಮ್ಮ ಬಳಿ ಸಮಯವಿದ್ದರೆ ದಯವಿಟ್ಟೂ ಕೂಡಲೇ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಬುಲೆಟ್‌ ಟ್ರೇನ್‌ನ ಟಿಕೆಟ್‌ ದರದ ಪಟ್ಟಿಯನ್ನು ಕಳುಹಿಸಿಕೊಡಿ. ದೆಹಲಿ ಮುಖ್ಯಮಂತ್ರಿಗಳು ಬುಲೆಟ್‌ ಟ್ರೇನ್‌ಗೆ ಅನುಮತಿ ನೀಡಬೇಕಲ್ಲ! 

 ಮಧುಪೂರ್ಣಿಮಾ ಕೀಶ್ವರ್‌
ಬುಲೆಟ್‌ ಟ್ರೇನ್‌ ಭಾರತದಲ್ಲೇ ತಯ್ನಾರಾಗಿದ್ದರೆ ಸಂಭ್ರಮಿಸುವುದರಲ್ಲಿ ಹೆಚ್ಚು ಅರ್ಥವಿರುತ್ತಿತ್ತು. ಅತಿ ದುಬಾರಿ ದರದಲ್ಲಿ ಜಪಾನ್‌ನಿಂದ ಆಮದು ಮಾಡಿಕೊಳ್ಳುವುದರಲ್ಲೇನು ವಿಶೇಷವಿದೆ? 

ಫ್ರಸ್ಟ್ರೇಟೆಡ್‌ ಇಂಡಿಯನ್‌
ನಮ್ಮದು ಬಡ ರಾಷ್ಟ್ರ, ನಮಗೆ ಬುಲೆಟ್‌ ಟ್ರೇನ್‌ ಬೇಕಿಲ್ಲ ಅಂತ ಟ್ವೀಟ್‌ ಮಾಡುತ್ತಿದ್ದೇನೆ. ನನ್ನ ಹೊಚ್ಚ ಹೊಸ ಐಫೋನ್‌ನ ಮೂಲಕ!

ಅಂಕುರ್‌ ಭಾರದ್ವಾಜ್‌ 
ವಿಮಾನದಲ್ಲಾದರೆ ಅಹಮದಾಬಾದ್‌ನಿಂದ ಮುಂಬೈಗೆ 1 ಗಂಟೆಯಲ್ಲಿ ತಲುಪಬಹುದು. ಟಿಕೆಟ್‌ ದರಗಳು ಕೂಡ 2,300 ರೂಪಾಯಿಯಿಂದ ಆರಂಭವಾಗುತ್ತವೆ. ಬುಲೆಟ್‌ ಟ್ರೇನ್‌ ಅನ್ನು ಟೀಕಿಸುತ್ತಿರುವವರ ವಾದ ಸರಿಯಾಗಿಯೇ ಇದೆ. 

ಸೊನಾಲಿ ರಾನಡೆ
ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗ ದೇಶದ ಸಂಪತ್ತನ್ನು ಹೇಗೆ ಸ್ವಾಹಾ ಮಾಡುತ್ತದೆ ಎನ್ನುವುದಕ್ಕೆ ಬುಲೆಟ್‌ ಟ್ರೇನ್‌ ಅತ್ಯುತ್ತಮ ಉದಾಹರಣೆ. ಅಭಿವೃದ್ಧಿ ಎಲ್ಲರಿಗೂ ಎಲ್ಲಿದೆ? 

 ರಾಜೀವ್‌ ಮಂತ್ರಿ
ಬುಲೆಟ್‌ ಟ್ರೇನ್‌ಗಾಗಿ ಬಳಸಲಾಗುವ ಸಾಲದ ಹಣವನ್ನು ಬೇರೆ ಯಾವುದಾದರೂ ಯೋಜನೆಗೆ ಬಳಸಬಹುದಿತ್ತು ಎನ್ನುತ್ತಿದ್ದಾರೆ ಕೆಲವರು. ಆದರೆ ಬೇರೆ ಯೋಜನೆಗಳಿಗೆ ಜಪಾನ್‌ ಸಾಲ ಕೊಡಬೇಕಲ್ಲ?!

ಅಶೋಕ್‌ ಪಂಡಿತ್‌
ಕೋಲ್‌ಗೇಟ್‌ ಹಗರಣ-1.8 ಲಕ್ಷ ಕೋಟಿ
2ಜಿ ಹಗರಣ- 1.76 ಲಕ್ಷ ಕೋಟಿ
ಕಾಮನ್‌ವೆಲ್ತ್‌- 70 ಸಾವಿರ ಕೋಟಿ ಒಟ್ಟು- 4.25 ಲಕ್ಷ ಕೋಟಿ. ಈ ಹಣದಲ್ಲಿ ಮೂರು ಬುಲೆಟ್‌ಟ್ರೇನ್‌ಗಳು ಬರುತ್ತಿದ್ದವು! 

ರಾಜೀವ್‌ಸಿ
ನಿಜ ಬುಲೆಟ್‌ ಟ್ರೇನ್‌ಗೆ ಬುನಾದಿ ಬಿದ್ದಿದ್ದು ಯುಪಿಎ ಆಡಳಿತಾವಧಿಯಲ್ಲಿಯೇ. ಆದರೆ ಬುನಾದಿ ಹಾಕಿದರಾಯಿತೇ, ಬಿಲ್ಡಿಂಗೂ ಕಟ್ಟಬೇಕಲ್ಲವೇ? 

ದಿ ಬ್ಯಾಡ್‌ ಡಾಕ್ಟರ್‌
ಜಪಾನಿಯರಿಗೆ ಎಷ್ಟೊಂದು ಆತ್ಮವಿಶ್ವಾಸವಿದೆಯೆಂದರೆ, ಬುಲೆಟ್‌ ಟ್ರೇನ್‌ ಆರಂಭಗೊಳ್ಳುವ ದಿನವನ್ನೂ ಅವರು ಹೇಳಿದ್ದಾರೆ, ದುರಂತವೆಂದರೆ ಅವರು ಭಾರತೀಯರ ಟೈಮ್‌ ಸೆನ್ಸ್‌ ಮೇಲೆ ತುಸು ಜಾಸ್ತಿಯೇ ವಿಶ್ವಾಸವಿಟ್ಟಿದ್ದಾರೆ!

ಸಂಜು ಸಿ
ಬುಲೆಟ್‌ ಟ್ರೇನ್‌ ಬಂದ ಮೇಲೆ ಹಳಿಯ ಮೇಲೆ ಹೇಸಿಗೆ ಮಾಡಲು ಕೂಡುವವರಿಗೆ ಕಷ್ಟವಾಗಲಿದೆ!

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

Trending videos

Back to Top