CONNECT WITH US  

ಜಿಎಸ್‌ಟಿಯಲ್ಲಿ ಪೆಟ್ರೋಲ್‌ ಬರಬೇಕೇ? ಏನಂತಾರೆ ಜನ?

ಮ್ಯಾಕ್ಸ್‌ ಎರಾ
ಮಿತ್ರೋಂ. ನಿಮ್ಮ ಜೀವನದಲ್ಲಿ ಸಂತೋಷ  ಪೆಟ್ರೋಲ್‌ ರೇಟಿನಂತೆ ಮೇಲೇರಲಿ. ನಿಮ್ಮ ನೋವೆಲ್ಲ ರೂಪಾಯಿ ಮೌಲ್ಯದಂತೆ ಕುಸಿಯಲಿ. 

 ಮಿಹಿರ್‌ಎಸ್‌
ಇಂಧನಗಳ ಬೆಲೆ ಏರಿಕೆಯ ಹಿಂದೆ ದೂರದೃಷ್ಟಿಯಿದೆ. ಇದು ಭಾರತದ ಭವಿಷ್ಯ ಹಿತದೃಷ್ಟಿಯಿಂದ ರೂಪಿಸಲಾದ ನೀತಿ. 

ಏಸೀತೇಸೀ
ದೇಶಕ್ಕೆ ಒಳ್ಳೆಯ ಸಂಗತಿಗಳು: ದುಬಾರಿ ಪೆಟ್ರೋಲು, ಕ್ಲಿಷ್ಟಕರ ಜಿಎಸ್‌ಟಿ, 6 ಸಾವಿರ ಕೋಟಿ ರೂಪಾಯಿ ಮೌಲ್ಯದ ಮೂರ್ತಿಗಳು, ಫೇಕ್‌ ನ್ಯೂಸ್‌ಗಳು ಇತ್ಯಾದಿ. ದೇಶಕ್ಕೆ ಕೆಟ್ಟ ಸಂಗತಿಗಳು: ಸರ್ಕಾರವನ್ನು ಪ್ರಶ್ನಿಸುವುದು! 

ಲೋಕೇಶ್‌ ಜಿನ್ವಾಲ್‌
ಪೆಟ್ರೋಲ್‌ ಮತ್ತು ಡೀಸೆಲ್‌ ಜಿಎಸ್‌ಟಿ ಅಡಿ ಬರಬೇಕು ಎಂದರೆ ಒಪ್ಪುವುದಿಲ್ಲ, ಆದರೆ ಸ್ಯಾನಿಟರಿ ಪ್ಯಾಡ್‌ಗಳಿಗೆ ಮಾತ್ರ ಎಲ್ಲಾ ರೀತಿಯ ತೆರಿಗೆ! 

ನವೀನ್‌ಬೂಂಬಕ್‌
ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ಅಡಿ ತಂದರೆ ಕೆಲವು ರಾಜ್ಯಗಳಿಗೆ ಆರ್ಥಿಕವಾಗಿ ಭಾರೀ ಪೆಟ್ಟು ಬೀಳಲಿದೆ. ಈ ಹೊಡೆತವನ್ನು ಸಹಿಸಿಕೊಳ್ಳುವ ಶಕ್ತಿ ಅವಕ್ಕಿದೆಯೇ?

 ಸೂಪರ್‌ಭರತ್‌
ಪೆಟ್ರೋಲ್‌ ಬೆಲೆ ಹೆಚ್ಚಿಸಿದರೆ ಜನ ಎತ್ತಿನ ಗಾಡಿಗಳಲ್ಲಿ ಓಡಾಡುತ್ತಾರೆ. ತತ್ಪರಿಣಾಮವಾಗಿ ವಾಯುಮಾಲಿನ್ಯ ತಗ್ಗುತ್ತದೆ. ವಾಹ್‌ ಮೋದೀಜೀ. ವಾಹ್‌!  

ಗೋಆನ್‌ಟಿ
ರಾಜ್ಯ ಸರ್ಕಾರಗಳೇ ಜಿಎಸ್‌ಟಿ ಅಡಿ ಪೆಟ್ರೋಲ್‌ ಡೀಸೆಲ್‌ ತರುವುದನ್ನು ಒಪ್ಪುತ್ತಿಲ್ಲ. ಹೀಗಿರುವಾಗ ಎಲ್ಲದಕ್ಕೂ ಕೇಂದ್ರವನ್ನು ದೂಷಿಸುತ್ತಿರುವುದೇಕೆ?

 ಚಿರಾಗ್‌ ಶ್ರೀವಾಸ್ತವ್‌
ಪೆಟ್ರೋಲ್‌ ಮತ್ತು ಡೀಸೆಲ್‌ ಮೂಲ ಅಗತ್ಯಗಳೇ ಹೊರತು ಅವು ಲಕ್ಷುರಿ ಐಟಂಗಳಲ್ಲ. ಆದರೂ ಅವುಗಳ ಭಾರವನ್ನು ನಮಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಅವು ಜಿಎಸ್‌ಟಿ ಅಡಿ ಬರಲೇಬೇಕು. 

ದೇಸೀಮೋಜೀತೋ
ಈ ಮಾತನ್ನು ಬರೆದಿಟ್ಟುಕೊಳ್ಳಿ. 2018ರ ಅಂತ್ಯದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 55 ರೂ. ಗೆ ಇಳಿಯಲಿದೆ. ಅದೇ ವೇಳೆ ಜಿಎಸ್‌ಟಿಯನ್ನೂ ಸುಧಾರಿಸಲಾಗುತ್ತದೆ. ಮೋದಿಜೀಗೆ ಚುನಾವಣೆಗಳನ್ನು ಹೇಗೆ ಗೆಲ್ಲಬೇಕೆಂದು ಗೊತ್ತಿದೆ. 

ದೇವಿಂದರ್‌ ಶರ್ಮಾ
ಜಿಎಸ್‌ಟಿ ಅಡಿ ಬಂದರೆ ಪೆಟ್ರೋಲ್‌ ಬೆಲೆ 38 ರೂಪಾಯಿಗೆ ತರಬಹುದಂತೆ. ಸರ್ಕಾರ ಈ ಕೆಲಸವನ್ನು ಮಾಡುತ್ತದಾ? ಇಲ್ಲ. ಏಕೆಂದರೆ ಮಾರುಕಟ್ಟೆ ಆರ್ಥಿಕತೆ ಜನರನ್ನು ದೋಚುವುದರಲ್ಲೇ ನಿಂತಿದೆ.

ಉಮೇಶ್‌ ವಾರ್ಹಡೆ
90 ಪ್ರತಿಶತ ಮಾಧ್ಯಮಗಳು ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆಯ ಬಗ್ಗೆ ಮಾತನಾಡುತ್ತಲೇ ಇಲ್ಲ. ಜನರ ಗಮನವನ್ನು ಬೇರೆಡೆ ಸೆಳೆಯಲು ಹಿಂದೂ-ಮುಸ್ಲಿಂ ಮತ್ತು ಹನಿಪ್ರೀತ್‌ ವಿಷಯವನ್ನೇ ಕೈಗೆತ್ತಿಕೊಳ್ಳುತ್ತಿವೆ. 

 ವೋಟರ್‌ಗಿರಿ
ಮೋದಿ ಜಿಡಿಪಿ ದರವನ್ನು ಏರಿಸುತ್ತೇನೆ ಎಂಬ ಭರವಸೆ ಕೊಟ್ಟಿದ್ದರು. ತಮ್ಮ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ಗ್ಯಾಸ್‌(ಜಿ), ಡೀಸೆಲ್‌(ಡಿ), ಪೆಟ್ರೋಲ್‌(ಪಿ) ಬೆಲೆ ಏರಿಸುವ ಮೂಲಕ! 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

Trending videos

Back to Top