CONNECT WITH US  

ಆರುಷಿ ಹೆತ್ತವರು ಖುಲಾಸೆ. ಟ್ವೀಟಿಗರೇನಂತಾರೆ?

 ಒಮರ್‌ ಅಬ್ದುಲ್ಲಾ
ಆರುಷಿಯನ್ನು ಕೊಂದದ್ದು ಯಾರು ಅಂತ ತಿಳಿಯದು. ಆದರೆ ಪೊಲೀಸರು ಈ ತನಿಖೆಯನ್ನು ಹಳ್ಳ ಹಡಿಸಿದರು ಎನ್ನುವುದಂತೂ ನಮಗೆ ಸ್ಪಷ್ಟವಾಗಿ ಗೊತ್ತು.

ಆಶುತೋಶ್‌ಬಿ
ಆರುಷಿ ತಲ್ವಾರ್‌ ಹತ್ಯೆ ಪ್ರಕರಣದ ಸುತ್ತಲಿನ ಚರ್ಚೆಗಳೆಲ್ಲ ಪೂರ್ವಗ್ರಹ ದಿಂದ ಕೂಡಿವೆ. ಯಾರೂ ಆ ಬಡ ಹೇಮರಾಜ್‌ನ ಬಗ್ಗೆ ಮಾತನಾಡುತ್ತಲೇ ಇಲ್ಲ. ನಮ್ಮ ಸಮಾಜದಲ್ಲಿ ಬಡವರು ಮತ್ತು-ಹಿಂದುಳಿದವರ ಬಗ್ಗೆ ಇರುವ ಅಸಡ್ಡೆಯನ್ನು ಈ ಚರ್ಚೆಗಳು ಬಹಿರಂಗಗೊಳಿಸುತ್ತಿವೆ.

ಗಪ್ಪಿಸ್ಥಾನ್‌
ನ್ಯಾಯಕ್ಕೆ ಗೆಲುವು ಎಂದು ಹೇಳಲೇಬೇಡಿ. ಇಲ್ಲಿ ಯಾರಿಗೂ ನ್ಯಾಯ ಸಿಕ್ಕಿಲ್ಲ. ಆರುಷಿಗೂ ಸಿಕ್ಕಿಲ್ಲ, ಆಕೆಯ ಪೋಷಕರಿಗೂ ಸಿಕ್ಕಿಲ್ಲ. ಒಂದು ವೇಳೆ ಆಕೆಯ ಪೋಷಕರೇ ತಪ್ಪಿತಸ್ಥರಾಗಿದ್ದರೆ ಇನ್ನೆಲ್ಲಿಯ ನ್ಯಾಯ?

ಸೋನಂ ಎಂ
ಸುನಂದಾ ಪುಷ್ಕರ್‌ಳನ್ನು ಯಾರೂ ಕೊಂದಿಲ್ಲ, ಜೆಸ್ಸಿಕಾಳನ್ನೂ ಯಾರೂ ಕೊಂದಿಲ್ಲ, ಆರುಷಿಯನ್ನೂ ಯಾರೂ ಕೊಂದಿಲ್ಲ. ಮಹಿಳೆಗೆ ಮರ್ಯಾದೆ ಕೊಡುವ ಯಾವುದಾದರೂ ರಾಷ್ಟ್ರವಿದೆಯೇ? 

 ಅಂಕಿತ್‌ ಜೈನ್‌ 
ಮಾಧ್ಯಮಗಳು "ತಲ್ವಾರ್‌ಗಳು ತಮ್ಮ ಮಗಳ ಬಗ್ಗೆ ಎಂದಿಗೂ ಕೇರ್‌ ಮಾಡಿದವರಲ್ಲ, ಆರುಷಿ ಸೊಕ್ಕಿನ ಹುಡುಗಿಯಾಗಿದ್ದಳು' ಎಂದು ಪುರಾವೆಯಿಲ್ಲದೇ ವರದಿ ಮಾಡಿದವು. ಮಾಧ್ಯಮಗಳ ನೈತಿಕತೆಗೆ ಏನಾಗಿದೆ? 

ರವಿಕಾಂತ್‌
 ತಲ್ವಾರ್‌ ದಂಪತಿ ಉತ್ತರ ಪ್ರದೇಶದ ಪೊಲೀಸರಿಗೆ ಆಭಾರಿಯಾಗಿರಬೇಕು. ವಿಧಿವಿಜ್ಞಾನ ತನಿಖೆಯನ್ನು ಪೊಲೀಸರು ಹಳ್ಳ ಹಿಡಿಸಿರುವುದರಿಂದಲೇ ಅಲ್ಲವೇ ಅವರನ್ನು ಬಿಡಲು ಕೋರ್ಟ್‌ ಈಗ ತೀರ್ಮಾನಿಸಿರುವುದು?

ಪಂಕಜ್‌ ಪಚೌರಿ
ಆರುಷಿಯನ್ನು ಕೊಂದದ್ದು ಯಾರು ಎಂದು ಈಗಲೂ ನಮಗೆ ತಿಳಿಯದು. ಆದರೆ ಒಂದಂಶವಂತೂ ಸ್ಪಷ್ಟವಾಗಿದೆ. ಮಾಧ್ಯಮಗಳು ಈ ವಿಷಯದಲ್ಲಿ ವರ್ತಿಸಿದ ರೀತಿ ಮಾತ್ರ ಯಾವುದೇ ಅಪರಾಧಕ್ಕೂ ಕಮ್ಮಿಯಿರಲಿಲ್ಲ. 

 ಎಂಎಸ್‌ರಾಣಾ
ಮೊದಲು ಮೀಡಿಯಾಗಳು ರಾಮ್‌ ರಹೀಮ್‌ ಹಿಂದೆ ಬಿದ್ದವು, ನಂತರ ಹನಿಪ್ರೀತ್‌ ಹನಿಪ್ರೀತ್‌ ಎಂದು ಭಜಿಸಲಾರಂಭಿಸಿದವು. ಈಗ ಇನ್ನೊಂದು ವಾರ ಆರುಷಿ-ಹೇಮರಾಜ್‌ ಪ್ರಕರಣವನ್ನು ಚರ್ಚಿಸಲಿವೆ. ಜನಕ್ಕೆ ಉಪಯೋಗವಾಗುವಂಥ ವಿಷಯಗಳೆಲ್ಲ ಹಿನ್ನೆಲೆಗೇ ಸರಿದುಹೋಗುತ್ತಿವೆ. 

 ವೀರೇಂದ್ರ ಎಸ್‌
ಈ ದೀಪಾವಳಿಯಂದು ದಯವಿಟ್ಟೂ ಪಟಾಕಿ ಸಿಡಿಸಬೇಡಿ. ಪಟಾಕಿಯಿಂದ ಹೊಗೆ ಏಳುತ್ತದೆ. ಆಗ ನಮ್ಮ ಸಿಬಿಐ ಮತ್ತು ಪೊಲೀಸ್‌ ಇಲಾಖೆಗೆ ಆ ಹೊಗೆಯಲ್ಲಿ ಆರುಷಿ ಕೊಲೆಗಡುಕರು ಕಾಣಿಸುವುದಿಲ್ಲ! 

 ದಾರೂವಾಲಾ
ತಲ್ವಾರ್‌ ದಂಪತಿಯ ಜಾಗದಲ್ಲಿ ರಾಜಕಾರಣಿ ಅಥವಾ ದೊಡ್ಡ ಫಿಲಂ ಸ್ಟಾರ್‌ ಇದ್ದಿದ್ದರೆ ಅವರು ಹೊರಬಂದು 5-6 ವರ್ಷಗಳೇ ಆಗಿರುತ್ತಿದ್ದವು. 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

Trending videos

Back to Top