CONNECT WITH US  

ಪಟಾಕಿ ಬೇಕು- ಬೇಡವೆಂಬ ಚರ್ಚೆ. ಏನಂತಾರೆ ಜನ?

 ಕೈಲಾಶ್‌ ಸತ್ಯಾರ್ಥಿ
ಈ ಬಾರಿ ಸ್ವತ್ಛ ಮತ್ತು ಶಾಂತಿಯುತ ದೀಪಾವಳಿಯ ನಿರೀಕ್ಷೆಯಲ್ಲಿದ್ದೆ. ಆದರೆ ದೆಹಲಿಯಲ್ಲಿ ಸಿಡಿದ ಪ್ರತಿಯೊಂದು ಪಟಾಕಿಯೂ ಆ ನಗರದ "ಐ ಡೋಂಟ್‌ ಕೇರ್‌' ಎನ್ನುವ ಗುಣವನ್ನು ಪ್ರತಿಧ್ವನಿಸುತ್ತಿತ್ತು. 

ನವರೂಪ್‌ ಸಿಂಗ್‌
ದೀಪಾವಳಿ ಪಟಾಕಿ ನಿಷೇಧದ ಕೂಗಿನ ಹಿಂದೆ ಭಾರತೀಯ ಸಂಸ್ಕೃತಿಯನ್ನು ಟಾರ್ಗೆಟ್‌ ಮಾಡುತ್ತಲೇ ಬರುತ್ತಿರುವ ಮಾರ್ಕ್ಸ್ವಾದದ ಛಾಯೆಯಿದೆ. ಈ ವಿರೋಧಕ್ಕೆ ನಾವು ಪ್ರತಿರೋಧ ಒಡ್ಡಲೇಬೇಕು. 

ಶುಭ್ರಾಂಶು
ನನ್ನ ನಾಯಿ ದೀಪಾವಳಿಯ ಪಟಾಕಿಯಿಂದ ಹೆದರುವುದಿಲ್ಲ. ಪಟಾಕಿಗಳನ್ನು ಕುತೂಹಲದಿಂದ ಗಮನಿಸುತ್ತದೆ. ನಿಮ್ಮ ಸಾಕು ನಾಯಿಗಳನ್ನು ಎಡಪಂಥೀಯರು ಮತ್ತು ಎನ್‌ಜಿಒಗಳಿಂದ ದೂರವಿಟ್ಟರೆ ಅವು ಧೈರ್ಯವಂತವಾಗುತ್ತವೆ. 

 ಮನ್ವಿತಾ
ದಯವಿಟ್ಟೂ ಪಟಾಕಿ ರಹಿತ ದೀಪಾವಳಿ ಆಚರಿಸೋಣ. ಪಟಾಕಿಯ ಸದ್ದು ವೃದ್ಧರಿಗೆ, ಪ್ರಾಣಿಗಳಿಗೆ ತೊಂದರೆ ಮಾಡುತ್ತದೆ ಮತ್ತು ವಾಯುಮಾಲಿನ್ಯ ಸೃಷ್ಟಿಯಾಗುತ್ತದೆ. ಗ್ರೀನ್‌ ದೀಪಾವಳಿಗೆ ಜೈ ಅನ್ನಿ. 

 ಸುಬೇದಾರ್‌ ಸಿಂಗ್‌ 
ದೀಪಾವಳಿಯ ಪಟಾಕಿಯಿಂದ ನಾಯಿಗಳಿಗೆ ಕಿರಿಕಿರಿಯಾಗುತ್ತದೆ ಎಂದರೆ ಹೊಸ ವರ್ಷದ ಪಟಾಕಿ ಸದ್ದಿಗೂ ಆಗಬೇಕಲ್ಲವೇ? ಆಗೆಲ್ಲ ಅವು ಖುಷಿಯಿಂದ ಬೆಲ್ಲಿ ಡ್ಯಾನ್ಸ್‌ ಮಾಡುತ್ತವಾ?! 

ಪೌಲ್‌ ಒಮ್ಮನ್‌
ಹೈದ್ರಾಬಾದ್‌ನಲ್ಲಿ ಮೊದಲ ದಿನವೇ ಸುಮಾರು 15 ಜನ ದೀಪಾವಳಿ ಪಟಾಕಿ ಸಂಬಂಧಿ ಸಮಸ್ಯೆಯಿಂದ ನಮ್ಮ ನೆರೆಯ ಕಣ್ಣಾಸ್ಪತ್ರೆ ಸೇರಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ. 

 ಕವಿತಾ ಎಂ
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಜೋರ್‌ದಾರ್‌ ಆಗಿ ದೀಪಾವಳಿ ಆಚರಿಸಲಾಗುತ್ತಿದೆ. ಆದರೆ ಭಾರತದಲ್ಲಿ ನಾವು ನಮ್ಮ ಅತಿದೊಡ್ಡ ಹಬ್ಬವನ್ನು ಆಚರಿಸಲು ಸುಪ್ರೀಂ ಕೋರ್ಟ್‌, ಕಮ್ಯುನಿಸ್ಟರು, ಪ್ರಗತಿಪರರ ಪರ್ಮಿಶನ್‌ ಪಡೆಯಬೇಕು. 

 ಕುಹೂಕುಹೂ
ದೆಹಲಿಯಲ್ಲಿನ ಪಟಾಕಿ ನಿಷೇಧದಿಂದ ಖುಷಿಗೊಂಡಿರುವ ಎಡಪಂಥೀಯರು ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರಂತೆ!

 ರವಿ ಝಾ
ಪಟಾಕಿ ನಿಷೇಧದ ವಿಫ‌ಲ ಪ್ರಯತ್ನದ ನಂತರ ಈಗ ಬುದ್ಧಿಜೀವಿಗಳು, "ಪಟಾಕಿ ಸಿಡಿಸುವ ಆಚರಣೆ ಹಿಂದೂಗಳದ್ದಲ್ಲ' ಎಂಬ ಕಥೆ ಕಟ್ಟಲು ಹೊರಟಿದ್ದಾರೆ.

 ಬಾರಿಕ್‌ ಸುಬಾಮಾ
ಸುರಕ್ಷಿತ ಮತ್ತು ಸ್ವತ್ಛ ದೀಪಾವಳಿ ಆಚರಿಸಿ ಗೆಳೆಯರೆ. ಒಂದು ವೇಳೆ ನಿಮ್ಮ ಮಕ್ಕಳು ಪಟಾಕಿ ಹಾರಿಸಲು ಮುಂದಾದರೆ ಅದನ್ನು ಅವರ ಕೈಯಿಂದ ಕಸಿದುಕೊಳ್ಳಿ. ಪಟಾಕಿ ಹೇಗೆ ಹಚ್ಚುವುದು ಅಂತ ತೋರಿಸಿಕೊಡಿ.

 ಚುಪ್‌ಕೇಸೇ
ವರ್ಷದ ಉಳಿದ 364 ದಿನಗಳು ವಾಯು ಮಾಲಿನ್ಯ ತಡೆಯಲು ಏನು ಮಾಡುತ್ತಿ ದ್ದೀರಿ? ದೀಪಾವಳಿಯಂದೇ ಎಲ್ಲರಲ್ಲಿ ಪರಿಸರ ಪ್ರಜ್ಞೆ ಜಾಗೃತವಾಗುವುದು ಏಕೆ?

ನೀವೂ ನಮಗೆ ಟ್ವೀಟ್‌ ಮಾಡಿ
@UdayavaniNews


Trending videos

Back to Top