CONNECT WITH US  

ಕಾಂಗ್ರೆಸ್‌ ಅಧ್ಯಕ್ಷ  ಗಾದಿಯತ್ತ ರಾಹುಲ್‌: ಜನ ಏನಂತಾರೆ? 

 ಪರೇಶ್‌ ರಾವಲ್‌  
ರಾಷ್ಟ್ರಪತಿ ಹುದ್ದೆಗೆ ಯೋಗ್ಯ ಅಭ್ಯರ್ಥಿಯಾಗಿದ್ದ ಮೀರಾ ಕುಮಾರ್‌, ಈಗ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೇಕೆ ಯೋಗ್ಯ ಅಭ್ಯರ್ಥಿಯಾಗಿ ಕಾಣಿಸುತ್ತಿಲ್ಲ? ಏನಿಲ್ಲ, ಸುಮ್ನೆ ಕೇಳ್ತಾ ಇದೀನಿ! 

ಮಯಾಂಕ್‌ಸುನ್‌
ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಲು ಇದು ಸೂಕ್ತ ಸಮಯ. ವಿರೋಧ ಪಕ್ಷಗಳ ವಲಯದಲ್ಲಿ ನರೇಂದ್ರ ಮೋದಿಯವರಿಗೆ ಪರ್ಯಾಯವಾಗಬಲ್ಲ ನಾಯಕರು ಅವರೊಬ್ಬರೇ. 

 ಮರ್ಯಾಶಕಿಲ್‌
ರಾಹುಲ್‌ ಗಾಂಧಿ ಉತ್ಥಾನದ ಬಗ್ಗೆ ನಿಮಗೇನನ್ನಿಸುತ್ತದೆ ಎಂದು ರಾಜಕೀಯ ಪಂಡಿತರೊಬ್ಬರನ್ನು ಕೇಳಿದೆ. ಅದಕ್ಕೆ ಅವರಂದರು- ""ಬೇರೆ ಪಕ್ಷವಾಗಿದ್ದರೆ, ಇಷ್ಟೊಂದು ಚುನಾವಣೆಗಳಲ್ಲಿ ಸೋಲು ತಂದ ನಾಯಕನನ್ನು ಪಕ್ಷದ ಅಧ್ಯಕ್ಷಸ್ಥಾನಕ್ಕೆ ಖಂಡಿತ ಆಯ್ಕೆ ಮಾಡುತ್ತಿರಲಿಲ್ಲ. ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೂ ಓಕೆ ಅನ್ನುತ್ತಿರಲಿಲ್ಲ.'

 ಟ್ರೂಇಂಡಿ
ದೇಶಕ್ಕೆ ಪ್ರಬಲ ಪ್ರತಿಪಕ್ಷದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ರಾಷ್ಟ್ರವೊಂದರಲ್ಲಿ ಸರ್ವಾಧಿಕಾರಿ ಆಡಳಿತ ರೂಪುಗೊಳ್ಳಬಾರದು ಎಂದರೆ ಅಲ್ಲಿ ಬಲಶಾಲಿ ಪ್ರತಿಪಕ್ಷವಿರಲೇಬೇಕು. ಈ ನಿಟ್ಟಿನಲ್ಲಿ ರಾಹುಲ್‌ ಯಶಸ್ವಿಯಾಗಲಿ ಎಂದು ಹಾರೈಕೆ. ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಾಗದಿದ್ದರೂ ಅಡ್ಡಿಯಿಲ್ಲ, ಕನಿಷ್ಠಪಕ್ಷ  ಅದನ್ನು ಬಲಿಷ್ಠ ಪ್ರತಿಪಕ್ಷವನ್ನಾಗಿಸಲಿ.  

 ತೇಜಿಂದರ್‌ಬಗ್ಗಾ
ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಲಿದ್ದಾರೆ, ನರೇಂದ್ರ ಮೋದೀಜಿ, ಅಮಿತ್‌ Í ಜಿ ಮತ್ತು ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೂ ಕಂಗ್ರಾಚುಲೇಷನ್ಸ್‌!  

 ಚಿರಂತನ್‌ಎಸ್‌
ನಾವು ಪ್ರಜಾಪ್ರಭುತ್ವಿàಯ ಮಾರ್ಗದಲ್ಲಿ ಕಾಂಗ್ರೆಸ್‌ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದೇವೆ. ರಾಹುಲ್‌ಗೆ ಪ್ರತಿಸ್ಪರ್ಧಿಯಾಗಿ ಯಾರು ಬೇಕಾದರೂ ನಿಲ್ಲಬಹುದಾದ ಅವಕಾಶ ನಮ್ಮಲ್ಲಿದೆ. 

ಪ್ರಿಯಾಂಕಾಸಿ
ನಾವು ಆಂತರಿಕ ಚುನಾವಣೆಗಳ ಮೂಲಕ ಅಧ್ಯಕ್ಷರ ಆಯ್ಕೆ ಮಾಡಲಿದ್ದೇವೆ. ಆದರೆ ಅಮಿತ್‌ ಶಾರನ್ನು ಆಯ್ಕೆ ಮಾಡುವಾಗ ಒಬ್ಬೇ ಒಬ್ಬ ಬಿಜೆಪಿ ಕಾರ್ಯಕರ್ತನ ಅಭಿಪ್ರಾಯವನ್ನಾದರೂ ಕೇಳಲಾಯಿತೇ? 

 ರಂಜನ್‌ಬಿ
ಮೋದೀಜಿ ಅವರಿಗೆ ದೊಡ್ಡ ಆಘಾತ! ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುವ ಆಂತರಿಕ ಚುನಾವಣೆಗಳಲ್ಲಿ ರಾಹುಲ್‌ ಗಾಂಧಿಯವರು ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರ ಸ್ಥಾನವನ್ನು ರಾಹುಲ್‌ ಗೆಲ್ಲುವುದು ನಿಶ್ಚಿತ! ಬಿಗ್‌ ಬ್ಲೋ ಟು ಮೋದೀಜಿ! 

ಅದಿತ್ಯ ರಜಪೂತ್‌
ರಾಹುಲ್‌ಜೀ ಅವರಿಗೆ ಮೊದಲಿಗೇ ಕಂಗ್ರಾಟ್ಸ್‌ ಹೇಳಿಬಿಡೋಣ. ಕಾಂಗ್ರೆಸ್‌ನಲ್ಲಿ ಅಧ್ಯಕ್ಷರ ಸ್ಥಾನ ಗಾಂಧಿ ಕುಟುಂಬಕ್ಕೆ ಮೀಸಲಾಗಿದೆ. ಈ ಹಿನ್ನೆಲೆಯಲ್ಲಿ ಆಂತರಿಕ ಚುನಾವಣೆಯಲ್ಲಿ ತಾವೊಬ್ಬರೇ ಓಡಿ ಫ‌ಸ್ಟ್‌ ಪ್ರೈಸ್‌ ಪಡೆಯಲಿರುವ ರಾಹುಲ್‌ ಗಾಂಧಿಯವರಿಗೆ ಅಭಿನಂದನೆಗಳು!

 ರಾಗೇಶ್‌ಬಿ
ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುಂದೆ ತರುವಲ್ಲಿ ರಾಹುಲ್‌ ಗಾಂಧಿಯವರ ಯೋಗದಾನ ಬಹಳಷ್ಟಿದೆ. ಬಿಜೆಪಿಯವರು ರಾಹುಲ್‌ಗೆ ಹೆದರಿದ್ದಾರೆ ಎನ್ನುವುದು ಖಾತ್ರಿಯಾಗುತ್ತಿದೆ. ಗುಜರಾತ್‌ ಚುನಾವಣೆಯಲ್ಲಿ ರಾಹುಲ್‌ ಅಲೆಯನ್ನು ಹೇಗೆ ಎದುರಿಸುವುದು ಎಂದು ಮೋದಿ ತಂಡ ತಲೆಕೆಡಿಸಿಕೊಂಡು ಕುಳಿತಿದೆ. 

 ರಂಜನ್‌
ರಾಹುಲ್‌ ಇನ್ನೂ ಅಧ್ಯಕ್ಷರಾಗಿಲ್ಲ. ಅವರು ಪಕ್ಷವನ್ನು ಹೇಗೆ ಮುನ್ನಡೆಸುತ್ತಾರೆ ಎನ್ನುವ ಬಗ್ಗೆ ಈಗಲೇ ತೀರ್ಪು ನೀಡುವುದೇಕೆ? ಕಾಲವೇ ಅವರ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಲಿದೆ.

ನೀವೂ ನಮಗೆ
ಟ್ವೀಟ್‌ ಮಾಡಿ @UdayavaniNews

Trending videos

Back to Top