CONNECT WITH US  

ಮಾಸ್ಕ್ ಧರಿಸಿದ ಲಂಕಾ ಆಟಗಾರರು: ಏನಂತಾರೆ ಟ್ವೀಟಿಗರು?

 ರಾಹುಲ್‌ ಹ್ಯಾರಿ 
ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಮುಜುಗರ ಉಂಟುಮಾಡಿದ ಘಟನೆಯಿದು. ಶ್ರೀಲಂಕಾ ಆಟಗಾರರು ದೆಹಲಿ ವಾಯುಮಾಲಿನ್ಯದಿಂದಾಗಿ ಮಾಸ್ಕ್ ಧರಿಸಿ ಮೈದಾನಕ್ಕಿಳಿದಿದ್ದನ್ನು ನೋಡಿ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಾಚಿಕೆಯಾಗಬೇಕಿತ್ತು.

 ಮೈವೋಟ್‌ಟುಡೆ
ವಿರಾಟ್‌ ಕೊಹ್ಲಿ ಮಾಸ್ಕ್ ಇಲ್ಲದೆ ಎರಡು ದಿನ ಬ್ಯಾಟಿಂಗ್‌ ಮಾಡಬಲ್ಲರು, ಆದರೆ ಶ್ರೀಲಂಕ ಆಟಗಾರರಿಗೆ ಏಕೆ ಸಾಧ್ಯ ವಾಗಲಿಲ್ಲ? ಏಕೆಂದರೆ ಅವರಿಗೆ ಎರಡೆರಡು ದಿನ ಬ್ಯಾಟಿಂಗ್‌ ಮಾಡಲು ಬರುವುದಿಲ್ಲ! 

 ಪೀಟರ್‌ ಪೈರ್ಸ್‌
ಅದೆಲ್ಲ ಸರಿ. ಶ್ರೀಲಂಕಾ ಆಟಗಾರರು ಬ್ಯಾಟಿಂಗ್‌ಗೆ ಬಂದದ್ದೇ ಮಾಸ್ಕ್ ಬಿಚ್ಚಿಟ್ಟಿದ್ದೇಕೆ? ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ ಮಾಸ್ಕ್ ಧರಿಸಿರಲಿಲ್ಲ. ಅಲ್ಲಿ ಪ್ರೇಕ್ಷಕರಿಗ್ಯಾರಿಗೂ  ಹೊಗೆಮಂಜಿನ ಸಮಸ್ಯೆಯಾಗಲಿಲ್ಲ. 

 ಸಲ್ಮಾನ್‌ ಖರ್ಬರಿ
ಹೊಗೆಮಂಜಿನಿಂದ ಬಾಲ್‌ ಸ್ವಿಂಗ್‌ ಆಯಿತೋ ಇಲ್ಲವೋ ತಿಳಿಯದು, ಆದರೆ ಶ್ರೀಲಂಕಾ ಆಟಗಾರರಿಗೆ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ "ಮೂಡ್‌ ಸ್ವಿಂಗ್‌'ಗೆ ಕಾರಣ ವಾಗಿದ್ದಂತೂ ಸತ್ಯ. 

 ಕ್ರಿಕೆಟ್‌ವಾಲಾ
ಸುಮ್ಮನೇ ಬಿಟ್ಟಿದ್ದರೆ ಶ್ರೀಲಂಕಾ ಆಟಗಾರರು ಆಕ್ಸಿಜನ್‌ ಮಾಸ್ಕ್ ಧರಿಸಿ ಬರುತ್ತಿದ್ದರು, ಅದಾದ ನಂತರ ಸ್ವಲ್ಪ ಸಮಯದ ನಂತರ ಒಂದು ಜೊತೆ ಹೊಸ ಶ್ವಾಸಕೋಶ ಧರಿಸಿ ಬರುತ್ತಿದ್ದರು! 

 ಹಿಮಾಂಶು
ದೆಹಲಿಗರಷ್ಟೇ ಅಲ್ಲ, ಭಾರತೀಯರೆಲ್ಲರಿಗೂ ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯದ ಬಗ್ಗೆ ಗೊತ್ತೇ ಇದೆ. ಶ್ರೀಲಂಕನ್‌ ಕ್ರಿಕೆಟರ್‌ಗಳು ಮಾಸ್ಕ್ ಧರಿಸಿದ್ದು ಸರಿಯೋ ತಪ್ಪೋ ಎನ್ನುವುದು ಬೇರೇ ವಿಚಾರ. ಸತ್ಯ ವೇನೆಂದರೆ ಮಾಸ್ಕ್ ಧರಿಸಿ ಅವರು ಭಾರ ತದ ಸಮಸ್ಯೆಯನ್ನು ಜಗಜ್ಜಾಹೀರು ಮಾಡಿದ್ದಾರೆ. 

 ಅಭಿಷೇಕ್‌ ದತ್‌ 
ವಾಯುಮಾಲಿನ್ಯದ ಸಮಸ್ಯೆಯಿಂದ ಆಟಗಾರರು ಬಳಲುತ್ತಿದ್ದರೆ, ಅತ್ತ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮಾತ್ರ ಗುಜರಾತ್‌ನಲ್ಲಿ ಪ್ರಚಾರ ಮಾಡಲು ಹೋಗುತ್ತಾರೆ!

 ಸ್ವಪ್ನಿಲ್‌ ಎಸ್‌ 
ಶ್ರೀಲಂಕಾ ಕ್ರಿಕೆಟಿಗರು ಎಂಥಾ ಲೂಸರ್‌ಗಳೆಂದು ಈಗ ಅರ್ಥವಾಯಿತು. ಅವರ ವರ್ತನೆ ನೋಡಿದರೆ ಅಂತಾರಾಷ್ಟ್ರೀಯ ಆಟಗಾರರೋ ಗಲ್ಲಿ ಕ್ರಿಕೆಟರ್‌ಗಳ್ಳೋ ಎಂದು ಗೊಂದಲವಾಗುತ್ತದೆ. 

 ವಸೂಲಿಭಯ್‌
ದೆಹಲಿಗರು ತಮ್ಮ ರಾಜ್ಯವನ್ನು ನರಕಸದೃಶವಾಗಿಸಿದ ರಾಜಕಾರಣಿಗಳನ್ನು ಪ್ರಶ್ನಿಸುವ ಬದಲು, ಮಾಸ್ಕ್ ಧರಿಸಿದ ಶ್ರೀಲಂಕನ್ನರನ್ನು ಟ್ರಾಲ್‌ ಮಾಡುತ್ತಿದ್ದಾರೆ. ಎಂಥ ದುರಂತವಿದು. 

 ಐಆ್ಯಮ್‌ವಿಜೆ
ಅತ್ಯುತ್ತಮ ಆ್ಯಕ್ಟಿಂಗ್‌ ಮತ್ತು ಓವರ್‌ ಆ್ಯಕ್ಟಿಂಗ್‌ಗಾಗಿ ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಆಸ್ಕರ್‌ ಪ್ರಶಸ್ತಿ ನೀಡಿ ಗೌರವಿಸಬೇಕು.

 ರವೀನಾ
ಶ್ರೀಲಂಕಾ ಆಟಗಾರರು ಬ್ಯಾಟ್‌ ಹಿಡಿದದ್ದೇ ವಾಯುಮಾಲಿನ್ಯ ಮಟ್ಟ ಝೀರೋ ತಲುಪಿಬಿಟ್ಟಿತಾ? ಹಾಗಿದ್ದರೆ ಇನ್ಮುಂದೆ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾದಾಗಲೆಲ್ಲ ಲಂಕಾ ಕ್ರಿಕೆಟಿಗರನ್ನು ಕರೆಸಿಕೊಳ್ಳೋಣ! 


Trending videos

Back to Top