CONNECT WITH US  

ಪಾಕ್‌ಗೆ ಪಾಠ ಕಲಿಸಿದ ಭಾರತೀಯ ಸೇನೆ.ಟ್ವೀಟಿಗರೇನಂತಾರೆ?

 ರೀತಾಜಿ
ಕುಲಭೂಷಣ್‌ರನ್ನು ಭೇಟಿ ಮಾಡಿಸುವ ಮುನ್ನ ಅವರ ಪತ್ನಿಯಿಂದ ಬಳೆ ಬಿಚ್ಚಿಸಿಕೊಳ್ಳಲಾಯಿತಂತೆ. ಬಹುಶಃ ಆ ಬಳೆಗಳನ್ನು ಪಾಕಿಸ್ತಾನ ತನ್ನ ಸೈನಿಕರಿಗೆ ಕೊಡಲು ಬಯಸಿತ್ತೇನೋ?!

 ಮೇಜರ್‌ ಗೌರವ್‌ ಆರ್ಯ
ಭಾರತದ ಸೇನಾ ಕಮಾಂಡೋಗಳು ನಡೆಸಿದ ದಾಳಿಯಲ್ಲಿ ಪಾಕ್‌ ಸೈನಿಕರು ಹತರಾಗಿದ್ದಾರೆ. ಈ ದಾಳಿ ಬಹಳ ಪ್ರಸ್ತುತವಾಗಿದೆ. ಏಕೆಂದರೆ ನಾವು ಗಡಿನಿಯಂತ್ರಣ ರೇಖೆಯನ್ನು ದಾಟಿ ನಿರ್ದಿಷ್ಟವಾಗಿ ಪಾಕ್‌ ಸೈನಿಕರನ್ನೇ ಗುರಿಯಾಗಿಸಿದ್ದೇವೆ. ಇದು ಪಾಕಿಸ್ತಾನ ಸೇನೆಗೆ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತಿದೆ. "ನಾವು ನಿಮ್ಮನ್ನು ಗಮನಿಸುತ್ತಿದ್ದೇವೆ, ನಾವು ನಿಮ್ಮನ್ನು ಹುಡುಕುತ್ತೇವೆ. ನಾವು ನಿಮ್ಮನ್ನು ಕೊಂದುಹಾಕುತ್ತೇವೆ' ಎಂಬ ಸಂದೇಶವಿದು! 

 ಸರ್‌ರವೀಂದ್ರ
ಭಾರತೀಯ ಸೈನಿಕರು 2ನೇ ಸರ್ಜಿಕಲ್‌ ದಾಳಿ ನಡೆಸಿ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಈಗ ಅರವಿಂದ್‌ ಕೇಜ್ರಿವಾಲ್‌ "ದಾಳಿಗೆ ಪುರಾವೆ ಕೊಡಿ' ಎಂದು ಕೇಳಬಹುದು! ರಾಹುಲ್‌ ಗಾಂಧಿಯವರು ಇದನ್ನು "ರಕ್ತದ ವ್ಯಾಪಾರ' ಎಂದು ಹೇಳಬಹುದು! 

 ಸುಶ್ಮಿತಾಸಿ
ಪಾಕಿಸ್ತಾನ ಗಡಿಯಲ್ಲಷ್ಟೇ ಭಾರತಕ್ಕೆ ತೊಂದರೆ ಕೊಡುತ್ತಿಲ್ಲ ಎನ್ನುವುದು ಜಾಧವ್‌ತಾಯಿ ಮತ್ತು ಪತ್ನಿಯನ್ನು ಅದು ಅವಮಾನಿಸಿದ್ದು ನೋಡಿದರೆ ತಿಳಿಯುತ್ತಿಲ್ಲವೇ? ಇನ್ನೊಂದೆಡೆ ಭಾರತವು ಪಾಕಿಸ್ತಾನದ ರೋಗಿಗಳಿಗೆ ಎಷ್ಟು ಔದಾರ್ಯದಿಂದ ಚಿಕಿತ್ಸೆ ಕೊಟ್ಟು ಕಳುಹಿಸುತ್ತಿದೆ ನೋಡಿ. ಕಣಕಣದಲ್ಲೂ ಕ್ರೌರ್ಯ ತುಂಬಿಕೊಂಡಿರುವ ಪಾಕಿಸ್ಥಾನಕ್ಕೆ ಇಂಥ ಮಾನವೀಯತೆ ಸಿದ್ಧಸಲು ಸಾಧ್ಯವೇ ಇಲ್ಲ. 

 ತೋತ್ಲಾನಿ ಕೃಷ್ಣ
ಪಾಕ್‌ಗೆ ಪೆಟ್ಟು ಕೊಟ್ಟೇ ಬುದ್ಧಿಕಲಿಸಬೇಕು. ಏಕೆಂದರೆ ಅದಕ್ಕೆ ಬೇರೆ ಭಾಷೆಯೇ ಅರ್ಥವಾಗುವುದಿಲ್ಲ. 

 ತೂಜಾನೇನಾ
ಪಾಕಿಸ್ತಾನ ಕುಲಭೂಷಣ್‌ ಯಾದವ್‌ ಪತ್ನಿಯ ಚಪ್ಪಲಿ ಕದಿಯುತ್ತದೆ. ಇಂಥ ಚಪ್ಪಲಿ ಕಳ್ಳ ರಾಷ್ಟ್ರ, ಬೂಟು ತೊಟ್ಟು ಮುನ್ನಡೆಯುತ್ತಿರುವ ಭಾರತಕ್ಕಿಂತ ಯಾವಾಗಲೂ ಹಿಂದೆಯೇ ಉಳಿಯಲಿದೆ. 

 ಕದಮ್‌ ಸೇನ್‌
ಭಾರತೀಯ ಸೇನೆ ಸರಿಯಾಗಿ ಪ್ರತೀಕಾರ ತೀರಿಸಿಕೊಂಡಿದೆ. ಇನ್ಮುಂದೆ ಸಕ್ರಿಯವಾಗಿ ಇಂಥ ಇನ್ನಷ್ಟು ದಾಳಿಗಳನ್ನು ಭಾರತ ಪಾಕ್‌ ಮೇಲೆ ನಡೆಸಬೇಕು. ಸರಳವಾಗಿ ಹೇಳಬೇಕೆಂದರೆ, ಇಸ್ರೇಲ್‌ನಂತೆ ನಾವು ಶತ್ರುರಾಷ್ಟ್ರಗಳನ್ನು ಮೆತ್ತಗೆ ಮಾಡಬೇಕು. 

 ಹರೀಶ್‌ಸೋಮ್‌
ಬಹುಶಃ ಪಾಕಿಸ್ತಾನಕ್ಕೆ ತನ್ನ ಕೃಪಾಪೋಷಿತ ಉಗ್ರ ಸಂಘಟನೆಗಳನ್ನು ಸಂಭಾಳಿಸಲು ಸಾಧ್ಯವಾಗುತ್ತಿಲ್ಲ ಎನಿಸುತ್ತದೆ. ಅದಕ್ಕೇ ಅದು ಅವನ್ನೆಲ್ಲ ಭಾರತದತ್ತ ಕಳುಹಿಸಿ, ಭಾರತೀಯ ಸೇನೆಯಿಂದ ನಾಶ ಮಾಡಿಸುತ್ತಿದೆ! 

 ವಿಕಾಸ್‌
ಪಾಕಿಸ್ತಾನ ತಾನು ಕಾರ್ಗಿಲ್‌ ಯುದ್ಧದಲ್ಲಿ ಸೋತದ್ದನ್ನು ಇಂದಿಗೂ ಒಪ್ಪಿಕೊಳ್ಳುತ್ತಿಲ್ಲ. ಹೀಗಿರುವಾಗ ಅದು ಗಡಿಯಾಚೆಗಿಂದ ನಡೆಸುವ ಫೈರಿಂಗ್‌ಗಳನ್ನು ಒಪ್ಪಿಕೊಂಡುಬಿಡುತ್ತದಾ?

Trending videos

Back to Top