CONNECT WITH US  

ಪಾಕ್‌ಗೆ ನೆರವು ನಿಲ್ಲಿಸಲು ಟ್ರಂಪ್‌ ನಿರ್ಧಾರ

 ಇಮ್ರಾನ್‌ ಖಾನ್‌
ಜಿಹಾದಿ ಗುಂಪುಗಳನ್ನು ಸೃಷ್ಟಿಸಲು ನಾವು ಸಿಐಎಗೆ ಸಹಾಯ ಮಾಡುತ್ತಾ ಹೋದಂತೆ ನಮ್ಮ ಸಮಾಜ ಮೂಲಭೂತವಾದದತ್ತ ಹೊರಳತೊಡಗಿತು. ಒಂದು ದಶಕದ ನಂತರ ನಾವು ಅಮೆರಿಕದ ಆಜ್ಞೆಯ ಮೇರೆಗೆ ಅವರನ್ನು ಉಗ್ರವಾದಿಗಳೆಂದು ಕೊಲ್ಲಲಾರಂಭಿಸಿದೆವು. ಇನ್ನೊಂದು ಬಾರಿ ಪಾಕಿಸ್ತಾನ ತಾತ್ಕಾಲಿಕ ಆರ್ಥಿಕ ಲಾಭಕ್ಕಾಗಿ ಯಾರ ಮೇಲೂ ಅವಲಂಬಿತವಾಗಬಾರದು ಎಂಬ ಪಾಠವನ್ನು ನಾವು ಅಮೆರಿಕದಿಂದ ಕಲಿಯಬೇಕು. 

 ತವ್ಲೀನ್‌ ಸಿಂಗ್‌
ಹಫೀಜ್‌ ಸಯೀದ್‌ ಪಾಕಿಸ್ತಾನದ ಹೀರೋ ಎಂದು ಜನರಲ್‌ ಪರ್ವೇಜ್‌ ಮುಶರ್ರಫ್ ಬಹಿರಂಗವಾಗಿ ಹೇಳಿದ್ದಾರೆ. ಪಾಕಿಸ್ತಾನಿ ಸೇನೆ ಕಾಶ್ಮೀರದಲ್ಲಿ ಹೊಡೆದಾಡಲು ಜಿಹಾದಿ ಉಗ್ರರನ್ನು ಸೃಷ್ಟಿಸಿತು ಎನ್ನುವುದನ್ನೂ ಅವರು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಪಾಕ್‌ನ ವಿದೇಶಾಂಗ ಸಚಿವರು "ಟ್ರಂಪ್‌ ಭಾರತದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ' ಎಂದು ಹೇಳುವುದು ಅತಿಯಾಯಿತು!

 ಫ‌ಹಾದ್‌ ಮಲಿಕ್‌
ಟ್ರಂಪ್‌ ಅವರೇ, ಅಫ್ಘಾನಿಸ್ತಾನದಲ್ಲಿನ "ನಿಮ್ಮ ಯುದ್ಧ'ಕ್ಕೆ ನಾವು ಬೆಂಬಲ ನೀಡಿದೆವು. "ನಿಮ್ಮ ಯುದ್ಧ'ವನ್ನು ನಾವು ನಮ್ಮ ಪಾಕಿಸ್ತಾನಕ್ಕೆ ತಂದೆವು. "ನಿಮ್ಮ ಯುದ್ಧ'ದಲ್ಲಿ ನಮ್ಮ ಯೋಧರನ್ನು ಬಲಿಕೊಟ್ಟೆವು. ನಮಗೆ ನಿಮ್ಮ ಹಣ ಬೇಕಿಲ್ಲ. 

 ಸೋನಮ್‌ ಮಹಾಜನ್‌
ಪಾಕಿಸ್ತಾನಕ್ಕೆ ಭದ್ರತೆ ಮತ್ತು ಮಿಲಿಟರಿ ನೆರವನ್ನು ನಿಲ್ಲಿಸುವ ಟ್ರಂಪ್‌ರ ನಿರ್ಧಾರದಿಂದ ಪಾಕಿಗಳೆಲ್ಲ ಮುನಿಸಿಕೊಂಡಿದ್ದಾರೆ. ಉಗ್ರವಾದಿ ಹಫೀಜ್‌ ಸಯೀದ್‌ನ ಬೆಂಬಲಿಗರು ಬೀದಿಗಿಳಿದು ಅಮೆರಿಕದ ಧ್ವಜವನ್ನು ಸುಡುತ್ತಿದ್ದಾರೆ. ಇದೇ ಹಫೀಜ್‌ ಸಯೀದ್‌ ಅಮೆರಿಕದ ನಾಶವನ್ನು ಬಯಸುತ್ತಾನೆ. ಇದೆಂಥ ವೈರುಧ್ಯ ನೋಡಿ. ಒಂದೆಡೆ ಇವರಿಗೆಲ್ಲ ಕಾಫಿರರನ್ನು ಕಂಡರೆ ಆಗುವುದಿಲ್ಲ. ಇನ್ನೊಂದೆಡೆ ಇದೇ ಕಾಫಿರರ ಹಣದ ಮೇಲೆ ಪ್ರೀತಿ. ಪರಾವಲಂಬಿ ಜೀವಿಗಳು ಬದುಕುವುದೇ ಹೀಗೆ!

 ರಾಜೀವ್‌ ಮಲ್ಹೋತ್ರಾ
ಚೀನಾ ಮತ್ತು ಪಾಕಿಸ್ತಾನದ ಅಪವಿತ್ರ ಮೈತ್ರಿ ಆಗಲೇ ಬಲಿಷ್ಟವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಟವಾಗಲಿದೆ. ಈ ವಿಷಯದಲ್ಲಿ ಭಾರತಕ್ಕೆ ಏನೂ ಮಾಡಲಾಗುವುದಿಲ್ಲ. ಅಮೆರಿಕ ಕೊನೆಗೂ ಈ ವಿಷಯವನ್ನು ಅರ್ಥಮಾಡಿಕೊಂಡಿದ್ದು ಒಳ್ಳೆಯದಾಯಿತು. 

ಸಾರ್‌ಕಾಸ್ಟಿಕ್‌ ಆಖೀ
ಕಿಮ್‌ ಜಾಂಗ್‌ ಉನ್‌: ನನ್ನ ಟೇಬಲ್‌ ಮೇಲೆ ಪರಮಾಣು ಶಸ್ತ್ರಾಸ್ತ್ರದ ಬಟನ್‌ ಇದೆಡೊನಾಲ್ಡ್‌ ಟ್ರಂಪ್‌: ನನ್ನ ಟೇಬಲ್‌ ಮೇಲೆ ನಿಮಗಿಂತಲೂ ದೊಡ್ಡ ಬಟನ್‌ ಇದೆ. 
ಪಾಕಿಸ್ತಾನ: ಅಯ್ಯೋ, ಯಾರ ಮೇಲೆ ಬಾಂಬ್‌ ಹಾಕ್ತೀರಿ ಮೊದುÉ ಹೇಳೊÅà....!

 ಅರಿಜೋನಾ ಬಾಯ್‌
ನನ್ನ ಮೊದಲ ಪ್ರಶ್ನೆ ಏನೆಂದರೆ ಅದೇಕೆ ಅಮೆರಿಕ ಇಷ್ಟು ವರ್ಷಗಳಿಂದ ಪಾಕಿಸ್ತಾನಕ್ಕೆ ನೆರವು ನೀಡುತ್ತಾ ಬಂದಿತು ಎನ್ನುವುದು? ಬಿನ್‌ ಲಾಡೆನ್‌ ಸತ್ತಾಗಲೇ ಅದು ಹಣ ಬೆಂಬಲ ಕೊಡುವುದನ್ನು ನಿಲ್ಲಿಸಬಹುದಿತ್ತಲ್ಲವೇ?

 ತೂಜಾನೇನಾ
ಅಮೆರಿಕ ಪಾಕ್‌ ಪ್ರಹಸನದಲ್ಲಿ ನಿಜಕ್ಕೂ ಬಯಲಾಗಿರುವುದು ಚೀನಾದ ಬಣ್ಣ. ಅದು ಪಾಕಿಸ್ತಾನವನ್ನು ಬೆಂಬಲಿಸಲು ಒಂದಿಷ್ಟೂ ತಡ ಮಾಡಲಿಲ್ಲ. ಭಾರತ ಮತ್ತು ಅಮೆರಿಕವನ್ನು ಕಾಡಿಸಲು ಅದಕ್ಕೆ ಪಾಕ್‌ ಎಂಬ ಪಾಪಿ ರಾಷ್ಟ್ರ ಬೇಕೇ ಬೇಕು. ಅತ್ತ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನನ್ನು ಚೀನಾ ಬೆಂಬಲಿಸುವುದಕ್ಕೂ ಅಮೆರಿಕ ವಿರುದ್ಧದ ಅದರ ದ್ವೇಷವೇ ಕಾರಣ. ಜಗತ್ತು 
ಈಗ ನಿಜಕ್ಕೂ ಕೆಂಗಣ್ಣು ಬೀರಬೇಕಿರುವುದು ಚೀನಾದತ್ತ. 

ರಂಜಿತ್‌ ಸುಮವ್‌
ನೋಡ್ತಾ ಇರಿ. ಕೆಲವೇ ದಿನಗಳಲ್ಲಿ ಟ್ರಂಪ್‌ ತಮ್ಮ ನಿಲುವನ್ನು ಬದಲಿಸುತ್ತಾರೆ. ಅಮೆರಿಕಕ್ಕೆ ಜಗತ್ತು ಅಶಾಂತವಾಗಿದ್ದರೆ ಮಾತ್ರ ಲಾಭ. ಶಾಂತ ಲೋಕದಲ್ಲಿ ಶಸ್ತ್ರಾಸ್ತ್ರ ಮಾರುವುದು ಸುಲಭವಲ್ಲವಲ್ಲ?!

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews


Trending videos

Back to Top