CONNECT WITH US  

ಆಪ್‌ಗೆ ಚುನಾವಣಾ ಆಯೋಗದ ಚಾಟಿ.ಏನನ್ನುತ್ತೆ ಟ್ವಿಟರಾಟಿ?

 ಸಂಜಯ್‌ ನಿರುಪಮ್‌
ವಿವಿಐಪಿ ಸಂಸ್ಕೃತಿಯನ್ನು ವಿರೋಧಿಸಿಯೇ ಆಪ್‌ ಎಂಬ ನವ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬಂದದ್ದು. ಆದರೆ ವಿವಿಐಪಿ ಸ್ಥಾನ ದಕ್ಕಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ ಅದರ 20 ಶಾಸಕರು. ಲಾಭದಾಯಕ ಹುದ್ದೆಯೆಂಬ ಹೆಸರು ಅದಕ್ಕೆ. ಎಂಥ ವಿರೋಧಾಭಾಸ! 

 ಅನ್ಶುಲ್‌ ಸಕ್ಸೇನಾ
ಲಾಭದಾಯಕ ಹುದ್ದೆ ಹೊಂದಿರುವ ಆಪ್‌ನ ಇಪ್ಪತ್ತು ಶಾಸಕರನ್ನು ಅನರ್ಹಗೊಳಿಸಲು ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದೆ. ಈಗ ಚೆಂಡು ಕೋವಿಂದ್‌ ಅವರ ಅಂಗಳದಲ್ಲಿದೆ. ಇದಷ್ಟೇ ಅಲ್ಲ, ಚುನಾವಣಾ ಆಯೋಗ, ಈ 20 ಜನರು ಇಲ್ಲಿಯವರೆಗಿನ ತಮ್ಮ ಸಂಬಳವನ್ನು ಹಿಂದಿರುಗಿಸಬೇಕೆಂದು ಶಿಫಾರಸು ಮಾಡಬೇಕು. ತೆರಿಗೆದಾರರ ಹಣ ಹಾಳಾಗಬಾರದು. 

 ಮನೋಜ್‌ ನಾಯ್ಡು
ಕೇಜ್ರಿವಾಲರ ಪಕ್ಷ 20 ಜನರನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಕುಮಾರ್‌ ವಿಶ್ವಾಸ ಬೆನ್ನಿಗೆ ಕನಿಷ್ಠ 15 ಶಾಸಕರಾದರೂ ಇದ್ದಾರೆ. ಆಪ್‌ನ ಬೆನ್ನುಮೂಳೆ ಈಗ ವಿಶ್ವಾಸರ ವಿಶ್ವಾಸದಲ್ಲೇ ಇದೆ! 

 ದೇಸೀ ಆಪ್ಟಿಮಿಸ್ಟಿಕ್‌
ಏನೇ ಆಗಲಿ, ಬಹಳ ದಿನಗಳ ನಂತರ ಅರವಿಂದ ಕೇಜ್ರಿವಾಲ್‌ ಮತ್ತು ಅವರ ಆಮ್‌ ಆದ್ಮಿ ಪಕ್ಷ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದನ್ನು ನೋಡಿದಾಗ ಹಳೆಯ ದಿನಗಳೆಲ್ಲ ನೆನಪಾಗುತ್ತಿವೆ! 

 ಅನಿಕೇತ್‌ ಸಕ್ಸೇನಾ
ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯೋ ಅಲ್ಲವೋ ಎನ್ನುವ ಅನುಮಾನ ಬರುತ್ತಿದೆ. ಲಾಭದಾಯಕ ಹುದ್ದೆಯಲ್ಲಿರುವವರು ಕೇವಲ ಆಪ್‌ನಲ್ಲಷ್ಟೇ ಇದ್ದಾರೇನು? ಬಿಜೆಪಿ ಮತ್ತು ಕಾಂಗ್ರೆಸ್‌ನ ನಾಯಕರೆಲ್ಲ ಪ್ರಾಮಾಣಿಕರಾ? 

 ವಿಜಯ್‌ ಜಾಲಿ
ಚುನಾವಣಾ ಆಯೋಗದ ತೀರ್ಮಾನ ದೆಹಲಿ ಸರ್ಕಾರಕ್ಕಷ್ಟೇ ಅಲ್ಲ, ನ್ಯಾಯಯುತ ಆಡಳಿತದ ಬಗ್ಗೆ ಮಾತನಾಡುವ ಆಪ್‌ ಪಕ್ಷದ ಪಾಲಿಗೂ ಕೊನೆಯ ಮೊಳೆ. 

 ಆತಿಫ್ ಬಿ
ನಾವು ಆಪ್‌ ಆಡಳಿತವನ್ನು ನೋಡಿದ್ದೇವೆ. ಒಂದು ವೇಳೆ ಆ 20 ಸ್ಥಾನಗಳಿಗೆ ಈಗ ಚುನಾವಣೆ ನಡೆದರೂ ಆಮ್‌ ಆದ್ಮಿ ಪಕ್ಷವೇ ಗೆಲ್ಲುತ್ತದೆ. ದೆಹಲಿಗೆ ಬಿಜೆಪಿ ಅಥವಾ ಕಾಂಗ್ರೆಸ್‌ ಬೇಕಿಲ್ಲ. ಅಭಿವೃದ್ಧಿಪರ ಆಪ್‌ ಬೇಕು. 

 ಅಜಿತ್‌ ಪಿ
ಅಣ್ಣ ತಮ್ಮಂದಿರೇ...ಚುನಾವಣಾ ಆಯೋಗದ ಶಿಫಾರಸಿನಿಂದ ನಿಮಗೆ ಸಿಟ್ಟು ಬಂದಿದೆಯೇ? ಹಾಗಿದ್ದರೆ ಕೂಡಲೇ ಆಮ್‌ ಆದ್ಮಿ ಪಕ್ಷಕ್ಕೆ ದೇಣಿಗೆ ನೀಡಿ ಸಹಕರಿಸಿ! 

 ನೈಟ್‌ ವಾಚ್‌ಮನ್‌
ಗಲಭೆ ಸೃಷ್ಟಿಸಿದ, ಕೊಲೆ-ಸುಲಿಗೆ-ಸುಳ್ಳು ಅಫಿಡವಿಟ್‌ ಸಲ್ಲಿಸಿದ ಆರೋಪ ಎದುರಿಸುತ್ತಿರುವವರನ್ನು ಚುನಾವಣಾ ಆಯೋಗ ಅನರ್ಹಗೊಳಿಸುವುದಿಲ್ಲ. ಅದರ ಕೆಂಗಣ್ಣೇನಿದ್ದರೂ ಆಪ್‌ ನಾಯಕರ ಮೇಲೆಯೇ! ಚುನಾವಣಾ ಆಯೋಗವೂ ಡಕ್‌ವರ್ಥ್ ಲೂಯಿಸ್‌ ಪದ್ಧತಿ ಬಳಸುತ್ತದೆ ಅಂತ  ಗೊತ್ತಿರಲಿಲ್ಲ. 

 ಧೀರೇಂದ್ರ ಪ್ರತಾಪ್‌ ಸಿಂಗ್‌
ಆಪ್‌ ಮೇಲಿನ ಭರವಸೆ ಕುಸಿದುಬಿಟ್ಟಿದೆ. ಒಂದು ವೇಳೆ ಕೇಜ್ರಿವಾಲ್‌ರಲ್ಲಿ ನಿಜಕ್ಕೂ ನೈತಿಕತೆ ಇದ್ದರೆ, ಯಾವ ಆಂದೋಲನದಿಂದ ಅವರ ಉಗಮವಾಯಿತೋ ಆ ಆಂದೋಲನದ ಬಗ್ಗೆ ಅವರಿಗೆ ಕಿಂಚಿತ್ತಾದರೂ ಗೌರವ ಇದೆ ಎಂದಾದರೆ, ಕೂಡಲೇ ಅವರು ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಯನ್ನು ಎದುರಿಸಬೇಕು. 

 ಅನುಜ್‌ ಧಾರ್‌                                       
ಯಾವುದೇ ನಿಷ್ಕಲ್ಮಶ ಆಂದೋಲನವಿರಲಿ ಕಾಲಾಂತರದಲ್ಲಿ ಅದರಲ್ಲಿ ಕಲ್ಮಶಕಾರಕ ಅಂಶಗಳು ಸೇರಿಕೊಳ್ಳುತ್ತಾ ಹೋಗುತ್ತವೆ ಎನ್ನುವುದಕ್ಕೆ ಆಮ್‌ ಆದ್ಮಿ ಪಾರ್ಟಿ ಪ್ರಮುಖ ಉದಾಹರಣೆ. ಯಾವ ವಿಷಯಗಳನ್ನು ವಿರೋಧಿಸಿ ಆಪ್‌ ಅಧಿಕಾರಕ್ಕೆ ಬಂದಿತೋ ಅವೇ ವಿಷಯಗಳಲ್ಲಿ ಆರೋಪ ಎದುರಿಸುತ್ತಿದೆ. ಆಪ್‌ನ ವರ್ಚಸ್ಸಿಗೆ ದೊಡ್ಡ ಪೆಟ್ಟು. 

Trending videos

Back to Top