CONNECT WITH US  

ಪದ್ಮಾವತ್‌ಗೆ ಕರ್ಣಿ ಸೇನಾ ಕಿರಿಕ್‌,ಏನನ್ನುತ್ತೆ ಟ್ವೀಟರ್‌ ಲೋಕ?

ಫ‌ರ್ಹಾನ್‌ ಅಖ್ತರ್‌
ಶಾಲಾ ಬಸ್‌ ಮೇಲೆ ದಾಳಿ ಮಾಡುವುದು ಆಂದೋಲನವಲ್ಲ, ಇದು ಆತಂಕವಾದ. ಬಸ್‌ ಮೇಲೆ ದಾಳಿಮಾಡಿದವರು ಉಗ್ರರು. ಇನ್ಮುಂದೆ ಅವರನ್ನೆಲ್ಲ ಉಗ್ರರೆಂದೇ ಕರೆಯಿರಿ. 

 ತನ್ಮಯ್‌ ಭಟ್‌
ಒಂದು ವೇಳೆ ಕರ್ಣಿ ಸೇನಾ ಜೆಎನ್‌ಯುನಲ್ಲಿ ಅಡ್ಮಿಷನ್‌ ಪಡೆಯಿತೆಂದರೆ, ಆಗ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೇನೋ?! 

 ಕತಿ ಮಹೇಶ್‌
ಪದ್ಮಾವತ್‌ ಸಿನೆಮಾದಲ್ಲಿ ರಜಪೂತರನ್ನು ಯಾವ ಪರಿ ವೈಭವೀಕರಿಸಲಾಗಿದೆಯೆಂದರೆ, ಸಿನೆಮಾ ಬಗ್ಗೆ ಕರ್ಣಿ ಸೇನಾಗಿಂತ ವಿಚಾರವಾದಿಗಳಿಗೇ ಹೆಚ್ಚು ತೊಂದರೆಯಾಗಬೇಕು. 

 ವಿವೇಕ್‌ ಅಗ್ನಿಹೋತ್ರಿ 
ಪದ್ಮಾವತ್‌ ಸಿನೆಮಾ ವಿಚಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತನಾಡುತ್ತಿರುವ ಅನೇಕ ಪ್ರಗತಿಪರ ಕಾರ್ಯಕರ್ತರು, ವರ್ಷದ ಹಿಂದೆ ನನ್ನ "ಬುದ್ಧ ಇನ್‌ ಟ್ರಾಫಿಕ್‌ ಜಾಮ್‌' ಚಿತ್ರವನ್ನು ವಿರೋಧಿಸಿದ್ದರು! ಈ ಪ್ರಗತಿಪರರು ಮತ್ತು ಕರ್ಣಿ ಸೇನಾ ನಡುವೆ ನನಗೆ ಕಾಣಿಸುವ ಒಂದೇ ಅಂತರವೆಂದರೆ, ಕರ್ಣಿ ಸೇನಾ ಗೂಂಡಾಗಳಿಗೆ ಇಂಗ್ಲಿಷ್‌ ಮಾತಾಡಲು ಬರುವುದಿಲ್ಲ ಎನ್ನುವುದಷ್ಟೆ. 

 ಒಮರ್‌ ಅಬ್ದುಲ್ಲಾ 
ಅದೇಕೆ ಕರ್ಣಿ ಸೇನೆಯ ಗೂಂಡಾಗಳನ್ನು ಜೀಪುಗಳ ಮುಂಭಾಗದಲ್ಲಿ ಕಟ್ಟಿ ಶಾಲಾ ವಾಹನಗಳು ಮತ್ತು ಸಿನೆಮಾ ಹಾಲ್‌ಗ‌ಳ ಮುಂದೆ ಮೆರವಣಿಗೆ ಮಾಡುತ್ತಿಲ್ಲ? ಗುಂಪು ನಿಯಂತ್ರಣದ ವಿಷಯದಲ್ಲಿ ಹೆಚ್ಚು ಕೊಂಡಾಡಲಾಗುವ ತಂತ್ರವಲ್ಲವೇ ಇದು? 

 ಅರವಿಂದ್‌ ಸ್ವಾಮಿ
ಒಂದು ವೇಳೆ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆಯೆಂದರೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತನ್ನಿ. ನಾಗರಿಕರನ್ನು ಮತ್ತು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಲು ನಿಮಗೆ ಸಾಧ್ಯವಾಗುತ್ತದೋ ಇಲ್ಲವೋ ಹೇಳಿಬಿಡಿ. ನೆಪಗಳು ಬೇಡ. ಯಾರನ್ನೂ ದೂಷಿಸಬೇಡಿ, ಇಲ್ಲಿ ದೂಷಿಸಬೇಕಿರುವುದು ಆಡಳಿತದ ವೈಫ‌ಲ್ಯವನ್ನಷ್ಟೆ.

 ಮಹಿಮಾ ಕುಕ್ರೇಜಾ
ವಯಸ್ಸಲ್ಲಿ ಪ್ರೌಢ ಎನಿಸಿಕೊಳ್ಳುವವರು ಒಂದು ಸಿನೆಮಾ ವಿಚಾರದಲ್ಲಿ ಮಕ್ಕಳ ಮೇಲೆ ದಾಳಿ ಮಾಡುವುದನ್ನು ನೋಡಬೇಕೆಂದರೆ ಭಾರತಕ್ಕೆ ಬನ್ನಿ! 

ಪ್ರಿಟೆಕ್ಸ್ಟ್
2018: ರಜಪೂತರು ಶಾಲಾ ಮಕ್ಕಳ ವಿರುದ್ಧದ ಮೊದಲ ಯುದ್ಧದಲ್ಲಿ ಗೆಲುವು ಸಾಧಿಸಿದ ವರ್ಷ! 

 ಸುಚಿ ಸಿಂಗ್‌ ಕಾಲ್ರಾ 
ಪದ್ಮಾವತ್‌ ಸಿನೆಮಾವನ್ನು 3ಡಿಯಲ್ಲಿ ನೋಡಬೇಡಿ. ನಿಮ್ಮ ದಿಕ್ಕಿನಲ್ಲಿ ಹರಿದು ಬರುವ ಬಾಣ ಕರ್ಣಿ ಸೇನಾದ್ದೂ ಇರಬಹುದು! 

ಬಾಯ್‌ರಿಝ್
ಪದ್ಮಾವತ್‌ ಇದುವರೆಗಿನ ಅತಿದೊಡ್ಡ ಸಸ್ಪೆನ್ಸ್‌ ಸಿನೆಮಾ. ಸಿನೆಮಾ ಅಂತ್ಯದವರೆಗೂ ಯಾರು ಸಾಯುತ್ತಾರೆ ಎನ್ನುವುದು ನಿಮಗೆ ಗೊತ್ತೇ ಆಗುವುದಿಲ್ಲ. ಖೀಲ್ಜಿ ಸಾಯುತ್ತಾನೋ, ಪದ್ಮಾವತಿಯೋ ಅಥವಾ ಪ್ರೇಕ್ಷಕರೋ ಎನ್ನುವ ಕುತೂಹಲ ಕೊನೆಯವರೆಗೂ ಇರುತ್ತದೆ!

 ವರುಣ್‌ ಗ್ರೋವರ್‌
ಕರ್ಣಿ ಸೇನಾ ಶಾಲಾ ಬಸ್‌ ಮೇಲೆ ದಾಳಿ ಮಾಡದೇ ಇರುತ್ತಿದ್ದರೂ ಅದು ಕ್ರಿಮನಲ್‌ಗ‌ಳ ಗುಂಪೇ ಸರಿ. ಬಿಜೆಪಿಯ ಬೆಂಬಲಿಗರು ಈಗ ಕರ್ಣಿ ಸೇನಾವನ್ನು ವಿರೋಧಿಸುತ್ತಿದ್ದಾರೆ. ಅದೂ ಶಾಲಾ ವಾಹನದ ಮೇಲೆ ದಾಳಿಯಾಯಿತು ಎನ್ನುವ ಕಾರಣಕ್ಕಾಗಿ. ಇದೇ ಕಿಡಿಗೇಡಿಗಳ ಗುಂಪು ಸಿನೆಮಾ ಕೆಲಸಗಾರರ ಮೇಲೆ ದಾಳಿ ಮಾಡಿದಾಗ, ತಲೆ ಕಡಿಯಲು ಇನಾಮು ಘೋಷಿಸಿದಾಗ ಬಿಜೆಪಿ ಬೆಂಬಲಿಗರೆಲ್ಲ ಸುಮ್ಮನಿದ್ದರು. 

 ತೂಜಾನೇನಾ 
ದೇಶವನ್ನು ಜಾಗತಿಕ ಶಕ್ತಿಯಾಗಿ ಬೆಳೆಸುವ ಕನಸು ಕಾಣುತ್ತಿರುವ ನಮಗೆ ದೇಶದೊಳಗಿನ ದುಷ್ಟ ಶಕ್ತಿಗಳನ್ನು ತಡೆಯುವ ಶಕ್ತಿಯಿಲ್ಲ! 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

ಇಂದು ಹೆಚ್ಚು ಓದಿದ್ದು

ಯಕ್ಷಗಾನ ಬಣ್ಣಗಾರಿಕೆ ಶಿಬಿರದ ಸಭಾ ಕಾರ್ಯಕ್ರಮ ನಡೆಯಿತು.

Nov 19, 2018 03:30pm

ಶ್ರೀ ರಾಮಕೃಷ್ಣ ಬಾಲಕಾಶ್ರಮದ ಸ್ವಾಮಿ ಧರ್ಮವ್ರತಾನಂದಜಿ ಆಶೀರ್ವಚನ ನೀಡಿದರು.

Nov 19, 2018 03:22pm

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಮಾತನಾಡಿದರು.

Nov 19, 2018 12:42pm

ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ಕೈದಿಗಳು ಸಮವಸ್ತ್ರ ತಯಾರಿಸುವ ಕೇಂದ್ರ.

Nov 19, 2018 05:29pm

Trending videos

Back to Top