CONNECT WITH US  

ಕಾಂಗ್ರೆಸ್‌ ಬಿಜೆಪಿ ಪಕೋಡ ತೂರಾಟ. ಏನನ್ನುತ್ತೆ ಟ್ವೀಟರ್‌?

 ರಂಗೀಲಾಡಿ
ಸಂತಾ ಪಕೋಡ ಅಂಗಡಿಗೆ ಫೋನ್‌ ಮಾಡಿ ಆರ್ಡರ್‌ ಮಾಡಿದ. ಆದರೆ ಪಕೋಡ ಡೆಲಿವರಿ ಬಾಯ್‌ 1 ಗಂಟೆ ತಡವಾಗಿ ಬಂದ. 
ಸಂತಾ: ಯಾಕ್ರೀ ಇಷ್ಟು ಲೇಟು?
ಡೆಲಿವರಿ ಬಾಯ್‌: ಯಾಕೆ ಲೇಟಾ? ಹೌದ್ರಿ ಲೇಟಾಗಿ ಬರ್ತೀವಿ ನಾವು.  ಪಿಜ್ಜಾ ಲೇಟಾಗಿ ಬಂದ್ರೆ ನೀವು ಹೀಗೇ ಮಾತಾಡ್ತೀರಾ? ನಿಮಗೆ ಭಾರತದ ಪಕೋಡಕ್ಕಿಂತ  ಇಟಲಿ ಮೂಲದ ಪಿಜ್ಜಾನೇ ಇಷ್ಟ ಅಲ್ವಾ?!

ಹಂಟಿಂಗ್‌ ಹಂಟರ್ಸ್‌
ಅರವಿಂದ್‌ ಕೇಜ್ರಿವಾಲ್‌: ಪಕೋಡ ರಹಸ್ಯ ಈಗ ಅರ್ಥವಾಯಿತು.  
ಮಾಧ್ಯಮಗಳು: ಏನು ಅರ್ಥವಾಯಿತು ಸರ್‌?
ಅರವಿಂದ್‌ ಕೇಜ್ರಿವಾಲ್‌: ಅದಕ್ಕೆ ಬಳಸಲಾಗುವ ತೈಲ ಅದಾನಿ ಕಂಪನಿಯದ್ದು, ಗ್ಯಾಸ್‌ ಅಂಬಾನಿ ಕಂಪನಿಯದ್ದು, ಕಡಲೆಹಿಟ್ಟು ಬಾಬಾ ರಾಮ್‌ದೇವ್‌ ಕಂಪನಿಯದ್ದು! ಎಲ್ಲಾ ಸೇರಿ ಪಕೋಡ ಷಡ್ಯಂತ್ರ ರಚಿಸಿದ್ದಾರೆ!

ಮಕರಂದ್‌ ಪರಾಂಜಪೆ
ಪಕೋಡ ಮಾರುವುದು ಶ್ರಮ ವರ್ಸಸ್‌ ಶರ್ಮ್(ನಾಚಿಕೆ) ಪ್ರಶ್ನೆಯೇ? ಹಾಗಿದ್ದರೆ ನಾವೆಲ್ಲರೂ ಜೋರಾಗಿ ಹೇಳ್ಳೋಣ- ಯಾವ ಶ್ರಮಕ್ಕೂ ಶರ್ಮ್ನ ಅಗತ್ಯವಿಲ್ಲ. 

ಅನೂಪ್‌ ಕುಮಾರ್‌
ನಾವು ಚಹಾವನ್ನು ರಾಷ್ಟ್ರೀಯ ಪೇಯವನ್ನಾಗಿ, ಪಕೋಡವನ್ನು ರಾಷ್ಟ್ರೀಯ ಖಾದ್ಯವಾಗಿ ಘೋಷಿಸಬೇಕು. ಸರ್ಕಾರ ಚಹಾ ಮತ್ತು ಪಕೋಡ ತರಬೇತಿ ಕೇಂದ್ರಗಳನ್ನು ತೆರೆಯಬೇಕು. 

ಸಂಜಯ್‌ ಝಾ
ಈ ಬಾರಿ ಪಕೋಡ ಬಹಳಷ್ಟು ಜನರ ಹೊಟ್ಟೆ ಕೆಡಿಸಿದಂತಿದೆ!

ನಾನುರಾಮು
ಪಕೋಡ ಮಾರುವುದಿರಲಿ ಅಥವಾ ನ್ಯಾಯಯುತ ಮಾರ್ಗದ ಯಾವುದೇ ಕೆಲಸ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಈ ಸರ್ಕಾರ ದಂಡಿಯಾಗಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಪಕೋಡ ಮಾರುವುದನ್ನು ಯುವಜನರಿಗೆ ವೃತ್ತಿ ಆಯ್ಕೆ ಎಂದು ಯಾವತ್ತೂ ಹೇಳಿರಲಿಲ್ಲ. ಇದು ಪಕೋಡ ಅರ್ಥಶಾಸ್ತ್ರ! 

 ಮಿಲನಯ
ಮುದ್ರಾ ಯೋಜನೆಯಡಿಯಲ್ಲಿ ಲಕ್ಷಾಂತರ ಸ್ವ-ಉದ್ಯೋಗಗಳು ಸೃಷ್ಟಿಯಾಗುತ್ತಿವೆಯಲ್ಲವೇ? ಹಾಗಿದ್ದರೂ ಕಾಂಗ್ರೆಸ್‌ ಇವೆಲ್ಲ ಉದ್ಯೋಗವೇ ಅಲ್ಲ ಎನ್ನುವ ಮನೋಭಾವದಲ್ಲಿದೆ. ಮಾಲ್‌ಗ‌ಳಲ್ಲಿ ಸೇಲ್ಸ್‌ಮೆನ್‌ ಆಗಿ ಕೇವಲ 8 ಸಾವಿರಕ್ಕೆ ದುಡಿಯುವ ವ್ಯಕ್ತಿಯದ್ದು ಜಾಬ್‌ ಸೆಕ್ಯುರಿಟಿ ಯಂತೆ, ಆದರೆ  ಪಕೋಡ ಮಾರಿ ತಿಂಗಳಿಗೆ 15 ಸಾವಿರ ಗಳಿಸುವ ವ್ಯಕ್ತಿಯದ್ದು ಕೆಲಸವೇ ಅಲ್ಲವಂತೆ. 

 ಅತಿಫ‌ುರ್‌ ಹುಸೇನ್‌
ನಿರುದ್ಯೋಗಿಯಾಗಿರುವುದಕ್ಕಿಂತ ಪಕೋಡ ಮಾರುವುದು ಒಳ್ಳೆಯದೆಂದು ಅಮಿತ್‌ ಶಾ ಹೇಳುತ್ತಾರೆ. ಸರಿ ಒಪ್ಪೋಣ, ಆ ಕೆಲಸದ ಬಗ್ಗೆ ನನಗೇನೂ ಸಿಟ್ಟಿಲ್ಲ. ಆದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ನಿಮ್ಮ ಭರವಸೆಯೇನಾಯಿತು?

 ಅಮನ್‌ ರುಸ್ತುಂ
ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಕಾಂಗ್ರೆಸ್‌ ಮೂದಲಿಸುತ್ತಿದೆ.  ಅದು 60 ವರ್ಷಗಳ ತನ್ನ ಆಡಳಿತದಲ್ಲಿ ಏನು ಮಾಡಿತು? ಏಕೆ ಉದ್ಯೋಗಗಳನ್ನು ಸೃಷ್ಟಿಸಲಿಲ್ಲ? ನಿರುದ್ಯೋಗ ಮಹಾಸಾಗರದ ಸೃಷ್ಟಿಕರ್ತರು ಯಾರು?

ತೂಜಾನೇನಾ
ಒಬ್ಬನ ಸ್ವ ಉದ್ಯೋಗ ಏನಿಲ್ಲವೆಂದರೂ ಹೆಚ್ಚುವರಿ ಒಂದೆರಡು ಕೆಲಸಗಳನ್ನಾದರೂ ಸೃಷ್ಟಿಸುತ್ತದೆ ಎನ್ನುವುದನ್ನು ಕಾಂಗ್ರೆಸ್‌  ಮರೆಯಬಾರದು. 

 ರಾಕೇಶ್‌ ಶಾರ್ದಾ
ಕಾಂಗ್ರೆಸ್‌ ನಾಯಕರು ಸ್ವ ಉದ್ಯೋಗವನ್ನು ಉದ್ಯೋಗವೆಂದೇ ಭಾವಿಸುವುದಿಲ್ಲ. ಜನರು ಸಂಘಟಿತ ವಲಯದಲ್ಲಿ ಕೆಲಸ ಮಾಡಿಕೊಂಡಿರ ಬೇಕು, ಅವರು ಸ್ವಾವಲಂಬಿಗಳಾಗಬಾರದು ಎಂದು ಬಯಸುತ್ತದೆ . ಜನರು ಸಬ್ಸಿಡಿ ಮತ್ತು ಮೀಸಲಾತಿಯ ಹಿಡಿತದಲ್ಲೇ ಇರಬೇಕು ಎಂದು ಕಾಂಗ್ರೆಸ್‌ ಪ್ರಯತ್ನಿಸುತ್ತಿರುತ್ತದೆ. 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews


Trending videos

Back to Top