CONNECT WITH US  

ತ್ರಿಪುರದಲ್ಲಿ ಬಿಜೆಪಿ ಗೆಲುವು ಟ್ವೀಟಿಗರೇನಂತಾರೆ?

ಡಾ| ಡೇವಿಡ್‌ ಫ್ರಾಲಿ
ಜೆಎನ್‌ಯುನ ಮಾರ್ಕ್ಸ್ವಾದಿ ವಿದ್ಯಾರ್ಥಿಗಳು ತ್ರಿಪುರ ಫ‌ಲಿತಾಂಶವನ್ನು ಮತ್ತು ತಮ್ಮ ಹಣೆಬರಹವನ್ನು ಒಮ್ಮೆ ನೋಡಿಕೊಳ್ಳಬೇಕು. ಅವರೆಲ್ಲ ಭವಿಷ್ಯದ ಯುವ ಧ್ವನಿಗಳಲ್ಲ, ಬದಲಾಗಿ ಭೂತಕಾಲದ ವಿಫ‌ಲ ರಾಜಕೀಯದ ನೆರಳುಗಳು. ಭಾರತಕ್ಕೆ ಋಷಿಗಳು ಮತ್ತು ಯೋಗಿಗಳ ಅಗತ್ಯವಿದೆ, ಚೆಗವೇರಾ ಮತ್ತು ಅಫ‌jಲ್‌ ಗುರುವಿನ ಪಡಿಯಚ್ಚುಗಳಲ್ಲ. 

ಫೇಕ್‌ಅರ್ನಹಬ್‌ 
ಯಾರ್ರೀ ಅದು, "ಬಿಜೆಪಿಯು ಗುಜರಾತ್‌, ಹಿಮಾಚಲ ಮತ್ತು ತ್ರಿಪುರ ಚುನಾವಣಾ ಗೆಲುವಿನ ನಂತರ ಐಪಿಎಲ್‌ನಲ್ಲಿ ಗೆಲ್ಲೋದಕ್ಕೆ ಸಿದ್ಧತೆ ನಡೆಸ್ತಾ ಇದೆ'' ಅಂತ ಪುಕಾರು ಹಬ್ಬಿಸಿರೋರು?! 

 ಬಿಸ್ವಜಿತ್‌ ರಾಯ್‌
ಬಿಜೆಪಿ ಯುಪಿಯಲ್ಲಿ ಗೆದ್ದಾಗ... 
ಪ್ರಗತಿಪರ: ಯುಪಿ ಎಂದರೆ ಭಾರತವಲ್ಲ!
ಬಿಜೆಪಿ ಗುಜರಾತ್‌ನಲ್ಲಿ ಗೆದ್ದಾಗ...
ಪ್ರಗತಿಪರ: ಗುಜರಾತ್‌ ಎಂದರೆ ಭಾರತವಲ್ಲ!
ಬಿಜೆಪಿ ತ್ರಿಪುರದಲ್ಲಿ ಗೆದ್ದಾಗ...
ಪ್ರಗತಿಪರ: ತ್ರಿಪುರ ಎಂದರೆ ಭಾರತವಲ್ಲ!
ಪ್ರಶ್ನೆ: ಹಾಗಿದ್ದರೆ ಯಾವುದು ಸ್ವಾಮಿ ಭಾರತ ಎಂದರೆ?
ಪ್ರಗತಿಪರ: ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆ ಸೋತಿತಲ್ಲ, ಆ ಗ್ರಾಮವೇ ಭಾರತ!

 ಸರ್‌ ರವೀಂದ್ರ ಜಡೇಜಾ
ಬಿಜೆಪಿ ಬರೀ ತ್ರಿಪುರವನ್ನು ಗೆದ್ದಿರಬಹುದು. ಆದರೆ ಕಾಂಗ್ರೆಸ್‌ ಜನರ ಹೃದಯವನ್ನೂ....ಕಿಡ್ನಿಯನ್ನೂ...ಶ್ವಾಸಕೋಶವನ್ನೂ ಗೆದ್ದಿದೆ. 

ಸಂಯುಕ್ತಾ ಬಸು
ಕಳೆದ 25 ವರ್ಷಗಳಲ್ಲಿ ಮಾಣಿಕ್‌ ಸರ್ಕಾರ್‌ ಅವರ ಆಸ್ತಿಯಲ್ಲಿ ಹೆಚ್ಚಳವಾಗಿಲ್ಲ. ಅವರಿಗೆ ಸ್ವಂತ ಮನೆಯಿಲ್ಲ. ಕಮ್ಯುನಿಸ್ಟ್‌ ಪ್ರಿನ್ಸಿಪಲ್‌ ಅಂದರೆ ಇದು! ಇನ್ನೊಂದೆಡೆ ಜನ 10 ಲಕ್ಷ ರೂಪಾಯಿ ಸೂಟುಬೂಟು ಧರಿಸುವ ಮೋದಿಯನ್ನು ಆಯ್ಕೆ ಮಾಡಿದ್ದಾರೆ? ಯಾಕೆ? ಯಾಕೆಂದರೆ ಎಲ್ಲರಿಗೂ ಶ್ರೀಮಂತರೇ ಬೇಕು!

ಶ್ಯಾಮಶೇಖರ್‌
ಜನರಿಗೆ ಕೆಲಸ ಮಾಡುವ ನಾಯಕರು ಬೇಕೇ ಹೊರತು, ಕೇವಲ ತಮ್ಮ ಸರಳತೆ ತೋರಿಸುತ್ತಾ ಕೂರುವವರಲ್ಲ. ಯಾರು ಯಾವ ಬಟ್ಟೆ ಧರಿಸುತ್ತಾರೆ ಎನ್ನುವುದು ಜನರಿಗೆ ಮುಖ್ಯವಲ್ಲ. ಅಭಿವೃದ್ಧಿ ಮಾಡುವವರು ಮುಖ್ಯ. 

ಆಶು ಮುಗಲೀಕರ್‌
ಮಾಣಿಕ್‌ ಸರ್ಕಾರ ಎಷ್ಟೊಂದು ಬಡವರು ಎನ್ನುವ ಕಥೆಯನ್ನು ನಾವು ದಶಕಗಳಿಂದ ಕೇಳುತ್ತಾ ಬಂದಿದ್ದೇವೆ. ತ್ರಿಪುರ ಜನರ ಬಡತನವನ್ನು, ಅಲ್ಲಿನ ರಕ್ತಪಾತವನ್ನು ಮುಚ್ಚಿಹಾಕಲು ಮಾಣಿಕ್‌ ಸರ್ಕಾರರ ಬಡತನವನ್ನು ವೈಭವೀಕರಿಸುತ್ತಾ ಬರಲಾಗಿತ್ತು. 

 ಅಜಿತ್‌ ಪ್ರಸಾದ್‌
ತ್ರಿಪುರ ಫ‌ಲಿತಾಂಶವನ್ನು ನೋಡಿ ಮಮತಾ ಬ್ಯಾನರ್ಜಿಯವರು ""ಇದು ಸಿಪಿಐಎಂನ ಸೋಲೇ ಹೊರತು ಬಿಜೆಪಿಯ ಗೆಲುವಲ್ಲ'' ಎನ್ನುತ್ತಿದ್ದಾರೆ. ಪ್ರಿಯ ಬೆಂಗಾಲಿಗಳೇ, ನೀವು ಬಿಜೆಪಿಯನ್ನು ಗೆಲ್ಲಿಸಬೇಡಿ, ಟಿಎಂಸಿಯನ್ನು ಸೋಲಿಸಿ ಸಾಕು!

ಪನ್‌ಸುಖ್‌ಲಾಲ್‌
ಭಕ್ತ: ಮಾಣಿಕ್‌ ಸರ್ಕಾರ್‌ 2 ದಶಕದ ಆಡಳಿತದಲ್ಲಿ ಏನೂ ಮಾಡಲಿಲ್ಲ. ಈಗ ಮೋದೀಜಿ ಅಭಿವೃದ್ಧಿ ಮಾಡ್ತಾರೆ. 
ನಾನು: ನಿಜ ಮಾರಾಯ. ನಿಮ್ಮ ಮೋದೀಜಿ ವಾರಾಣಸಿಯನ್ನು ಸ್ವಿಜರ್‌ಲೆಂಡ್‌ ಮಾಡಿದರಲ್ಲ, ಅದೇ ರೀತಿ ತಾನೆ? 

ಫಾರ್ಗೋಅಬ್ದುಲ್ಲಾ
ಬಿಜೆಪಿಗೆ ಒಂದು ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗದಿದ್ದಾಗ...
ಜಾತ್ಯತೀತರು: ಇದು ಪ್ರಧಾನಿ ಮೋದಿ ಸೋಲು. 2019 ಬಹಳ ಕಠಿಣವಾಗಿರಲಿದೆ. ರಾಹುಲ್‌ ಮ್ಯಾಜಿಕ್‌ ಮುಂದುವರಿಯಲಿದೆ. 
ಬಿಜೆಪಿ ತ್ರಿಪುರದಲ್ಲಿ ಗೆಲ್ಲುತ್ತಿದ್ದಂತೆ...
ಜಾತ್ಯತೀತರು: ಹಿಂದುತ್ವದ ಬೆಳವಣಿಗೆ ಭಾರತಕ್ಕೆ ಬಹಳ ಅಪಾಯಕಾರಿ. ಈ ಗೆಲುವು ಗೆಲುವೇ ಅಲ್ಲ. ನಿಜವಾದ ಪರೀಕ್ಷೆ ಇರುವುದು 2019ರಲ್ಲಿ! 


Trending videos

Back to Top