CONNECT WITH US  

ಸಲ್ಮಾನ್‌ ಖಾನ್‌ಗೆ ಜಾಮೀನು, ಏನನ್ನುತ್ತೆ ಟ್ವೀಟರ್‌ ಲೋಕ

ಕ್ಷಿತಿಜ್‌ ಭಾರದ್ವಾಜ್‌ 
ಸಲ್ಮಾನ್‌ನ ಬೆಂಬಲಿಗರು ತಮ್ಮ ಅಣ್ಣನ ಬಿಡುಗಡೆಯನ್ನು ಸಂಭ್ರಮಿಸಲು ರಸ್ತೆಗಿಳಿಯಲಿಲ್ಲವಂತೆ. ಸಲ್ಮಾನ್‌ ಮನೆಗೆ ಡ್ರೈವ್‌ ಮಾಡ್ತಾ ಹೋಗ್ತಾನೆ ಅಂತ ಬಹುಶಃ ಅವರಿಗೆ ಸುದ್ದಿ ಮುಟ್ಟಿರಬೇಕು. 

 ರಣ್‌ವೀರ್‌
ನ್ಯಾ: ನೀನು ಅಪರಾಧಿ ಎಂದು ಸಾಬೀತಾಗಿದೆ. 
ಸಲ್ಮಾನ್‌: ಸರ್‌, ನಿಜ ಹೇಳ್ತೀನಿ. ಅವತ್ತು ನಾನಲ್ಲ ಕಾರ್‌ ನಡೆಸಿದ್ದು. 
ನ್ಯಾ: ರೀ...ಇದು ಬೇರೇ ಕೇಸು ನಡೀತಾ ಇರೋದು!

 ರಮೇಶ್‌ ಶ್ರೀವತ್ಸ್
ನ್ಯಾ: ನೀವೆಲ್ಲ 1998ರಲ್ಲಿ ಜೋಧ್‌ಪುರಕ್ಕೆ ಯಾಕೆ ಹೋಗಿದ್ರಿ? 
ಸಲ್ಮಾನ್‌: ಶೂಟ್‌ ಮಾಡೋಕ್ಕೆ
ನ್ಯಾ: ತಪ್ಪು ಒಪ್ಪಿಕೊಂಡಿದ್ದೀಯ..
ಸಲ್ಮಾನ್‌: ಸಾರ್‌ ಹಮ್‌ ಸಾಥ್‌ ಸಾಥ್‌ ಹೇ...
ನ್ಯಾಯಾಧೀಶ: ಅಂದ್ರೆ ನೀವೆಲ್ಲರೂ ಸಾಥ್‌ ಸಾಥ್‌ ಆಗಿ ಇದರಲ್ಲಿ ಭಾಗಿಯಾಗಿದ್ರಿ ಅಂತಾಯ್ತು!

ಅನಿಲ್‌ ಸ್ರುತೇಜಾ
ನಮ್ಮ ದೇಶದಲ್ಲಿ ಪಾದಚಾರಿ ಮಾರ್ಗದಲ್ಲಿ ಸತ್ತವರಿಗಿಂತ ಕೃಷ್ಣಮೃಗಗಳಿಗೇ ತುಸು ನ್ಯಾಯ ದೊರಕುತ್ತದೆ. 

 ಸೋರಭ್‌ ಪಂತ್‌
ಬ್ರೇಕಿಂಗ್‌ ನ್ಯೂಸ್‌ 1: ಸಲ್ಮಾನ್‌ ಅಪರಾಧಿಯೆಂದು ತೀರ್ಪು
ಬ್ರೇಕಿಂಗ್‌ ನ್ಯೂಸ್‌ 2: ಕಾರಾಗೃಹಕ್ಕೆ ಸಲ್ಮಾನ್‌
ಬ್ರೇಕಿಂಗ್‌ ನ್ಯೂಸ್‌ 3: ಸಲ್ಮಾನ್‌ಗೆ ಜಾಮೀನು...
ಆಮೇಲೆ: ಸಲ್ಮಾನ್‌ರಿಂದ "ಬೀಯಿಂಗ್‌ ಕೃಷ್ಣಮೃಗ' ಟೀಶರ್ಟ್‌ ಬಿಡುಗಡೆ. ಅದರಲ್ಲಿ 3 ಪರ್ಸೆಂಟಷ್ಟೇ ಚಾರಿಟಿಗೆ! ಬೆಂಬಲಿಗರಿಂದ ಹರ್ಷೋದ್ಗಾರ!!

 ಅವಿನಾಶ್‌ ಆಚಾರ್ಯ
ಕೊನೆಗೂ ದೇಶದಲ್ಲಿ ಹಣಕ್ಕೇ ಜಯ! ಜನರನ್ನಾದರೂ ಕೊಲ್ಲಿ, ವಿನಾಶದಂಚಿನಲ್ಲಿರುವ ಜೀವಿಗಳನ್ನಾದರೂ ಸಾಯಿಸಿ. ಹಣವಿದ್ದರೆ ನಿಮಗೇನೂ ಆಗದು! 

 ರಾಜ್‌ ವೋರಾ
ಸಲ್ಮಾನ್‌ ಅಪರಾಧವೆಸಗಿದ್ದು 1998ರಲ್ಲಿ, ಶಿಕ್ಷೆ ಪ್ರಕಟವಾಗಿದ್ದು 2018ರಲ್ಲಿ. ಎರಡೇ ದಿನದಲ್ಲಿ ಜಾಮೀನು! ವಾಹ್‌...ಏನೀ ಅದ್ಭುತ ವ್ಯವಸ್ಥೆ! 

 ಅಶ್ವಿ‌ನಿ
ನ್ಯೂಸ್‌ ಚಾನೆಲ್‌ಗ‌ಳ ಸಮಸ್ಯೆಯೇನು? ಸಲ್ಮಾನ್‌ ಖಾನ್‌ ಬಿಡುಗಡೆಗಾಗಿ ಪ್ರಾರ್ಥಿಸುವವರನ್ನೇಕೆ ಇವು ತೋರಿಸಿದವು? ಸಲ್ಮಾನ್‌ ಜೈಲಿಗೆ ಹೋಗಬೇಕಾಗಿ ಬಂದದ್ದು ಅಪರಾಧ ಎಸಗಿದ ಕಾರಣಕ್ಕಾಗಿ. ಆತ ಸ್ವಾತಂತ್ರ್ಯ  ಹೋರಾಟಗಾರನಲ್ಲ. ಎಂಥ ಹುಚ್ಚು ಜಗತ್ತಪ್ಪ!

ಹರ್ಷಿತಾ ವಾರಣಾಸಿ
ಸಲ್ಮಾನ್‌ ಖಾನ್‌ಗೆ ಜಾಮೀನು. ಆತನ ಜಾಗದಲ್ಲಿ ಸಾಮಾನ್ಯ ವ್ಯಕ್ತಿಯಿದ್ದಿದ್ದರೆ ಇಷ್ಟು ಸುಲಭವಾಗಿ ಹೊರಗೆ ಬರಲು ಸಾಧ್ಯವಾಗುತ್ತಿತ್ತಾ?

ತೂಜಾನೇನಾ
ದುರಂತವೆಂದರೆ ಇದು, ಸಲ್ಮಾನ್‌ ಖಾನ್‌ಗೆ ಕೃಷ್ಣಮೃಗಗಳನ್ನು ಕೊಂದದ್ದಕ್ಕಾಗಿ ಶಿಕ್ಷೆಯಾದದ್ದು, ಆದರೆ ಭಾರತದ ಕೆಲ ರಾಜಕಾರಣಿಗಳು ಇದಕ್ಕೆ ಧರ್ಮದ ಆಯಾಮ ಕೊಡುತ್ತಿದ್ದಾರೆ. ಆತ ಅಲ್ಪಸಂಖ್ಯಾತನೆಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆಯಂತೆ! ಹಾಗಿದ್ದರೆ ಟಬು ಮತ್ತು ಸೈಫ್ ಯಾವ ಧರ್ಮದವರು?

 ಸುನಯನ್‌ ಸಿಂಗ್‌
ಸಲ್ಮಾನ್‌ ತನ್ನ ಸಂಸ್ಥೆಯ ಮೂಲಕ ಎಷ್ಟೋ ಜನರಿಗೆ ಸಹಾಯ ಮಾಡಿರಬಹುದು. ಆದರೆ ಆತ ಅಪರಾಧಿ ಎನ್ನುವುದು ಇದರಿಂದ ಸುಳ್ಳಾಗುವುದಿಲ್ಲವಲ್ಲ? ಬಾಲಿವುಡ್‌ ಮಂದಿಯ ಲಾಜಿಕ್‌ ಅರಗಿಸಿಕೊಳ್ಳುವುದು ಕಷ್ಟ. 

ಅನಿಶಾ ತೇಜ್‌
ಅಮಾನವೀಯವಾಗಿ ವರ್ತಿಸುವುದು, ನಂತರ "ಬೀಯಿಂಗ್‌ ಹ್ಯೂಮನ್‌' ಎನ್ನುವುದು. ದುಡ್ಡಿದ್ದರೆ ಇಲ್ಲಿ ಎಲ್ಲವೂ ನಡೆಯುತ್ತದೆ. 


Trending videos

Back to Top