CONNECT WITH US  

ಅಸಾರಾಂಗೆ ಜೀವಾವಧಿ ಶಿಕ್ಷೆ, ಏನನ್ನುತ್ತೆ ಟ್ವೀಟರ್‌?

ವಿನತಿ ಶುಕ್ಲಾ
ಅಸಾರಾಂ ತಪ್ಪು ಮಾಡಿರುವುದು ಸಾಬೀತಾಗಿದೆ ಎಂದು ಸ್ವತಃ ನ್ಯಾಯಾಲಯವೇ ಹೇಳಿದರೂ ಮಾಧ್ಯಮಗಳು ಮತ್ತು ಜನರು ಆತನನ್ನು ಇನ್ನೂ "ಬಾಪೂ' ಎಂದು ಕರೆಯುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಅತ್ಯಾಚಾರಿಗಳ ಪರ ಅನುಕಂಪ ತೋರಿಸುವುದನ್ನು ದಯವಿಟ್ಟೂ ನಿಲ್ಲಿಸಿ. 

 ಅಶೋಕ್‌ ಪಂಡಿತ್‌
ದೇವಮಾನವರ ಮುಖವಾಡ ತೊಟ್ಟು ಅಮಾಯಕ ಜನರನ್ನು ವಂಚಿಸುವ ಎಲ್ಲಾ ಧರ್ಮಗಳ ಕ್ರಿಮಿನಲ್‌ಗ‌ಳಿಗೂ ಬಲಿಷ್ಠ ಸಂದೇಶ ಹೋಗಿದೆ. ಅಸಾರಾಂಗೆ ಶಿಕ್ಷೆ ನೀಡಿದ ನ್ಯಾಯಾಂಗ ವ್ಯವಸ್ಥೆಗೆ ಶರಣು. 

 ಫ‌ರ್ಹಾನ್‌ ಅಖ್ತರ್‌
ಅಸಾರಾಂ ಹದಿಹರೆಯದ ಹೆಣ್ಣುಮಗಳ ಮೇಲೆ ಬಲಾತ್ಕಾರ ನಡೆಸಿದ ಅಪರಾಧಿ. ಈ ಪ್ರಕರಣದಲ್ಲಿ ದೋಷಿ ಎಂದೂ ತೀರ್ಪು ಬಂದಿದೆ. ಒಳ್ಳೆಯದಾಯಿತು. ಆದರೆ ಜನರು ಪ್ರಧಾನಿ ನರೇಂದ್ರ ಮೋದಿಯ ಜೊತೆಗೆ ಅಸಾರಾಂ ಇರುವ ಚಿತ್ರಗಳನ್ನು ಶೇರ್‌ ಮಾಡುವುದನ್ನು ನಿಲ್ಲಿಸಬೇಕಿದೆ. ಅಸಾರಾಂ ಅಪರಾಧಿ ಎಂದು ಸಾಬೀತಾಗುವ ಮುನ್ನ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಅಪರಾಧವಾಗುವುದಿಲ್ಲ. ದಯವಿಟ್ಟೂ ನಿಷ್ಪಕ್ಷಪಾತಿಗಳಾಗಿ. ನಮ್ಮಂತೆಯೇ ಅವರಿಗೂ(ಮೋದಿಗೂ) ಈ ಬಗ್ಗೆ ಗೊತ್ತಿರಲಿಕ್ಕಿಲ್ಲ.

ಸಂಯುಕ್ತಾ ಬಸು
ಕಳೆದ ಐದು ವರ್ಷಗಳಿಂದ ಟ್ವಿಟರ್‌ನಲ್ಲಿ ಅಸಾರಾಂ ಪರ ಅನೇಕ ಫೇಕ್‌ ಟ್ರೆಂಡ್‌ಗಳನ್ನು ಸೃಷ್ಟಿಸಲಾಯಿತು. ಅಸಾರಾಂ ಅಮಾಯಕ ಎನ್ನುವುದು, ಸಂತ್ರಸ್ತೆಯನ್ನು ಅವಮಾನಿಸುವುದು, ಆಕೆಯ ವಯಸ್ಸನ್ನು ಪ್ರಶ್ನಿಸುವುದು, ಆಕೆ ಹಣಕ್ಕಾಗಿ ಈ ಕಥೆ ಕಟ್ಟಿದ್ದಾಳೆ ಎಂದು ಕಟ್ಟುಕಥೆ ಹೆಣೆಯುವುದು, ಕಾಂಗ್ರೆಸ್‌ನ ಮೇಲೆ ಗೂಬೆ ಕೂರಿಸುವಂಥ ಕೆಲಸಗಳು ನಡೆದವು. ಇದಷ್ಟೇ ಅಲ್ಲ, ಪೋಸ್ಕೋ ಕಾಯ್ದೆಯನ್ನೇ ಕಿತ್ತೆಸೆಯಬೇಕೆಂಬ ಮಾತುಗಳು ಕೇಳಿಬಂದವು! 

ರಾಜದೀಪ್‌ ಸರ್ದೇಸಾಯಿ
ಕಾಂಗ್ರೆಸ್‌ ಪಕ್ಷ ಒಂದು ಫೋಟೋ ಆಧಾರದ ಮೇಲೆ ಪ್ರಧಾನಿ ಮೋದಿಯವರಿಗೆ ಅಸಾರಾಂ ಜೊತೆ ಸಂಬಂಧ ಕಲ್ಪಿಸುತ್ತಿರುವುದು ಸರಿಯಲ್ಲ. ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನದಂಥ ರಾಜ್ಯಗಳಲ್ಲಿ ಅಕ್ಷರಶಃ ಪ್ರತಿಯೊಂದು ರಾಜಕೀಯ ಪಕ್ಷ ಮತ್ತು ರಾಜಕಾರಣಿಯೂ ಅಸಾರಾಂ ಜೊತೆ ವೇದಿಕೆ ಹಂಚಿಕೊಂಡಿರುತ್ತವೆ/ತ್ತಾನೆ. ಆದರೆ ಒಂದೇ ಪ್ರಶ್ನೆ ಏನೆಂದರೆ: ಅತ್ಯಾಚಾರ ಆರೋಪದ ನಂತರ ಅಸಾರಾಂನನ್ನು ಯಾರಾದರೂ ರಕ್ಷಿಸಲು ಪ್ರಯತ್ನಿಸಿದ್ದರಾ ಎನ್ನುವುದು. 

 ತೂಜಾನೇನಾ
ಅಸಾರಾಂ ಮತ್ತು ರಾಮ್‌ರಹೀಮ್‌ರಂಥ ಅಪರಾಧಿಗಳನ್ನು ಬೆಂಬಲಿಸುತ್ತೀರಿ ಎಂದಾದರೆ, ನೀವು ಅವರ ಅಪರಾಧ ಕೃತ್ಯಗಳನ್ನೂ ಬೆಂಬಲಿಸುತ್ತೀರಿ ಎಂದರ್ಥ. 

ಖಬರ್‌ತಕ್‌
ತನ್ನಂಥ "ಬ್ರಹ್ಮಜ್ಞಾನಿ' ಅತ್ಯಾಚಾರವೆಸಗುವುದು ತಪ್ಪಲ್ಲ ಎನ್ನುವ ಧಾಟಿಯಲ್ಲಿ ಮಾತನಾಡುತ್ತಿದ್ದನಂತೆ ಅಸಾರಾಂ. ಈ ಬ್ರಹ್ಮಜ್ಞಾನಿಗೆ "ಅತ್ಯಾಚಾರ' ಮಹಾತಪ್ಪು ಅನಿಸಲೇ ಇಲ್ಲವೇ? ಅಥವಾ ತಾನು ಜೈಲು ಸೇರುತ್ತೇನೆ ಎಂಬ ಬ್ರಹ್ಮಜ್ಞಾನ ಇರಲಿಲ್ಲವೇ?

 ತೂಜಾನೇನಾ
ರಾಮ್‌ರಹೀಮ್‌ ಮತ್ತು ಅಸಾರಾಂನಂಥವರಿಗೆ ರಾಜಕೀಯದ ಸ್ನೇಹ ಮತ್ತು ಅಂಧ ಭಕ್ತರ ಬೆಂಬಲ ಯಾವ ಪಾಟಿ ಸಿಕ್ಕಿಬಿಡುತ್ತದೆಂದರೆ ತಾವು ಮಾಡುವುದೆಲ್ಲ ಸರಿ ಎನ್ನುವ ಭ್ರಮೆಯಲ್ಲಿ ಬದುಕಿಬಿಡುತ್ತಾರೆ. 

 ಸಂದೀಪ್‌ ಸುದೇಶ್‌
ಈಗಂತೂ ಪ್ರತಿಯೊಂದು ಘಟನೆ-ಪ್ರಕರಣಕ್ಕೂ ಕಾಂಗ್ರೆಸ್‌ ಮತ್ತು ಬಿಜೆಪಿ ರಾಜಕೀಯ ಬಣ್ಣ ಬಳಿಯಲು ಪ್ರಯತ್ನಿಸುತ್ತವೆ. ಕೆಲವು ವಿಷಯಗಳಲ್ಲಿ ಸುಮ್ಮನೇ ಕೂಡಬೇಕು ಎನ್ನುವುದು ಇವಕ್ಕೆ ಹೇಳುವವರ್ಯಾರು?

 ಅಮಿತ್‌ ಟಂಡಾನಾ
ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಎಷ್ಟು ಸದೃಢವಾಗಿದೆ ಮತ್ತು ನಿಷ್ಪಕ್ಷಪಾತಿಯಾಗಿದೆ ಎನ್ನುವುದರ ದ್ಯೋತಕ ಈ ತೀರ್ಪು. 


Trending videos

Back to Top