CONNECT WITH US  

ರಾಜ್ಯ ರಾಜಕೀಯ ಪ್ರಹಸನ, ಏನಂತಾರೆ ಜನ?

ತೂಜಾನೇನಾ
ವ್ಯಂಗ್ಯವೆಂದರೆ ಮೂರೂ ಪಕ್ಷಗಳೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಬಗ್ಗೆ ಭಾಷಣ ಮಾಡುತ್ತಿರುವುದು. ಬಿಜೆಪಿ-ಕಾಂಗ್ರೆಸ್‌-ಜೆಡಿಎಸ್‌ಗೆ ಸ್ವಲ್ಪವಾದರೂ ನೈತಿಕತೆ ಉಳಿದಿದೆಯೇ? 

ಸುಜಾತ ಪಿ
ಪ್ರತಿ ವರ್ಷವೂ ಪ್ರಧಾನಿ ಮೋದಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಷಯ ಕೋರುತ್ತಿದ್ದರು. ಇದೇ ಮೊದಲ ಬಾರಿ ರಾಹುಲ್‌ ಗಾಂಧಿ ಗೌಡರಿಗೆ ಬರ್ತ್‌ಡೇ ವಿಶ್‌ ಮಾಡಿದ್ದಾರೆ. ಕಾಂಗ್ರೆಸ್ಸಿಗರು ಪ್ಲೇಟ್‌ ಬದಲಿಸುವುದರಲ್ಲಿ ನಂಬರ್‌ 1!

 ಅಮಿತ್‌ ಟಂಡಾನಾ
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪರಸ್ಪರ ಬೆಂಕಿ ಉಗುಳುತ್ತಾ ಚುನಾವಣೆಗೆ ಧುಮುಕಿದರು. ಚುನಾವಣೆ ಮುಗಿದದ್ದೇ ಇಬ್ಬರೂ ಸಹೋದರರಂತೆ ವರ್ತಿಸುತ್ತಿದ್ದಾರೆ. ಇದು ಢೋಂಗಿತನದ ಪರಮಾವಧಿ. 

ನೀರಜ್‌ ಅಮಿತೇಂದು
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರ ಸಿದ್ಧಾಂತ, ನಂಬಿಕೆ ಭಾರತೀಯ ಜನತಾ ಪಕ್ಷಕ್ಕೆ ಹೊಂದಿಕೆಯಾಗುತ್ತದಾ? ಇಲ್ಲ, ಎನ್ನುವುದಾದರೆ ಅವರನ್ನೇಕೆ ಸೆಳೆದುಕೊಳ್ಳಲು ಪ್ರಯತ್ನ ನಡೆದಿದೆ? 

 ಟಿಂಡರ್‌ಬುಕ್‌
ತಮ್ಮದು ಪ್ರಾಮಾಣಿಕ, ಭ್ರಷ್ಟಾಚಾರ ಮುಕ್ತ ಪಕ್ಷವೆಂದು ಯಾರಿಗೂ ಹೇಳುವ ಹಕ್ಕು ಉಳಿದಿಲ್ಲ. ಕೋಟಿ ಕೋಟಿ ಹಣ ಚೆಲ್ಲಿ ಶಾಸಕರನ್ನು ಖರೀದಿಸಲು ನಿಂತಿರುವವರು ಇನ್ಮುಂದೆ ಪ್ರಾಮಾಣಿಕತೆಯ ಮಾತನಾಡುವುದು ನಿಲ್ಲಿಸಲಿ. 

ವಲ್ಲರಿ ಅವಸ್ಥಿ
ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಪ್ರಬಲ ಪ್ರತಿಪಕ್ಷ ಬೇಕೇಬೇಕು. ಒಂದು ವೇಳೆ ಕಾಂಗ್ರೆಸ್‌ ಮತ್ತೂಮ್ಮೆ ಬಲಿಷ್ಠವಾಗಲು ಬಯಸುತ್ತದೆ ಎಂದಾದರೆ, ಕೂಡಲೇ ಅದು ಕುಟುಂಬ ರಾಜಕಾರಣವನ್ನು ನಿಲ್ಲಿಸಬೇಕು. ಹೊಸ ನಾಯಕರನ್ನು ಬೆಳೆಸಬೇಕು. ಇನ್ನೆಷ್ಟು ಬಾರಿ ರಾಹುಲ್‌ ಗಾಂಧಿಯನ್ನು ಲಾಂಚ್‌ ಮಾಡುತ್ತೀರಿ? 

 ಸುಬೋಧ್‌
ಬಿಜೆಪಿ ಪಂಚಾಯಿತಿ ಚುನಾವಣೆಯಲ್ಲಿ ಸೋತರೂ "ಮೋದಿ ಅಲೆ ಮುಗಿಯಿತು' ಎಂದು ಕೂಗುವ ಮಾಧ್ಯಮಗಳು, ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಪದೇ ಪದೆ ಸೋಲುತ್ತಾ ಸಾಗಿದರೂ "ರಾಹುಲ್‌ ಅಲೆಯೇ ಸೃಷ್ಟಿಯಾಗುತ್ತಿಲ್ಲ' ಎನ್ನುವುದಿಲ್ಲವೇಕೆ?

ಟಿಪಿಕಲ್‌ಗ‌ಯ್‌ 
ಸಮಯ ಹೇಗೆ ಬದಲಾಗುತ್ತದೋ ನೋಡಿ. ಮಾಧ್ಯಮದವರನ್ನು ಗಟ್ಟಿ ದನಿಯಲ್ಲಿ ಗದರಿಸುವಂತೆ ಮಾತನಾಡುತ್ತಿದ್ದರು ಸಿದ್ದರಾಮಯ್ಯ, ಈಗ ಅದೇ ಮಾಧ್ಯಮಗಳು ಸಿದ್ದರಾಮಯ್ಯ ಅವರಿಗೆ ಕ್ಯಾರೆ ಎನ್ನದೇ ಕುಮಾರಸ್ವಾಮಿಯವರ ಮಾತು ಕೇಳುತ್ತಿವೆ! 

 ಶಿವ್‌ ಸುಮನ್‌
ಪಕ್ಷಗಳು ತಮ್ಮ ಶಾಸಕರನ್ನು ಕುರಿಯಂತೆ ಬಸ್ಸುಗಳಲ್ಲಿ ತುಂಬಿಕೊಂಡು ಹೋಗುವುದು ನೋಡಿದಾಗ, ಪ್ರಾಮಾಣಿಕರಿಗೆ ಟಿಕೆಟ್‌ ಕೊಟ್ಟಿದ್ದರೆ ಇಂದು ಅವರನ್ನು ಉಳಿಸಿಕೊಳ್ಳಲು ಪಕ್ಷಗಳು ಹರಸಾಹಸ ಪಡಬೇಕಾಗುತ್ತಿರಲಿಲ್ಲ ಅನಿಸುತ್ತದೆ. ಪಕ್ಷನಿಷ್ಠೆಯಿರುವ ಶಾಸಕರ್ಯಾರೂ ಈಗ ಇಲ್ಲವೇ? 

 ಕಲರ್‌ಪಾಕೆಟ್‌
ಆಪ್‌ ಶಾಸಕರಿಗೆ ಹ್ಯಾಟ್ಸಾಫ್! ಬಿಜೆಪಿ ಸತತವಾಗಿ ಪ್ರಯತ್ನಿಸಿದರೂ ಅದಕ್ಕೆ ಆಪ್‌ ಶಾಸಕರನ್ನು ಖರೀದಿಸಲು ಆಗಲಿಲ್ಲ. ಏಕೆಂದರೆ ಆಪ್‌ನವರ್ಯಾರೂ ಶಾಸಕರಾಗಿಲ್ಲ! ಇನ್ನಷ್ಟು ಪ್ರಾಮಾಣಿಕ ರಾಜಕೀಯಕ್ಕಾಗಿ ಆಪ್‌ಗೆ ಚಂದಾ ನೀಡಿ, ಮತ್ತಷ್ಟು ಜೋಕ್‌ಗಳಿಗಾಗಿ ನನ್ನನ್ನು ಫಾಲೋ ಮಾಡಿ!

 ಹಿರೇನ್‌ ಅಂಟಾನಿ
ಕಾಂಗ್ರೆಸ್‌-ಜೆಡಿಎಸ್‌-ಬಿಜೆಪಿ ಸದಸ್ಯರು ಪರಸ್ಪರ ಟಚ್‌ನಲ್ಲಿರಲು ಬಯಸುತ್ತಿದ್ದಾರೆ. ಎಲ್ಲಾ ಪಕ್ಷಗಳೂ ಉಳಿದೆಲ್ಲಾ ಪಕ್ಷಗಳ ಎಂಎಲ್‌ಎಗಳೊಂದಿಗೂ ಟಚ್‌ನಲ್ಲಿದ್ದಂತೆ ಕಾಣಿಸುತ್ತೆ. ಜನಸಾಮಾನ್ಯರ ಜೊತೆ ಮಾತ್ರ ಇವರಿಗೆ ಟಚ್‌ ಇಲ್ಲ! 
ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews


Trending videos

Back to Top