CONNECT WITH US  

ಆರ್‌ಎಸ್‌ಎಸ್‌ ವೇದಿಕೆಯಲ್ಲಿ ಪ್ರಣಬ್‌

ಆರ್ಚಿ
ಮಣಿಶಂಕರ್‌ ಅಯ್ಯರ್‌ ಹುರಿಯತ್‌ ನಾಯಕ ಗಿಲಾನಿಯನ್ನು ಭೇಟಿ ಮಾಡಬಹುದು. ಹಮೀದ್‌ ಅನ್ಸಾರಿ ಪಿಎಫ್ಐ ಜೊತೆ ವೇದಿಕೆ ಹಂಚಿಕೊಳ್ಳಬಹುದು. ಆದರೆ ಪ್ರಣಬ್‌ದಾ 
ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಹೋಗುವುದನ್ನು ಕಾಂಗ್ರೆಸ್ಸಿಗರು ಒಕ್ಕೊರಲಲ್ಲಿ ವಿರೋಧಿಸಿದರು.  ಹಾಗಿದ್ದರೆ ನಿಜಕ್ಕೂ ಅಸಹಿಷ್ಣುಗಳು, ವಾಕ್‌ ಸ್ವಾತಂತ್ರ್ಯದ ವಿರೋಧಿಗಳು ಯಾರು? ಅವಾರ್ಡ್‌ ವಾಪಸಿ ಗ್ಯಾಂಗ್‌ ಎಲ್ಲಿ ಹೋಯಿತು? 

ಮಧುಪೂರ್ಣಿಮಾ ಕೀಶ್ವರ್‌
ಅದೇಕೆ ಆರ್‌ಎಸ್‌ಎಸ್‌ ಪ್ರಣಬ್‌ರನ್ನು ಆಹ್ವಾನಿಸಿತೋ ಅರ್ಥವಾಗುತ್ತಿಲ್ಲ. ಅವರು ಗಂಭೀರ ಭಾಷಣಕಾರರಲ್ಲ, ಅವರ ಉಚ್ಚಾರಣೆ ಸರಿಯಾಗಿಲ್ಲ. ಆಳವಾದ ಸಂಗತಿಗಳ ಬಗ್ಗೆ ಅವರು ಮಾತನಾಡುವುದಿಲ್ಲ. ಬರೀ ಮೇಲ್ಮೇಲಿನ ವಿಷಯಗಳನ್ನಷ್ಟೇ ಮಾತನಾಡುತ್ತಾರೆ. ಅವರಿಗೆ ಅಗಾಧ ಅನುಭವ ಇದೆಯಾದರೂ ತಮ್ಮ ಮನಸ್ಸಿನಲ್ಲೇನಿದೆ ಎನ್ನುವುದನ್ನು ಹೊರಹಾಕುವವರಲ್ಲ. 

ಫೇಕ್‌ಪರೇಶ್‌
ಆರ್‌ಎಸ್‌ಎಸ್‌ ಮತ್ತು ಪ್ರಣಬ್‌ ಮುಖರ್ಜಿಗೆ ಸರಿಯಾಗಿ ಉತ್ತರ ನೀಡಲು ದಿಗ್ವಿಜಯ್‌ ಸಿಂಗ್‌ ಏನು ಮಾಡಬಹುದು? ಅವರು ಕಾಂಗ್ರೆಸ್‌ನ ಮುಂದಿನ ಸಭೆಗೆ ಹಫೀಜ್‌ ಸಯೀದ್‌ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಹುದೇನೋ? ಏಕೆಂದರೆ ಒಸಾಮಾಜೀಗೆ ಬರಲಾಗುವುದಿಲ್ಲ, ಅವರಾಗಲೇ ಸತ್ತುಹೋಗಿದ್ದಾರಲ್ಲ! 

ಮಿನ್ಹಾಜ್‌ ಮರ್ಚೆಂಟ್‌
ಪ್ರಣಬ್‌ ಅವರು ಹೆಡಗೆವಾರ್‌ರನ್ನು "ಭಾರತ ಮಾತೆಯ ಶ್ರೇಷ್ಠ ಪುತ್ರ' ಎಂದು ಕರೆದಿರುವುದು ಕಾಂಗ್ರೆಸ್‌ನ ಗಂಟಲಲ್ಲಿ ಇಳಿಯುತ್ತಿಲ್ಲ. ಅತ್ತ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರ್‌ಎಸ್‌ಎಸ್‌ ಅನ್ನು ಉಗ್ರ ಸಂಘಟನೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ಇದಕ್ಕೆ ತದ್ವಿರುದ್ಧವಾಗಿದೆ. 

ಅಭಿಜಿತ್‌ ಮಜುಂದಾರ್‌
ಉಗ್ರವಾದದ ಜೊತೆ ಲಿಂಕ್‌ ಇರುವ ಮತ್ತು ಮತಾಂತರದ ಆರೋಪವನ್ನು ಹೊತ್ತಿರುವ ಪಿಎಫ್ಐನ ಕಾರ್ಯಕ್ರಮದಲ್ಲಿ ಹಮೀದ್‌ ಅನ್ಸಾರಿ ಭಾಗವಹಿಸಿದಾಗ ಕಾಂಗ್ರೆಸ್‌ ತುಟಿಪಿಟಕ್‌ ಅನ್ನಲಿಲ್ಲ. ಆದರೆ ಮತಾಂತರದ ಅಜೆಂಡಾ ಇಲ್ಲದ, ನೆರವಿನ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಆರ್‌ಎಸ್‌ಎಸ್‌ಗೆ ಪ್ರಣಬ್‌ ಭೇಟಿ ನೀಡಿದರೆ ಕಾಂಗ್ರೆಸ್‌ ಚಿಂತೆಗೀಡಾಗಿದ್ದೇಕೆ? 

ತವ್ಲೀನ್‌  ಸಿಂಗ್‌
ಭಾರತ 1947ಕ್ಕೂ ಮುನ್ನ, ಅಂದರೆ ಶತಮಾನಗಳ ಹಿಂದೆಯೇ ಒಂದು ಸಂರಚಿತ ರಾಷ್ಟ್ರವಾಗಿತ್ತು ಮತ್ತು ನಾಗರಿಕತೆಯಾಗಿತ್ತು ಎಂದು ಪ್ರಣಬ್‌ ಮುಖರ್ಜಿ ಹೇಳಿದ್ದಾರೆ. ತಮಾಷೆಯೆಂದರೆ, ಇದೇ ಮಾತನ್ನೇ ಆರ್‌ಎಸ್‌ಎಸ್‌ ಹೇಳುತ್ತಾ ಬಂದಿದೆ ಎನ್ನುವುದನ್ನು ಟೀಕಾಕಾರರು ಮರೆಯುತ್ತಿದ್ದಾರೆ. 

ತೂಜಾನೇನಾ
ಪ್ರಣಬ್‌ ಮುಖರ್ಜಿ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಕಾಂಗ್ರೆಸ್‌ ನಾಯಕ ಜಾಫ‌ರ್‌ ಷರೀಫ್ ಮುನಿಸಿಕೊಂಡಿದ್ದಾರೆ. ಆದರೆ ಕೇವಲ 12 ತಿಂಗಳ ಹಿಂದೆ ಇದೇ ಷರೀಫ್ ಅವರು ಮೋಹನ್‌ ಭಾಗವತ್‌ ರಾಷ್ಟ್ರಪತಿ ಹುದ್ದೆಗೇರಲಿ ಎಂದಿದ್ದರು. 

ಡಾ. ಡೇವಿಡ್‌  ಫ್ರಾಲಿ
ಭಾರತೀಯ ಕಾಂಗ್ರೆಸ್‌ ಪಕ್ಷಕ್ಕೆ ಇಂದು ಕಮ್ಯುನಿಸ್ಟರ ಜೊತೆಗೆ, ಮಾವೋವಾದಿಗಳ ಜೊತೆಗೆ ಅಥವಾ ಇಸ್ಲಾಮಿಸ್ಟರ ಜೊತೆಗೆ ಗುರುತಿಸಿಕೊಳ್ಳಲು ಯಾವುದೇ ತೊಂದರೆಯಿಲ್ಲ. ಆದರೆ ಅವರಿಗೆ ಆರ್‌ಎಸ್‌ಎಸ್‌ ಅಸ್ಪೃಶ್ಯ! ಮುಖರ್ಜಿಯವರು ಕಾಂಗ್ರೆಸ್‌ನ ಪೂರ್ವಗ್ರಹವನ್ನು ಮುರಿದಿರುವುದನ್ನು ನೋಡುವುದೇ ಸಂತಸದ ಸಂಗತಿ. 

ಪ್ಯಾರ್‌ಸೇಮಾರಿಯೋ
ಪ್ರಣಬ್‌ ದಾ ತಮ್ಮ ಭಾಷಣದಲ್ಲಿ ಏನು ಹೇಳಿದರು ಎನ್ನುವುದರ ಬಗ್ಗೆ ಆರ್‌ಎಸ್‌ಎಸ್‌ ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕೇನಿದ್ದರೂ ಪ್ರಣಬ್‌ರ ಚಿತ್ರ ಬೇಕಿತ್ತು. ಉಳಿದದ್ದನ್ನು 
ಐಟಿ ಸೆಲ್‌ನ ವಾಟ್ಸಾಪ್‌ ಘಟಕ ನೋಡಿಕೊಳ್ಳುತ್ತದೆ!

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews


Trending videos

Back to Top