CONNECT WITH US  

ಮೋದಿ ಫಿಟ್ನೆಸ್‌ ಚಾಲೆಂಜ್‌,ಏನನ್ನುತ್ತೆ ಟ್ವೀಟರ್‌?

ತೂಜಾನೇನಾ
ಮೋದಿಯವರ ಫಿಟ್ನೆಸ್‌ ಚಾಲೆಂಜ್‌ ಅನ್ನು ವಿರೋಧಿಸುವುದಕ್ಕಾಗಿಯೇ ಅವರ ವಿರೋಧಿಗಳೆಲ್ಲ ಇನ್ಮುಂದೆ ಜಂಕ್‌ ಫ‌ುಡ್‌ ಸೇವಿಸಲಾರಂಭಿಸಬಹುದು, ದಿನವೂ ಊಟ ಉಪಹಾರ ಬಿಟ್ಟು ಬೇಗ ಆರೋಗ್ಯ ಕೆಡಿಸಿಕೊಳ್ಳಬಹುದು. ಇವರಿಗೆಲ್ಲ ಶತಾಯಗತಾಯ ಮೋದಿಯವರನ್ನು ವಿರೋಧಿಸಲೇಬೇಕಲ್ಲವೇ! 

ಅನಿಕೇತ್‌ ಟಿ
ಪ್ರಧಾನಿಗಳು ಕುಮಾರಸ್ವಾಮಿಯವರಿಗೇಕೆ ಫಿಟ್ನೆಸ್‌ ಚಾಲೆಂಜ್‌ಗೆ ಆಹ್ವಾನ ನೀಡಿದ್ದು? ಅವರ ಬದಲು ಅವರ ತಂದೆ 86 ವರ್ಷದ ದೇವೇಗೌಡರಿಗೆ ಚಾಲೆಂಜ್‌ ಮಾಡಬೇಕಿತ್ತು. ಫಿಟೆ°ಸ್‌ನಲ್ಲಿ ದೇವೇಗೌಡರಿಗೆ ಯಾರಿದ್ದಾರೆ ಸರಿಸಾಟಿ? 

ರಮೇಶ್‌ ಶ್ರೀವತ್ಸ್
ಕುಮಾರಸ್ವಾಮಿಯವರು ಫಿಟ್ನೆಸ್‌ ಚಾಲೆಂಜ್‌ಗೆ ಒಪ್ಪಿಕೊಳ್ಳಬೇಕಿತ್ತು. ಒಪ್ಪಿಕೊಂಡ ನಂತರ ಅವರು ಪುಲ್‌ ಅಪ್ಸ್‌ ಮಾಡಬೇಕಿತ್ತು. ಅವರಿಗೆ ಬಾಹ್ಯ ಬೆಂಬಲವನ್ನು ಕಾಂಗ್ರೆಸ್‌ ಕೊಡುತ್ತಿತ್ತು! 

ಪ್ರೇಮಾ ಶಾಲಿನಿ
ನಮ್ಮ ಭಾರತೀಯ ಸೈನಿಕರನ್ನು ಪಾಕಿಸ್ತಾನಿಗಳು ಕೊಲ್ಲುತ್ತಿದ್ದಾರೆ, ಜಾರ್ಖಂಡ್‌ನ‌ಲ್ಲಿ ಅಕ್ರಮ ಗೋಸಾಗಣೆಯ ಅನುಮಾನದ ಮೇಲೆ ಇಬ್ಬರು ಅಮಾಯಕರನ್ನು ಹತ್ಯೆ ಮಾಡಲಾಗಿದೆ..ಇದೆಲ್ಲ ಭಾರತದಲ್ಲಿಯೇ ಆಗುತ್ತಿದೆ ಅಲ್ಲವೇ? ಆದರೆ ನಾನು ಈ ಬಗ್ಗೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಲೇಬಾರದು! ಏಕೆಂದರೆ ನನ್ನ ಪ್ರಧಾನಿ ರಾಷ್ಟ್ರಪ್ರೇಮದ ಫಿಟ್ನೆಸ್‌ ಚಾಲೆಂಜ್‌ ವೀಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. 

ಜಿತೇಂದ್ರ
ಉತ್ತಮ ಆರೋಗ್ಯವು ವ್ಯಕ್ತಿಯ ಪ್ರಾಡಕ್ಟಿವಿಟಿ ಯನ್ನು ಹೆಚ್ಚಿಸುತ್ತದೆ. ದೈಹಿಕವಾಗಿ ಆರೋಗ್ಯ ವಾಗಿರುವ ವ್ಯಕ್ತಿಯ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸದೃಢ ಭಾರತಕ್ಕಾಗಿ ಪ್ರಧಾನಿ ಮೋದಿಯವರು ಕೊಟ್ಟಿರುವ ಕರೆಯಲ್ಲಿ ತಪ್ಪೇನಿದೆ? ಮೋದಿ ವಿರೋಧಿಗಳೆಲ್ಲ ಪ್ರತಿಯೊಂದರಲ್ಲೂ ಹುಳುಕು ಹುಡುಕುವ ಸಿನಿಕತೆ ಬೆಳೆಸಿಕೊಂಡುಬಿಟ್ಟಿದ್ದಾರೆ. 

ಟ್ರೂಲ್‌ಕೇಜ್ರಿ
ಪ್ರಧಾನಿ ಮೋದಿಗೆ ಮೊದಲು ಫಿಟ್ನೆಸ್‌ ಚಾಲೆಂಜ್‌ ಕಳುಹಿಸಿದ್ದು ವಿರಾಟ್‌ ಕೊಹ್ಲಿ. ಆದರೆ ಈಗ ವಿರಾಟ್‌ ಕೊಹ್ಲಿ ಗಾಯಗೊಂಡಿದ್ದಾರೆ. ಈ ಕಾರಣಕ್ಕಾಗಿ ಪ್ರಧಾನಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ಸಿಗರು ಇನ್ನೂ ಆಗ್ರಹಿಸಿಲ್ಲವಾ?

ಸನ್ನಿಟೀನಾ 
ಕೇರಳವಾಸಿಯಾದ ನಾನು ತಮಿಳುನಾಡಿನ ಜನ ರಿಗೆ ಫಿಟ್ನೆಸ್‌ ಚಾಲೆಂಜ್‌ಗೆ ಆಹ್ವಾನ ನೀಡುತ್ತೇನೆ. ಇನ್ಮುಂದೆ ನೀರು ಬಿಡಿ ಎಂದು ನಮ್ಮ ರಾಜ್ಯವನ್ನು ಕೇಳಬೇಡಿ. ನೀವೇ ಹತ್ತಿರದ ಕೆರೆ, ಬಾವಿಗಳಿಂದ ಕೊಡ-ಬಕೀಟುಗಳಲ್ಲಿ ನೀರು ತುಂಬಿಕೊಳ್ಳಿ. 

ಮಧುಮಿತಾ ಮಜುಂದಾರ್‌
ದೇಶದಲ್ಲಿ ಲಕ್ಷಾಂತರ ಜನರು ಹೊಟ್ಟೆಗೆ ಹಿಟ್ಟಿಲ್ಲದೇ ಹಸಿವಿನಿಂದ ಮಲಗುತ್ತಿದ್ದಾರೆ. ಇಂಥ ದೇಶದಲ್ಲಿ ಫಿಟ್ನೆಸ್‌ ವೀಡಿಯೋ ಮಾಡುವುದು ಬಹಳ ಕೆಟ್ಟದಾಗಿ ಕಾಣುತ್ತದೆ ಎನ್ನುವುದನ್ನು ಪ್ರಧಾನಿಗಳಿಗೆ ಯಾರಾದರೂ ಹೇಳಬೇಕು. 

ಮೋಹನ್‌ ಕಾತ್ಯಾಯನ್‌
ಕುಮಾರಸ್ವಾಮಿಯವರು ತಮಗೆ "ರಾಜ್ಯದ ಫಿಟ್ನೆಸ್‌' ಬಗ್ಗೆ ಹೆಚ್ಚು ಚಿಂತೆ ಇದೆ ಎನ್ನುತ್ತಾರೆ. ಹಾಗಿದ್ದರೆ ಇಷ್ಟು ವರ್ಷ ಕರ್ನಾಟಕದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ರಾಜ್ಯವನ್ನು ವೀಕ್‌ ಮಾಡಿತ್ತು ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದೀರಾ?

ಸುರೇಶ್‌ ಸಾನ್ವಿತ್‌
ಜಂಕ್‌ ಫ‌ುಡ್‌ಗಳ ಈ ಜಮಾನಾದಲ್ಲಿ ದೈಹಿಕ ವ್ಯಾಯಾಮದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಕೂಡ ಭಾರತದ ನಿರ್ಮಾಣದ ಭಾಗವೇ. ಇಲ್ಲದಿದ್ದರೆ ಜಂಕ್‌ ಫ‌ುಡ್‌ಗಳಿಂದಾಗಿ ಬೊಜ್ಜು ಬೆಳೆಸಿಕೊಂಡಿರುವ ಅಮೆರಿಕನ್ನರಂತೆ ನಾವೂ ಆಗುವುದರಲ್ಲಿ ಸಂಶಯವಿಲ್ಲ. ಫಿಟ್ನೆಸ್‌ ಎನ್ನುವುದು ಸೆಲೆಬ್ರಿಟಿಗಳಿಗೆ ಸೀಮಿತವಾಗದಿರಲಿ, ಪ್ರತಿಯೊಬ್ಬ ಭಾರತೀಯನೂ ಫಿಟ್‌ ಆಗಲಿ.

Trending videos

Back to Top