CONNECT WITH US  

ಯೋಗ ದಿನ ಏನಂದ್ರು ಜನ?

ಸಾಗರಿಕಾ ಘೋಷ್‌
ನನಗೆ ಯೋಗದಲ್ಲಿ ನಂಬಿಕೆಯಿದೆ, ಪ್ರತಿದಿನವೂ ನಾನು ಯೋಗ ಮಾಡುತ್ತೇನೆ, ಅದರಿಂದ ಬಹಳ ಪ್ರಯೋಜನವಿದೆ. ಆದರೆ ಒಂದು ಸಂಗತಿ ಅರ್ಥವಾಗುತ್ತಿಲ್ಲ, ಅದೇಕೆ ಒಂದು ಸರ್ಕಾರ ಯೋಗಕ್ಕೆ ಪ್ರಚಾರ ನೀಡಬೇಕು? ಯೋಗ ವೈಯಕ್ತಿಕ ಆಯ್ಕೆ. ಹಾಡು ಮತ್ತು ಡ್ಯಾನ್ಸುಗಳ ಮೂಲಕ ಕಠೊರ ವಾಸ್ತವಗಳಿಂದ ನಮ್ಮ ಮನಸ್ಸನ್ನು ಡಿಸ್ಟ್ರಾಕ್ಟ್ ಮಾಡುವ ಬಾಲಿವುಡ್‌ ಸಿನೆಮಾದಂತೆ ಆಗುತ್ತಿದೆ ಮೋದಿ ಸರ್ಕಾರ.

ಪ್ರಾಪ್‌ಶುಗರ್‌
ಭಾರತದ ಪ್ರಗತಿಪರರು ಮೊದಲೆಲ್ಲ ಯೋಗವನ್ನು ಯಾವುದೋ ಹಳೆಯ ದೈಹಿಕ ಕಸರತ್ತಷ್ಟೇ ಎನ್ನುವಂತೆ ಮಾತನಾಡುತ್ತಿದ್ದರು. ಈಗ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಗುತ್ತಿದ್ದಂತೆಯೇ, ಯೋಗಕ್ಕೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ. ಅದೇ ಬೇರೆ ಇದೇ ಬೇರೆ ಎನ್ನಲಾರಂಭಿಸಿದ್ದಾರೆ. ಯೋಗ ದಿನ ಹತ್ತಿರವಾದಾಗಲೆಲ್ಲ ಇವರಿಗೆಲ್ಲ  ನಿದ್ದೆಯೇ ಇಲ್ಲವೇನೋ!

ಎಸ್‌ಚ್ಯಾಟರ್ಜಿ
ಯೋಗವನ್ನು ಮನಶ್ಯಾಂತಿಗಾಗಿ ಶಾಂತವಾದ ಜಾಗದಲ್ಲಿ ಮಾಡಬೇಕು. ಆದರೆ ದುರದೃಷ್ಟವಶಾತ್‌ ಭಾರತದಲ್ಲಿ ಅನೇಕರ ಮಾನಸಿಕ ಶಾಂತಿ ಮೇ 26, 2014ರಿಂದ ಬಿಗಡಾಯಿಸಿಬಿಟ್ಟಿದೆ. ಅಂಥವರು ವಾರಕ್ಕೆ ನಾಲ್ಕು ಬಾರಿ ಯೋಗ ಮಾಡಿದರೆ ತುಸು ನೆಮ್ಮದಿ ಸಿಗಬಹುದು! 

ರಾಹುಲ್‌ ಈಶ್ವರ್‌
ನಾನು ಗಮನಿಸಿದ ಕುತೂಹಲಕರ ಅಂಶವೆಂದರೆ, ಬಲಪಂಥೀಯರು ಹೆಚ್ಚಾಗಿ ಯೋಗ ದಿನಾಚರಣೆಯ ಬಗ್ಗೆ ಟ್ವೀಟ್‌ ಮಾಡುತ್ತಾರೆ. ಆದರೆ ವಿಶ್ವ ಸಂಗೀತ ದಿನದಂದು ಸುಮ್ಮನಿರುತ್ತಾರೆ. ಎಡಪಂಥೀಯರು ವಿಶ್ವ ಸಂಗೀತ ದಿನದ ಕುರಿತು ಹೆಚ್ಚು ಮಾತನಾಡುತ್ತಾರೆಯೇ ಹೊರತು ಅಂತಾರಾಷ್ಟ್ರೀಯ ಯೋಗ ದಿನದಂದು ಸುಮ್ಮನಿರುತ್ತಾರೆ. ಅರೆ ಸಹೋದರರೇ...ಯೋಗ ಮತ್ತು ಸಂಗೀತ ಮನಸ್ಸನ್ನು ಶಾಂತಗೊಳಿಸುತ್ತದೆ. ಎರಡೂ ಟ್ರೆಂಡ್‌ ಆಗಲಿ. 

ಚಂದನ್‌ಪಳೂರ್‌
ದೇಶದ ಅನೇಕ ರಾಜಕಾರಣಿಗಳು ತಾವು ನಿತ್ಯ ಯೋಗ ಮಾಡುವುದಾಗಿ ಹೇಳುತ್ತಾರೆ. ಆದರೆ ಹೀಗೆ ಹೇಳುವವರಲ್ಲೇ ಬಹಳ ಮಂದಿ ಸ್ಥೂಲಕಾಯರಿದ್ದಾರೆ ಎನ್ನುವುದೇ ಆಶ್ಚರ್ಯವಲ್ಲವೇ? 

ಡಿಲಿಬರಲ್‌
ನರೇಂದ್ರ ಮೋದಿಯವರು ಒಂದು ಬಂಡೆಗಲ್ಲಿನ ಮೇಲೆ ನಾಲ್ಕು ನಿಮಿಷ ಮಲಗಿರಬಹುದು. ಆದರೆ ನಮ್ಮ ಅರವಿಂದ್‌ ಕೇಜ್ರಿವಾಲ್‌ ಅವರು ಸೋಫಾದ ಮೇಲೆ 4 ದಿನದವರೆಗೆ ಮಲಗುತ್ತಾರೆ. ಇಲ್ಲಿ ಕಾಂಪಿಟೇಷನ್‌ನ ಮಾತೇ ಇಲ್ಲ. ಮೋದೀಜಿ ಈ ಯೋಗಗೀಗ ಮರೆತು ಅರವಿಂದ್‌ಜೀ ಅವರಿಂದ ಕಲಿಯಬೇಕು. 

ಸುಮುಖ್ಯಾನ್‌
ಪ್ರಧಾನಿಗಳು ಯೋಗ ದಿನದಂದು ಜೋರಾಗಿಯೇ ಮಾತನಾಡುತ್ತಾರೆ. ಆದರೆ ಅತ್ತ ಕಾಶ್ಮೀರ ತೊಂದರೆಗೆ ಸಿಲುಕಿದೆ, ದೇಶದಲ್ಲಿ ಅಮಾಯಕರ ಮೇಲೆ ಹಲ್ಲೆಗಳಾಗುತ್ತಿವೆ, ಪೆಟ್ರೋಲ್‌-ಡೀಸೆಲ್‌ ಬೆಲೆ ಗಗನಕ್ಕೇರಿದೆ. ಪ್ರಧಾನಿಗಳು ಇವ್ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ.  

ಅಶಿಮಾ
ಮೋದಿ ವಿರೋಧಿಗಳ ಘೋಷಣೆ: ನಾವು ಯೋಗ ಮಾಡುವುದಿಲ್ಲ ಏಕೆಂದರೆ ಮೋದಿ ಅದಕ್ಕೆ ಪ್ರಚಾರ ಕೊಡುತ್ತಿದ್ದಾರೆ, ನಾವು ಸ್ವತ್ಛ ಭಾರತಕ್ಕೆ ಸಪೋರ್ಟ್‌ ಮಾಡುವುದಿಲ್ಲ ಏಕೆಂದರೆ ಮೋದಿ ಅದರ ಪರವಿದ್ದಾರೆ. 

ತೂಜಾನೇನಾ
ಯೋಗ ದಿನಾಚರಣೆಯಂದು ಎಲ್ಲರೂ ಗಮನಿಸಬೇಕಾದ ಅಂಶವೆಂದರೆ ಹಿಂದೂ ಧರ್ಮ ಜಗತ್ತಿಗೆ ಯೋಗವನ್ನು ಕೊಟ್ಟಿದೆ. ಯೋಗದ ಮೂಲಕ ನಾವೇನೂ ಇನ್ನೊಂದು ರಾಷ್ಟ್ರದ ಮೇಲೆ ಆಕ್ರಮಣ ಮಾಡುತ್ತಿಲ್ಲ. ಇದು ಗುಣಾತ್ಮಕ ಪ್ರಸರಣ. 

ರೇಚೆಲ್‌ ಬಫೆಕ್‌
ನನಗೂ ಯೋಗಾಸನ ಗೊತ್ತಿದೆ. ಪ್ರತಿ ದಿನ ನಾನು ತಪ್ಪದೇ 8 ತಾಸು ಶವಾಸನ ಮಾಡುತ್ತೇನೆ! ನನ್ನದಷ್ಟೇ ಅಲ್ಲ, ಈಗಿನ ಅನೇಕ ಯುವಕರ ಫೇವರೆಟ್‌ ಆಸನವಿದು. 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews


Trending videos

Back to Top