CONNECT WITH US  

ಸಂಜು ಸಿನೆಮಾ, ಟೀಕಿಸುವವರು ಏನಂತಾರೆ?

ಎಫ್ಆರ್‌ಕೆ
ಹಾಲಿವುಡ್‌ನ‌ವರು ಮಹಾತ್ಮಾ ಗಾಂಧೀಜಿ,  ಮುಹಮ್ಮದ್‌ ಆಲಿ,  ಮಾರ್ಕ್‌ ಝುಕರ್‌
ಬರ್ಗ್‌, ರಾಮಾನುಜಂರಂಥ ಸಾಧಕರ ಬಗ್ಗೆ ಸಿನೆಮಾ ಮಾಡಿದರೆ ಬಾಲಿವುಡ್‌ನ‌ವರು ದಾವೂದ್‌ ಇಬ್ರಾಹಿಂ, ಸಂಜಯ್‌ ದತ್‌, ಅರುಣ್‌ ಗೌಳಿ, ಹಾಜಿ ಮಸ್ತಾನ್‌, ಅಬು ಸಲೀಂ, ಈಗ ಸನ್ನಿ ಲಿಯೋನ್‌ ಬಗ್ಗೆ ಸಿನೆಮಾ ಮಾಡುತ್ತಿದ್ದಾರೆ.

ದೇಸಿ ಜರ್ನೋ 
ಸಂಜು ಸಿನೆಮಾ ನೋಡಿದೆ. ಎಲ್ಲರೂ ಈ ಚಿತ್ರವನ್ನು ಮಾಸ್ಟರ್‌ಪೀಸ್‌ ಎನ್ನುತ್ತಿದ್ದಾರೆ. ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ಸಂಜಯ್‌ದತ್‌ನನ್ನು ಅಮಾಯಕ, ಸಮಯದ ಕೈಗೊಂಬೆ ಎನ್ನುವಂತೆ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿನೆಮಾ ಎನ್ನುವುದು ಅತ್ಯಂತ ಆರಾಮವಾಗಿ ಸತ್ಯವನ್ನು ಮರೆಮಾಚಬಲ್ಲದು! 

ಅನಿಕೇತ್‌ ಬೂಂಬಕ್‌
ಸಂಜು ಸಿನೆಮಾ ಅದಾಗಲೇ 200 ಕೋಟಿ ಗಳಿಸಿ ಮುಂದೋಡುತ್ತಿದೆ. ಜನರಿಗೆ ಈ ಸಿನೆಮಾ ಇಷ್ಟ ಆಗಿಲ್ಲ ಅಂದರೆ ಅದು ಈ ಪಾಟಿ ಸಕ್ಸಸ್‌ ಪಡೆಯುತ್ತಿತ್ತಾ? ಯಾವುದೇ ಖಾನ್‌ಗಳಿಲ್ಲದೇ, ಹಬ್ಬದ ದಿನದಂದು ಬಿಡುಗಡೆಯಾಗದೇ ಈ ಪ್ರಮಾಣದಲ್ಲಿ ಹಣ ಗಳಿಸಿರುವುದು ಸಾಧನೆ ಅಲ್ಲವೇ?

ನೇತ್ರಾ ದಾವೋ
ಸಂಜು ಸಿನೆಮಾ ನೋಡಿದಾಗ ನಮಗೆ ಅರ್ಥವಾಗುವುದೆಂದರೆ...
1)ಶ್ರೀಮಂತ ಅಪ್ಪ ಅಮ್ಮನ ಹಣವನ್ನು ಮಜಾ ಉಡಾಯಿಸುವ ಉಢಾಳ ಮಗ ಹೇಗಾಗಬಹುದು
2) ಹೇಗೆ ಜೀವನದಲ್ಲಿ ಚೂರೇ ಚೂರು ಕಷ್ಟ ಎದುರಾದರೂ ಡ್ರಗ್ಸ್‌ ದಾಸರಾಗಬಹುದು
3) ಹೇಗೆ ಕ್ರಿಮಿನಲ್‌ಗ‌ಳ ವಿಷಯವನ್ನು ಪೊಲೀಸರಿಂದ ಮುಚ್ಚಿಡಬಹುದು
4) ಹೇಗೆ 350 ಕ್ಕೂ ಹೆಚ್ಚು ಹೆಣ್ಣು ಮಕ್ಕಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಂಡದ್ದನ್ನು ಸಮರ್ಥಿಸಿಕೊಳ್ಳಬಹುದು ಎನ್ನುವುದು! ಭಲೇ ಬಾಲಿವುಡ್‌!!

ತೂಜಾನೇನಾ
ಸಂಜು ಸಿನೆಮಾ ಭಾರತೀಯ ಚಿತ್ರರಂಗದಲ್ಲಿನ ಇದುವರೆಗಿನ ಅತ್ಯಂತ ಪ್ರಾಮಾಣಿಕ ಬಯೋಪಿಕ್‌ ಅಂತೆ! ಅಷ್ಟು ಪ್ರಾಮಾಣಿಕ ಸಿನೆಮಾ ಆಗಿದ್ದರೆ ಸಂಜಯ್‌ ದತ್‌ ತನ್ನ ಮೊದಲನೆಯ ಹೆಂಡತಿಗೆ ಎಷ್ಟು ಕಿರುಕುಳ ಕೊಟ್ಟ ಎನ್ನುವುದನ್ನೇಕೆ ತೋರಿಸಲಿಲ್ಲ? 

ಅನಿತಾಶ್ಯಾಮ್‌
ಅತ್ಯಂತ ಬುದ್ಧಿವಂತರು ಹೇಗೆ ಸತ್ಯವನ್ನು ತಿರುಚಿ ಶಹಬ್ಟಾಸ್‌ಗಿರಿ ಗಿಟ್ಟಿಸಿಕೊಳ್ಳಬಲ್ಲರು ಎನ್ನುವುದನ್ನು ತಿಳಿದುಕೊಳ್ಳಬೇಕೆಂದರೆ ಸಂಜು ಸಿನೆಮಾ ನೋಡಬೇಕು. 

ವಸುಧಾ ವೇಣುಗೋಪಾಲ್‌ 
ರಾಜ್‌ಕುಮಾರ್‌ ಹಿರಾನಿಯ ಇದುವರೆಗಿನ ಅತ್ಯಂತ ದುರ್ಬಲ, ಅಪ್ರಾಮಾಣಿಕ, ಅಪಾಯಕಾರಿ ಸಿನೆಮಾ ಇದು. ಮುಂದೇನು? ಸಲ್ಮಾನ್‌ ಖಾನ್‌ ಜೀವನಾಧಾರಿತ ಚಿತ್ರ ಬರುತ್ತದಾ? 

ಸಪನ್‌ ವರ್ಮಾ
ರಣಬೀರ್‌ ಕಪೂರ್‌ ಎಷ್ಟು ಅದ್ಭುತ ಕಲಾವಿದ ಎನ್ನುವುದು ಸಂಜು ಸಿನೆಮಾ ನೋಡಿದಾಗ ಅರ್ಥವಾಗುತ್ತದೆ. ಸಂಜಯ್‌ ದತ್‌ ಪಾತ್ರವನ್ನು ರಣಬೀರ್‌  ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾನೆಂದರೆ ಸಂಜಯ್‌ನ ಅಪರಾಧಗಳನ್ನೆಲ್ಲ ನಾವು ಮರೆತೇಬಿಡುತ್ತೇವೆ! 

ಹತಿಂದರ್‌ ಸಿಂಗ್‌
ಸಿನೆಮಾದಲ್ಲಿ ಸಂಜಯ್‌ದತ್‌ ತಾನು 350 ಹುಡುಗಿಯರೊಂದಿಗೆ ಮಲಗಿದ್ದಾಗಿ ಹೇಳಿಕೊಂಡಾಗ ಥಿಯೇಟರ್‌ನಲ್ಲಿದ್ದ ಯುವಕರೆಲ್ಲ ಚಪ್ಪಾಳೆ ತಟ್ಟಿ, ಶಿಳ್ಳೆಹೊಡೆಯಲಾರಂಭಿಸಿದರು. ನಮ್ಮ ಯುವಕರಿಗೆ ಏನಾಗಿದೆ?


Trending videos

Back to Top