CONNECT WITH US  

"ಹಿಂದೂ ಪಾಕಿಸ್ತಾನ' ಏನಂತಾರೆ ಟ್ವೀಟರ್‌ ಜನ?

ಅನಿರ್ಬಾನ್‌ ಸೋಮೇಶ್‌
2019ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ "ಹಿಂದೂ ಪಾಕಿಸ್ತಾನವಾಗುತ್ತದೆ' ಎನ್ನುತ್ತಾರೆ ಶಶಿ ತರೂರ್‌. ಅರೆ, ಬಿಜೆಪಿ 2014ರಿಂದಲೂ ಅಧಿಕಾರದಲ್ಲಿದೆ. ಈ ಅವಧಿಯಲ್ಲೇ ದೇಶ "ಹಿಂದೂ ಪಾಕಿಸ್ತಾನ' ಆಗಬಹುದಿತ್ತಲ್ಲ?

ಅಂಕುರ್‌ ಭಾರದ್ವಾಜ್‌
ಶಶಿ ತರೂರ್‌ ಮಾತು ಅಕ್ಷರಶಃ ಸತ್ಯ. ನಿಜಕ್ಕೂ ದೇಶದಲ್ಲಿ ಭಯದ ವಾತಾವರಣವಿದೆ. ಆ ಭಯ ಸ್ಪಷ್ಟವಾಗಿ ನಿತ್ಯವೂ ಗೋಚರಿಸುತ್ತಿದೆ. ಇಂಥ ವಿಷಯಗಳ ಮೇಲೆ ಮಾತನಾಡಿದರೆ ತಪ್ಪೇನು? ಮಾತನಾಡದಿದ್ದರೆ ರಾಜಕಾರಣವೇಕೆ ಬೇಕು?

ಅಭಿಜಿತ್‌ ಮಜುಂದಾರ್‌
ಭಾರತ ಹಿಂದೂ ಪಾಕಿಸ್ತಾನವಾಗಿಬಿಡುತ್ತದೆ ಎಂದು ಭಯ ಹುಟ್ಟಿಸುತ್ತಿರುವವರು ಬಹಳ ಕುತಂತ್ರದಿಂದ ಎರಡೂ ರಾಷ್ಟ್ರಗಳನ್ನು ಹೋಲಿಸುತ್ತಿದ್ದಾರೆ. ಪಾಕಿಸ್ತಾನ ಹುಟ್ಟಿದ್ದೇ ಧರ್ಮಾಂಧತೆಯಿಂದ. ಯಾವಾಗ ಪಾಕಿಸ್ತಾನ ತನ್ನ ಬೇರುಗಳನ್ನು ಕಿತ್ತುಕೊಂಡು ನಮ್ಮಿಂದ ದೂರವಾಯಿತೋ ಆಗಲೇ ಎರಡೂ ರಾಷ್ಟ್ರಗಳ ಡಿಎನ್‌ಎ ಮತ್ತು ಹಣೆಬರಹ ಭಿನ್ನವಾಗಿಬಿಟ್ಟವು. 

ಡಾ. ಡೇವಿಡ್‌ ಫ್ರಾಲಿ
ಭಾರತ ಅಪಾಯಕಾರಿ ಹಿಂದೂ ಪಾಕಿಸ್ತಾನವಾಗುತ್ತದೆ ಎಂದು ಕಥೆ ಹಬ್ಬಿಸುವವರು ಅದೇಕೆ ಪಾಕಿಸ್ತಾನದೊಂದಿಗೆ ಅಷ್ಟು ನಿಕಟವಾಗಿದ್ದಾರೆ? ಅದೇಕೆ ಇವರ ಲೇಖನಗಳು ಪಾಕಿಸ್ತಾನದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ? ಪದೇ ಪದೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಇವರ ಮಾತುಗಳನ್ನು ಉಲ್ಲೇಖೀಸಲಾಗುತ್ತದೆ? ಅದೇಕೆ ಇವರು ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ನಾಯಕರ ಜೊತೆ ಫೊಟೋ ತೆಗೆಸಿಕೊಳ್ಳುತ್ತಾರೆ? 

ಮೇಜರ್‌ ಸುರೇಂದ್ರ ಪೂನಿಯಾ
ಶಶಿ ತರೂರ್‌ ಸರ್‌, ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸುವುದು ಚಿನ್ನದ ನಾಣ್ಯವನ್ನು ಹಿತ್ತಾಳೆ ನಾಣ್ಯಕ್ಕೆ ಹೋಲಿಸಿದಂತೆ. 
1)ಭಾರತವು ಸೆಕ್ಯುಲರ್‌ ಡೆಮಾಕ್ರಸಿ/ಪಾಕಿಸ್ತಾನ ಮಿಲಿ-ಟೆರರ್‌-ಕ್ರಸಿ
2) ಪಾಕಿಸ್ತಾನ ಉಗ್ರರನ್ನು ರಫ್ತು ಮಾಡುತ್ತದೆ/ ಭಾರತ ಉಗ್ರರ ವಿರುದ್ಧ ಹೋರಾಡುತ್ತದೆ
3) ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಾಗಿದ್ದಾರೆ/ಪಾಕಿಸ್ತಾನದಲ್ಲಿ ಅವರಿಗೆ ಹೆಚ್ಚು ಅಭದ್ರತೆಯಿದೆ

ರಮೇಶ್‌ ಕೇಸರ್‌
ಏನೇ ಆದರೂ ಕೇಂದ್ರ ಸರ್ಕಾರ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಿಸಿಯನ್ನು ಕಡಿಮೆ ಮಾಡಲೇಬೇಕು. ಎಲ್ಲಿಯವರೆಗೂ ಅದು ಗಟ್ಟಿದನಿಯಲ್ಲಿ ಜಾತ್ಯತೀತತೆಯ ರಕ್ಷಣೆಯ ಬಗ್ಗೆ ಮಾತನಾಡುವುದಿಲ್ಲವೋ ಅಲ್ಲಿಯವರೆಗೂ ಭಯದ ವಾತಾವರಣ ಇದ್ದೇ ಇರುತ್ತದೆ. 

ಜೆಎಸ್‌ಆರ್‌ ಲಕ್ಕಿ
ಅಪರಾಧಿಗಳಿಗೆ ಹಾರ ಹಾಕುವ ಹಿಂದುತ್ವ ನಮಗೆ ಬೇಕಿಲ್ಲ. ನಿಜವಾದ ಹಿಂದುತ್ವವನ್ನು ನಾವಿಂದು ರಕ್ಷಿಸಬೇಕಿದೆ. ಬಿಜೆಪಿ ಎನ್ನುವುದು ಕೇವಲ "ರಾಜಕೀಯ ಪಾರ್ಟಿ' ಎನ್ನುವುದನ್ನು ಮರೆಯದಿರಿ. 

ಆಶು
ಈಗ ಕಾಂಗ್ರೆಸ್‌ "ಹಿಂದೂ ಪಾಕಿಸ್ತಾನದ' ಬಗ್ಗೆ ಮಾತನಾಡುತ್ತಿದೆ. ಹಿಂದೆ "ಕೇಸರಿ ಉಗ್ರವಾದ-ಹಿಂದೂ ಉಗ್ರವಾದ' ಎಂಬ ಹೆಸರು ಹುಟ್ಟುಹಾಕಿದ್ದು ಕೂಡ ಇದೇ ಕಾಂಗ್ರೆಸ್‌. 

ಆಸ್ಥಾ ತ್ಯಾಗಿ
ಈ ಕಾಲದಲ್ಲಿ ಜ್ಞಾನ ಮತ್ತು ವಿಚಾರಗಳನ್ನು ಹಂಚಿಕೊಳ್ಳುವುದೇ ಮಹಾಪರಾಧವಾಗಿಬಿಟ್ಟಿದೆ. ಶಶಿ ತರೂರ್‌ರ ಪೂರ್ಣ ಮಾತುಗಳನ್ನು ಯಾರೂ ಕೇಳಿಸಿಕೊಳ್ಳಲೇ ಇಲ್ಲ. ಇಂದು ಚರ್ಚೆಗಳು ಅರ್ಧಂಬರ್ಧ ತುಂಡರಿಸಿದ, ರೋಚಕ ಹೆಡ್‌ಲೈನ್‌ಗಳಾಗಿ ಬದಲಾಗುತ್ತಿರುವುದು ಖೇದದ ವಿಚಾರ. ನಾವು ಸತ್ಯದತ್ತ ತಿರುಗಿಯೂ ನೋಡುತ್ತಿಲ್ಲ. ಮಾಹಿತಿಯನ್ನು ಖಚಿತಪಡಿಸಿಕೊಳ್ಳುವ ಮನಸ್ಸೂ ನಮಗಿಲ್ಲ. ನಮಗೀಗ ಬೇಕಿರುವುದು ಸುಲಭವಾಗಿ ಅರಗುವ ಸೆನ್ಸೇಷನಲ್‌ ಸುದ್ದಿಯಷ್ಟೆ.

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

ಇಂದು ಹೆಚ್ಚು ಓದಿದ್ದು

ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ 'ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು' ಗೋಷ್ಠಿಯಲ್ಲಿ ಡಾ| ಶಿವ ವಿಶ್ವನಾಥನ್‌ ಮಾತನಾಡಿದರು.

Jan 20, 2019 05:03pm

ಶಿರಸಿ: ಬಣ್ಣದ ಮಠದ ಶ್ರೀಗಳು ಆಶೀರ್ವಚನ ನೀಡಿದರು.

Jan 20, 2019 04:54pm

Trending videos

Back to Top