CONNECT WITH US  

ಕಾಲವಾದ ಕರುಣಾ, ಏನಂದ್ರು ಟ್ವೀಟರ್‌ ಜನ?

ಎಂ.ಎಸ್‌. ಸ್ವಾಮಿನಾಥನ್‌
ಕರುಣಾನಿಧಿಯವರಿಗೆ ವಿಜ್ಞಾನಿಗಳ ಬಗ್ಗೆ ಬಹಳ ಗೌರವವಿತ್ತು. 1989ರಲ್ಲಿ ನಾನು ಅವರನ್ನು ಭೇಟಿಯಾಗಿ ವಿಜ್ಞಾನ ಸಂಸ್ಥೆಯೊಂದನ್ನು ಕಟ್ಟಸುವುದಕ್ಕಾಗಿ ಜಾಗ ಕೊಡಿ ಎಂದು ಕೇಳಿದೆ. ಅದಕ್ಕೆ ಕೂಡಲೇ ಅವರು "ಇಂಥ ಸಂಸ್ಥೆಯನ್ನು ಸ್ಥಾಪಿಸಲು ನಾನೇ ನಿಮಗೆ ಆಹ್ವಾನ ಕೊಡಬೇಕಿತ್ತು' ಎಂದು ಸ್ಥಳ ಮಂಜೂರು ಮಾಡಿದರು. 
 
ಸತ್ಯಂವದಾ
ಸ್ವಾರ್ಥಪರ ರಾಜಕಾರಣಿಗಳೆಲ್ಲರಲ್ಲಿ ಇರುವ ಗುಣವೇ ಕರುಣಾನಿಧಿಯವರಲ್ಲೂ ಇತ್ತು. ಅವರು ನಿಧನರಾದರು ಎಂದಾಕ್ಷಣ ಆ ಗುಣಗಳನ್ನೆಲ್ಲ ಮರೆತುಬಿಡಲಿಕ್ಕೆ ಸಾಧ್ಯವಾಗುತ್ತದಾ? ಅವರು ತಮಿಳುನಾಡಿನಲ್ಲಿ ಕುಟುಂಬ ರಾಜಕಾರಣ ಬೆಳೆಯುವುದಕ್ಕೆ ಕಾರಣವಾದರು, ಎಲ್‌ಟಿಟಿಇಯಂಥ ಸಂಘಟನೆಗಳ ಪರವಿದ್ದರು, ಓಲೈಕೆ ರಾಜಕಾರಣ ಮಾಡಿದರು, ಕೆಲ ಸಮುದಾಯಗಳನ್ನು ವಿಪರೀತ ದ್ವೇಷಿಸುತ್ತಿದ್ದರು. 

ತೂಜಾನೇನಾ
ಮರೆತುಹೋಯಿತೇ? 2007ರ ಸೇತುಸಮುದ್ರಂ ಪ್ರತಿಭಟನೆಯ ವೇಳೆ ಇದೇ ಕರುಣಾನಿಧಿಯವರು...ರಾಮ ಎಂದರೆ ಯಾರು? ಆತ ಯಾವಾಗ ಸೇತುವೆ ನಿರ್ಮಿಸಿದ? ಯಾವ ಕಾಲೇಜಲ್ಲಿ ಎಂಜಿನಿಯರಿಂಗ್‌ ಓದಿದ್ದ ಎಂದು ಕುಹುಕವಾಡಿದ್ದು? 

ವರರುಚಿ ಪ್ರಜಾ
ಹಿಂದಿಯ ಖ್ಯಾತ ಸುದ್ದಿ ವಾಹಿನಿ ಎಬಿಪಿ ನ್ಯೂಸ್‌ "ಕರ್ನಾಟಕ್‌ದ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನ' ಎಂದು ಪದೇ ಪದೆ ಬ್ರೇಕಿಂಗ್‌ ನ್ಯೂಸ್‌ ಬಿತ್ತರಿಸಿತು. ಕರುಣಾನಿಧಿ ತಮಿಳುನಾಡಿನವರು ಮತ್ತು ಅದು "ಕರ್ನಾಟಕ'ವೇ ಹೊರತು "ಕರ್ನಾಟಕ್‌' ಅಲ್ಲ ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ ಇವರಿಗೆಲ್ಲ? ಉತ್ತರ ಭಾರತದ ಮಾಧ್ಯಮಗಳು ದೇಶವೆಂದರೆ ಕೇವಲ ಹಿಂದಿ ಬೆಲ್ಟ್ ಎಂದು ಭಾವಿಸುತ್ತಾ ಬಂದದ್ದರ ಫ‌ಲವಿದು. 

ಸುಭಾಷ್‌
ತಮಿಳುನಾಡಿನ ದ್ರಾವಿಡ ಪಕ್ಷಗಳು ಮೊದಲಿನಿಂದಲೂ ಹಿಂದೂ ಸಂಪ್ರದಾಯಗಳನ್ನು ವಿರೋಧಿಸಿಕೊಂಡೇ ಬಂದಿವೆ. ಆದರೂ ಕೆಲವು ನಾಯಕರು ನಾಸ್ತಿಕವಾದಿ ಕರುಣಾನಿಧಿಯವರ ಸಮಾಧಿಯ ಮೇಲೆ ಹಾಲಿನ ಅರ್ಚನೆ ಮಾಡಿದರು. ಅಕ್ಷತೆ ಹಾಕಿದರು. ಹಾಲಿನ ಅಭಿಷೇಕವನ್ನು ಪದೇ ಪದೆ ಕುಹಕ ಮಾಡುವ ಜಾತ್ಯತೀತರು ಈಗೆಲ್ಲಿದ್ದಾರೆ? 

ಕರ್ನಲ್‌ ಅಜಿತ್‌ ಭಿಂದರ್‌
1990ರಲ್ಲಿ ಕರುಣಾನಿಧಿ ಸಿಎಂ ಆಗಿದ್ದಾಗ ನಮ್ಮ ಸೇನಾ ತುಕಡಿ ಶ್ರೀಲಂಕಾದಿಂದ ಮದ್ರಾಸ್‌ ಬಂದರಿಗೆ ಬಂದಿಳಿಯಿತು. ಅಂದು ನಮ್ಮ ತಂಡವನ್ನು ಸ್ವಾಗತಿಸಲು ಒಂದೇ ಒಂದು ನರಪಿಳ್ಳೆಯೂ ಇರಲಿಲ್ಲ. 

ರಾಂಪ್ರಸಾದ್‌
ಅದ್ಹೇಗೆ ಕರುಣಾ ಇಡೀ ದಕ್ಷಿಣದ ನಾಯಕರಾಗಿಬಿಡುತ್ತಾರೆ? ಅವರೇನಿದ್ದರೂ ತಮಿಳುನಾಡಿಗೆ ಸೀಮಿತವಾಗಿದ್ದರು. ದಕ್ಷಿಣದ ಇತರೆ ರಾಜ್ಯಗಳನ್ನು ಬೇಕಿದ್ದರೆ ಕೇಳಿ ನೋಡಿ. 

ಎನ್‌ಎಸ್‌ಎಂ ಲೈವ್‌
ಸತ್ಯವೇನೆಂದರೆ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆ ಗಳು ಹಿಂದಿ ಹೇರಿಕೆಯನ್ನು ಸಕ್ಷಮವಾಗಿ ಎದುರಿಸಿ ಗಟ್ಟಿಯಾಗಿ ನಿಂತಿವೆಯೆಂದರೆ ಅದಕ್ಕೆ ಕರುಣಾನಿಧಿ ಯವರ ಹೋರಾಟವೂ ಪ್ರಮುಖ ಕಾರಣ. 

ರಿಶಿಬಾಗ್ರಿ
ಜಯಲಲಿತಾ ನಿಧನರಾದಾಗ "ನೀತಿ ನಿಯಮಗಳ' ನೆಪವೊಡ್ಡಿದ ಡಿಎಂಕೆಯ ಮಂದಿ ಅವರಿಗೆ ಮರಿನಾ ಬೀಚ್‌ನಲ್ಲಿ ಸಮಾಧಿ ಜಾಗ ಸಿಗದಂತೆ ಮಾಡಲು ಪಿಐಎಲ್‌ ಕೇಸ್‌ಗಳನ್ನು ಹಾಕಿದ್ದರು. ಆದರೆ ತಮ್ಮ ನಾಯಕ ನಿಧನರಾಗುತ್ತಿದ್ದಂತೆಯೇ ಈ ಎಲ್ಲಾ ಕೇಸ್‌ಗಳನ್ನು ವಾಪಸ್‌ ಪಡೆದುಬಿಟ್ಟರು. 

ಸಿದ್ದಾರ್ಥ್ ಕೋದಾಡ್ಲ
ಮುಖ್ಯವಾಹಿನಿ ಮಾಧ್ಯಮಗಳು ಕೇವಲ ಕರುಣಾನಿಧಿ ಯವರ ಒಂದೇ ಮಗ್ಗುಲ ರಾಜಕಾರಣದ ಬಗ್ಗೆ ಮಾತನಾಡುತ್ತಿವೆ. ಅವರನ್ನು ಸಂತರಂತೆ ಬಿಂಬಿಸಲು ಪ್ರಯತ್ನಿಸುತ್ತಿವೆ. ಇದೇ ಮಾಧ್ಯಮಗಳು ಮೋದಿ ಯನ್ನು ವಿರೋಧಿಸುವ ಭರದಲ್ಲಿ ಲಾಲೂ ಅವರನ್ನೂ ಕೊಂಡಾಡಿದ್ದವು. ಸತ್ಯವೇನೆಂದರೆ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಇಂಥ ವಿಷಯಗಳಿಗೆ ಪರ-ವಿರೋಧದ ಜಾಗ ಸಿಗುತ್ತಿರುವುದು. 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

ಇಂದು ಹೆಚ್ಚು ಓದಿದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top