700 ಕೋಟಿ "ಕಾಲ್ಪನಿಕ'ದಾನ,ಏನಂತಾರೆ ಟ್ವಿಟಿಜನ?

ಆರ್ ಸುನೇತ್ರ
ಯುಎಇ ಕೇರಳಕ್ಕೆ 700 ಕೋಟಿ ದಾನ ಕೊಡಲು ಮುಂದಾಗಿಯೇ ಇಲ್ಲ ಎನ್ನುವುದನ್ನು ಖುದ್ದು ಆ ರಾಷ್ಟ್ರದ ರಾಯಭಾರಿಯೇ ಹೇಳಿದ್ದಾರೆ. ಈಗ ಕೇರಳದ ರಾಜಕೀಯ ಪಕ್ಷಗಳು, ಮುಖ್ಯವಾಹಿನಿ ಮಾಧ್ಯಮಗಳೇಕೆ ಸುಮ್ಮನಾಗಿಬಿಟ್ಟವು? ತಮ್ಮ ತಪ್ಪನ್ನು ಒಪ್ಪಿಕೊಳ್ಳಬಹುದಾ ಇವೆಲ್ಲ?
ಅನಿರ್ಬಾನ್ ವಿವೇಕ್
ಕೇಂದ್ರ ಸರ್ಕಾರದ ನೆರವು ಸಿಕ್ಕರೂ ಕೂಡ ಕೇರಳ ಸರ್ಕಾರ ಒಂದಿನಿತೂ ಸಮಾಧಾನ ಪಡಲಿಲ್ಲ. ಆದರೆ ಅರಬ್ ರಾಷ್ಟ್ರದ "ಕಾಲ್ಪನಿಕ ದೇಣಿಗೆ'ಯನ್ನು ಮಾತ್ರ ಎಣಿಸಿ ಖುಷಿಪಟ್ಟಿತು.
ಸುರೇಶ್ ಅಂತರ್
ಇಂಥ ಸುಳ್ಳು ಸುದ್ದಿಗಳು ಹುಟ್ಟಿಕೊಳ್ಳುವುದು ಹೇಗೆ? ಹುಟ್ಟಿಕೊಂಡರೂ ಮುಖ್ಯವಾಹಿನಿ ಮಾಧ್ಯಮಗಳಿಗೆ ಸುದ್ದಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವ ತಾಳ್ಮೆ ಏಕಿಲ್ಲ?
ಟ್ರೂಕೇಜ್ರಿ
ಕೇರಳದ ವಿತ್ತ ಸಚಿವರಂತೂ "ಯುಎಇ'ಯ ದೇಣಿಗೆಯನ್ನು ಮೋದಿ ಸರ್ಕಾರ ನಿರಾಕರಿಸಿತು ಎಂದು ನಿರಂತರವಾಗಿ ದಾಳಿ ಮಾಡುತ್ತಲೇ ಬಂದರು. ಆದರೆ ಈಗ ಈ ಸುದ್ದಿ ಸುಳ್ಳು ಎಂದಾಗಿದೆ. ಹಾಗಿದ್ದರೆ ಅವರು ಮತ್ತವರ ಸಹೋದ್ಯೋಗಿಗಳು ಮೋದಿ ಸರ್ಕಾರಕ್ಕೆ ಕ್ಷಮೆ ಕೇಳುತ್ತಾರಾ?
ಅಭಿಜಿತ್ ಮಾದ್ಲಾ
ಅಯ್ಯೋ, ಇದೆಲ್ಲ ಸುಳ್ಳು ಸುದ್ದಿಯಾ!! ಛೆ, ಛೆ... ಹಾಗಿದ್ದರೆ ಈ "700 ಕೋಟಿ ನಿರಾಕರಣೆಯ' ಕಾಲ್ಪನಿಕ ಘಟನೆಯನ್ನು ವಿರೋಧಿಸುತ್ತಾ ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟೊಂದು ಹೊಡೆದಾಡಿಬಿಟ್ಟೆ! ನನ್ನ ಎಲ್ಲಾ ಎನರ್ಜಿ ವೇಸ್ಟ್ ಆಯಿತು.
ತಿಲೋತ್ತಮ್ ಗೌಣವ್
ಎರಡೇ ದಿನದ ಹಿಂದೆ ಮುಖ್ಯವಾಹಿನಿ ಮಾಧ್ಯಮಗಳೆಲ್ಲ "2004ರ ಅನವಶ್ಯಕ ಪಾಲಿಸಿಗೆ ಗಂಟು ಬಿದ್ದ ಮೋದಿ ಸರ್ಕಾರ ಯುಎಇ ಸಹಾಯವನ್ನು ನಿರಾಕರಿಸಿ ತಪ್ಪು ಮಾಡಿದೆ' ಎಂದು ಬುದ್ಧಿವಾದ ಹೇಳಲು ಬಂದವು. ಹಾಗಿದ್ದರೆ ಆ ಪಾಲಿಸಿ ಬಂದದ್ದು ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಎನ್ನುವುದನ್ನು ಇವು ಮರೆತುಬಿಟ್ಟವಾ? ಆಗೇಕೆ ಯುಪಿಎ ಅನ್ನು ಪ್ರಶ್ನಿಸಲಿಲ್ಲ?
ಪತಂಗ್ಪಟಾಖಾ
ಎಡಪಂಥೀಯರು ಮತ್ತು ಕೇರಳದ ಕೆಲವು ಸ್ವಯಂಘೋಷಿತ ಬುದ್ಧಿಜೀವಿಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಾ ಯುಎಇಯ ರಾಜನನ್ನು ಹೊಗಳಿದರು. ಕೆಲವೆಡೆಯಂತೂ ಯುಎಇ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುವ ಪೋಸ್ಟರ್ಗಳನ್ನೂ ಅಂಟಿಸಿಬಿಟ್ಟರು!
ತ್ರಿಲೋಕ್ ತೇಜ್
ಇತ್ತೀಚೆಗಷ್ಟೇ ಕೇಂದ್ರ ಸಚಿವರು ಸುಳ್ಳು ಸುದ್ದಿಗಳ ಹರಿವನ್ನು ತಡೆಯಿರಿ ಎಂದು ವಾಟ್ಸ್ಆ್ಯಪ್ ಸಂಸ್ಥೆಯ ಮೇಲೆ ಒತ್ತಡ ಹೇರಿದ್ದಾರೆ. ಇದೀಗ ಇಂಥದ್ದೇ ಒತ್ತಡವನ್ನು ಮುಖ್ಯವಾಹಿನಿ ಮಾಧ್ಯಮಗಳ ಮೇಲೂ ತರಬೇಕು. ಟಿಆರ್ಪಿ ಗಿಟ್ಟಿಸಿಕೊಳ್ಳುವ ಭರದಲ್ಲಿ ಸುದ್ದಿಯ ಸತ್ಯಾಸತ್ಯತೆ ತಿಳಿಯದೇ ಒಂದು ಪಕ್ಷದ/ ಸರ್ಕಾರದ ಮೇಲೆ ಸುಳ್ಳು ಕಥೆಗಳನ್ನು ಬಿತ್ತರಿಸುವುದು ತಪ್ಪಲ್ಲವೇ?
ಕಾರ್ತಿಕ್ ಮೀಮಾಂಸ
ಮಾಧ್ಯಮಗಳು, ಸೋಷಿಯಲ್ ಮೀಡಿಯಾದಲ್ಲಿನ ಸೋಕಾಲ್ಡ್ ಪ್ರಗತಿಪರರು ಮತ್ತು ಕೇರಳ ಸರ್ಕಾರ ಈ ಕೂಡಲೇ ಕೇಂದ್ರ ಸರ್ಕಾರಕ್ಕೆ ಕ್ಷಮೆಯಾಚಿಸಲಿ.
ಕೇದಾರ್ ಸಂಗಂ
ಭಾರತದ ಮಾಧ್ಯಮಗಳಲ್ಲಿ ಟಿಆರ್ಪಿ ಪೈಪೋಟಿ ಮಿತಿಮೀರಿದ್ದರ ಪರಿಣಾಮವಿದು. ಸುಳ್ಳು-ಸತ್ಯ ಎನ್ನುವುದು ಇವುಗಳಿಗೀಗ ಮುಖ್ಯವೇ ಅಲ್ಲ. ಸ್ವಾರಸ್ಯಕರವಾಗಿರಬೇಕು, ರೋಚಕವಾಗಿರಬೇಕು.ಸುಳ್ಳಾಗಿರಲಿ, ಸತ್ಯವಾಗಿರಲಿ..
ಟ್ರೂಕೋಟ್ಸ್
ಇಲ್ಲಿ ಯಾರಿಗೆ ರಾಜಕೀಯ ಮೇಲುಗೈಯಾಯಿತು ಎನ್ನುವುದಷ್ಟೇ ಚರ್ಚೆಯಾಗುತ್ತಿದೆ. ಜನರ ಬಗ್ಗೆ ಮಾತನಾಡುವವರೇ ಇಲ್ಲ!
ನೀವೂ ನಮಗೆ ಟ್ವೀಟ್ ಮಾಡಿ @UdayavaniNews