CONNECT WITH US  

"ನಗರದ ನಕ್ಸಲ್‌' ಚರ್ಚೆ, ಏನಂತಾರೆ ಟ್ವಿಟಿಜನ?

ಎಮಿನೆಂಟ್‌ ಇಟಲೆಕ್ಚುವಲ್‌
ಪ್ರಗತಿಪರರ ನಿಘಂಟು: 
1) ನಕ್ಸಲ್‌ ಕಾರ್ಯಕರ್ತ= ಮಾನವ ಹಕ್ಕು ಕಾರ್ಯಕರ್ತ
2) ಮಾವೋವಾದಿ= ಕ್ರಾಂತಿಕಾರಿ ಲೇಖಕ
3) ಕಾನೂನು = ಅಘೋಷಿತ ತುರ್ತುಪರಿಸ್ಥಿತಿ
4) ಕಾಶ್ಮೀರದಲ್ಲಿ ಜಿಹಾದ್‌ = ಸ್ವಾತಂತ್ರ್ಯ  ಹೋರಾಟ! 

 ಉಮರ್‌ ಖಾಲಿದ್‌
ನಾಲ್ಕು ವರ್ಷದ ಹಿಂದೆ ನ್ಯಾಯಾಲಯಗಳು ಅರುಣ್‌ ಫೆರೆರಾರನ್ನು ನಕ್ಸಲ್‌ ಅಲ್ಲ ಎಂದು ಒಪ್ಪಿಕೊಂಡವು. ಈಗ ಮತ್ತೆ ಅರುಣ್‌ರನ್ನು ನಕ್ಸಲ್‌ ಎಂದು ಬಂಧಿಸಲಾಗಿದೆ. ಇದಕ್ಕಿಂತಲೂ ರಿಡಿಕುಲಸ್‌ ಸಂಗತಿ ಇನ್ನೇನಿದ್ದೀತು? 

 ನಯನಿಕಾ
1970ರಲ್ಲಿ ನಮ್ಮ ಪೋಷಕರ ಮದುವೆಯಾಯಿತು. ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ತಮ್ಮ ಮದುವೆಗೆ ಅವರು ಪೊಲೀಸ್‌ ಭದ್ರತೆ ಪಡೆದುಕೊಳ್ಳಬೇಕಾಯಿತು. ಏಕೆಂದರೆ ಆ ಸಮಯದಲ್ಲಿ ನಕ್ಸಲರು ಮದುವೆ ಮನೆಗೆ ನುಗ್ಗಿ ಎಲ್ಲರ ಒಡವೆ ಕದಿಯುವುದು ಸಾಮಾನ್ಯವಾಗಿತ್ತು. ಆ ಸಮಯದಲ್ಲಿ ಜನರೂ ಸಾವನ್ನಪ್ಪುತ್ತಿದ್ದರು. ನಿಮ್ಮನ್ನು ನೀವು ನಗರದ ನಕ್ಸಲರು ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತೀರೆಂದರೆ ಮೊದಲು ನಿಮ್ಮ ತಾಯಿಯ ಒಡವೆ ಕದಿಯಿರಿ!

 ಧ್ರುವ ರಾಠೆ
ನಗರದ ನಕ್ಸಲರು ಎನ್ನುವುದು ಹೊಸ "ಆ್ಯಂಟಿ ನ್ಯಾಷನಲ್‌'. ಆ್ಯಂಟಿ ನ್ಯಾಷನಲ್‌ ಎನ್ನುವ ಪದ ಅತಿದೊಡ್ಡ ಜೋಕ್‌ ಆಗಿದ್ದು, ಈ ಸಚಿವರು ಮತ್ತು ಟ್ರಾಲ್‌ಗ‌ಳು ಬೇಕಾಬಿಟ್ಟಿ ಯಾರ ಮೇಲೆ ಬೇಕಾದರೂ ಪ್ರಯೋಗಿಸಲಾರಂಭಿಸಿದಾಗ ತನ್ನ ನಿಜ ಅರ್ಥವನ್ನು ಕಳೆದುಕೊಂಡಿತು. ಅರ್ಬನ್‌ ನಕ್ಸಲ್‌/ ನಗರದ ನಕ್ಸಲರು ಎನ್ನುವ ಪದವೂ ತನ್ನ ಅರ್ಥ ಕಳೆದುಕೊಳ್ಳಲಿದೆ. 

ಶಿವಂ ವಿಜ್‌
ನಗರದ ನಕ್ಸಲರು ಎನ್ನುವ ನಾನ್‌ಸೆನ್ಸ್‌, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ತಂತ್ರವಷ್ಟೆ. ಮೋದಿ ಸರ್ಕಾರ ತನ್ನ ವೈಫ‌ಲ್ಯಗಳಿಂದ ಮತ್ತು ಭೀಮ ಕೋರೇಗಾಂವ್‌ ಬಿಕ್ಕಟ್ಟಿನಿಂದ  ಜನರ ಗಮನವನ್ನು ಬೇರೆಡೆ ಸೆಳೆಯಲು ಅನುಸರಿಸುತ್ತಿರುವ ತಂತ್ರಗಾರಿಕೆಯಿದು. 

 ಪ್ರಶಾಂತ್‌ ವಿಶ್ವನಾಥನ್‌ 
ಮಾಧ್ಯಮಗಳು ಗೊನ್ಸಾಲ್ವೇಸ್‌, ಫೆರೇìರಾ, ವರವರ ರಾವ್‌ ಸೇರಿದಂತೆ ಇತರರ ಬಂಧನದ ಬಗ್ಗೆ ಏಕೆ ಇಷ್ಟು ಆಕ್ರೋಶ ತೋರಿಸುತ್ತಿವೆ? ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೂ ಇವರನ್ನೆಲ್ಲ ಬಂಧಿಸಲಾಗಿತ್ತು ಎನ್ನುವುದನ್ನು ಮರೆತುಬಿಟ್ಟವೇ? 

 ಮಾನವ್‌ಹೂಂ
ಕವಿಗಳು ಮತ್ತು ಸಾಮಾಜಿಕ ಹೋರಾಟಗಾರರನ್ನು ಬಂಧಿಸಲಾಗುತ್ತಿದೆ ಎಂದು ಮಾಧ್ಯಮಗಳು, ಬುದ್ಧಿಜೀವಿಗಳು ಚಿಂತಾಕ್ರಾಂತರಾಗಿದ್ದಾರೆ. ಆದರೆ ಬಂಧನಕ್ಕೊಳಗಾಗಿರುವ ಈ ಸೋಕಾಲ್ಡ್‌ ಕವಿಗಳು ಮತ್ತು ಹೋರಾಟಗಾರರು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಅಂಶವನ್ನೇಕೆ ಮರೆಮಾಚುತ್ತಿದ್ದೀರಿ ಸ್ವಾಮಿ? 

 ಉನ್ನಿಸ್ಯಾಮ್‌
ಮೋದಿ ಸರ್ಕಾರವನ್ನು ವಿರೋಧಿಸುವ ಭರದಲ್ಲಿ ತಾವು ಯಾರನ್ನು ಸಮರ್ಥಿಸುತ್ತಿದ್ದೇವೆ ಎನ್ನುವ ಕಿಂಚಿತ್‌ ಪ್ರಜ್ಞೆಯಾದರೂ ಮಾಧ್ಯಮಗಳಿಗೆ ಇದೆಯೇ? 

 ತೂಜಾನೇನಾ
ಪ್ರಧಾನಿಯ ಹತ್ಯೆಗೆ ಸ್ಕೆಚ್‌ ರೂಪಿಸಲಾಗಿತ್ತು ಎನ್ನುವುದು ನಿಜಕ್ಕೂ ಗಂಭೀರವಾದ ವಿಷಯ. ನೀವು ಮೋದಿಯವರ ವಿರೋಧಿಯಾಗಿರಬಹುದು. ಆದರೆ ಅವರ ಸ್ಥಾನವನ್ನು ನೀವು ಗೌರವಿಸಲೇಬೇಕು. ಆ ಹುದ್ದೆಯಲ್ಲಿರುವವರ ಜೀವಕ್ಕೆ ಅಪಾಯವಿದೆ ಎನ್ನುವ ಎಚ್ಚರಿಕೆಯನ್ನು ಉಡಾಫೆ ಮಾಡುವುದು ಖಂಡಿತ ಸರಿಯಲ್ಲ.

 ಟ್ರೂಲೈಫ್
ತನಿಖಾ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತಿವೆ. ಮುಖ್ಯವಾಹಿನಿ ಮಾಧ್ಯಮಗಳ ಚರ್ಚೆಗಳು ಮತ್ತು ಪ್ರಗತಿಪರರೆನಿಸಿಕೊಂಡವರ ಆರೋಪಗಳು ತನಿಖೆಯ ಮೇಲೆ ಪರಿಣಾಮ ಬೀರದಿರಲಿ. 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews


Trending videos

Back to Top