CONNECT WITH US  

ಹೆಲಿ ಟೂರಿಸಂ ಮತ್ತೆ ಪ್ರಾರಂಭ

ಉಡುಪಿ: ಹೆಲಿಕಾಪ್ಟರ್‌ ಲಭ್ಯವಾಗದೆ ಸ್ಥಗಿತಗೊಂಡಿದ್ದ "ಹೆಲಿ ಟೂರಿಸಂ' ವ್ಯವಸ್ಥೆಯು ಮತ್ತೆ ಪ್ರಾರಂಭವಾಗಲಿದೆ. ಎ. 22ರಂದು ಹೆಲಿಕಾಪ್ಟರ್‌ ಆದಿ ಉಡುಪಿಯ ಮೈದಾನಕ್ಕೆ ಬಂದಿಳಿಯಲಿದೆ. ಎ. 23, 24ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12, ಅಪರಾಹ್ನ 3.30ರಿಂದ ಸಂಜೆ 5.30ರ ವರೆಗೆ ರೈಡ್‌ಗೆ ತೆರಳಲಿದೆ. ಬುಕ್ಕಿಂಗ್‌ ಇದ್ದ ಹಾಗೆ ಮುಂದಿನ ದಿನಾಂಕವನ್ನು ನಿಗದಿಪಡಿಸಿಕೊಳ್ಳಲಾಗುತ್ತದೆ.

ಹೆಲಿಕಾಪ್ಟರ್‌ ಪಯಣಕ್ಕೆ ಹೋಗುವವರು ಉಸ್ತುವಾರಿ ಸುದೇಶ್‌ ಶೆಟ್ಟಿ  ಅವರನ್ನು ಸಂಪರ್ಕಿಸಿ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಆದಿಉಡುಪಿ ಮೈದಾನದಲ್ಲಿ ಸಮಸ್ಯೆ ಎದುರಾದರೆ ಪರ್ಯಾಯವಾಗಿ ಮಣಿಪಾಲ ಮಣ್ಣಪಳ್ಳ ಕೆರೆಯ ಪಕ್ಕದ ಮೈದಾನದಲ್ಲಿ ಲ್ಯಾಂಡಿಂಗ್‌, ಟೇಕ್‌ಆಫ್ ಮಾಡಲು ಜಾಗ ಗುರುತಿಸಲಾಗಿದೆ ಎಂದು ಸುದೇಶ್‌ ತಿಳಿಸಿದ್ದಾರೆ.


Trending videos

Back to Top