CONNECT WITH US  

ಡಿಜಿಟಲೀಕರಣಕ್ಕೆ ಜನರ ಸಹಕಾರ ಅತ್ಯಗತ್ಯ: ಬಾಬು ವಿ. ಭಟ್‌

ಎಸ್‌ಬಿಐ ನಿರ್ಮಿತ ಬಸ್‌ ನಿಲ್ದಾಣವನ್ನು ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಉದ್ಘಾಟಿಸಿದರು.

ಬ್ರಹ್ಮಾವರ: ಕೇಂದ್ರ ಸರಕಾರದ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮಕ್ಕೆ ಪೂರಕವಾಗಿ ನಗದು ರಹಿತ ಸಮಾಜ ನಿರ್ಮಿಸುವ ಉದ್ದೇಶಧಿದೊಂದಿಗೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ದೇಶಾದ್ಯಂತ ವಿವಿಧ ಗ್ರಾಮಗಳನ್ನು ದತ್ತು ಪಡೆಯುತ್ತಿದ್ದು, ಎಲ್ಲ ನಾಗರಿಕರಿಗೂ ಬ್ಯಾಂಕ್‌ ಖಾತೆಯೊಂದಿಗೆ ಡಿಜಿಟಲ್‌ ಸೌಲಭ್ಯ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಈ ಯೋಜನೆಗೆ ಜನರ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದು ಎಸ್‌ಬಿಐ ಪ್ರಾದೇಶಿಕ ವ್ಯವಹಾರ ಕಚೇರಿ ಮುಖ್ಯ ಪ್ರಬಂಧಕ ಬಾಬು ವಿ. ಭಟ್‌ ಹೇಳಿದರು. ಅವರು ಚಾಂತಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಎಸ್‌ಬಿಐ ಪ್ರಾಯೋಜಿತ ಚಾಂತಾರು ಗ್ರಾಮ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಶ್ಲಾಘನೀಯ ಕಾರ್ಯ: ಎಸ್‌ಬಿಐ ಪ್ರಾಯೋಜಿತ ವಿವಿಧ ಕೊಡುಗೆ ಉದ್ಘಾಟಿಸಿದ ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ಎಸ್‌ಬಿಐ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ ಆಗಿದ್ದು, ಇದರ ಮೂಲಕ ಡಿಜಿಟಲೀಕರಣ ವ್ಯವಸ್ಥೆಗೆ ಅರ್ಥ ಬರುವಂತಹ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಚಾಂತಾರು ಗ್ರಾ.ಪಂ.ನ ಕೋರಿಕೆ ಮೇರೆಗೆ ಎಸ್‌ಬಿಐನಿಂದ ನಿರ್ಮಿಸಲ್ಪಟ್ಟ ಪ್ರಯಾಣಿಕ ತಂಗುದಾಣ, ಎಸ್‌ಬಿಐ ಬ್ರಹ್ಮಾವರ ಶಾಖೆಯಲ್ಲಿ ಉಚಿತ ವೈಫೈ ಸೌಲಭ್ಯ ಉದ್ಘಾಟಿಸಲಾಯಿತು. ಮತ್ತು ಬ್ಯಾಂಕ್‌ನ ವತಿಯಿಂದ ಇಬ್ಬರು ವರ್ತಕರಿಗೆ ಪ್ರಧಾನ ಮಂತ್ರಿಯವರ ಭೀಮ್‌ ಆ್ಯಪ್‌ನ ಬಳಕೆಗೆ ಮೊಬೈಲ್‌ ನೀಡಿ ತರಬೇತಿ ನೀಡಲಾಯಿತು.

ಎಸ್‌ಬಿಐನ ಪ್ರಾದೇಶಿಕ ವ್ಯವಹಾರ ಕಚೇರಿ ಮುಖ್ಯ ಪ್ರಬಂಧಕಿ ಲಕ್ಷ್ಮೀ ರಾಜೇಂದ್ರ, ಚಾಂತಾರು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ದಿನೇಶ್‌, ಗ್ರಾ.ಪಂ. ಸದಸ್ಯರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶ್ರುತಿ ಕಾಂಚನ್‌, ಸಿಬಂದಿ ವರ್ಗ, ಎಸ್‌ಬಿಐ ನಿವೃತ್ತ ಅಧಿಕಾರಿಗಳು, ಎಸ್‌ಬಿಐ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು, ಬ್ರಹ್ಮಾವರ ಶಾಖಾ ಸಿಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಬ್ರಹ್ಮಾವರ ಶಾಖಾ ಪ್ರಬಂಧಕಿ ಅಂಬಳಿ ಕೃಷ್ಣನ್‌ ಸ್ವಾಗತಿಸಿ, ವಂದಿಸಿದರು.

Trending videos

Back to Top