ವಿಶ್ವದ ಅತೀ ದೊಡ್ಡ ವಯೋಲಿನ್‌ ವಾದಕ ಕುಟುಂಬ

Team Udayavani, Jun 15, 2017, 2:49 PM IST

REPORT-7.jpg

ಮಂಗಳೂರು: ಈ ಎನ್‌ಆರ್‌ಐ ಕುಟುಂಬದ ಹನ್ನೊಂದು ಮಂದಿಯೂ ವಯೋಲಿನ್‌ ವಾದನದಲ್ಲಿ ಪಳಗಿದವರು. ಅಷ್ಟೇ ಅಲ್ಲ ಇದು ವಿಶ್ವದ ಅತೀ ದೊಡ್ಡ ವಯೋಲಿನ್‌ ವಾದಕ ಕುಟುಂಬವೂ ಹೌದು. ಅಷ್ಟಕ್ಕೂ ಇವರು ಮಂಗಳೂರು ಮೂಲದವರು ಎಂಬುದು ವಿಶೇಷ.

ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿ ರುವ ಮೂಲತಃ ಮಂಗಳೂರಿನ ಕುಲಶೇಖರದವರಾದ ಹೃದ್ರೋಗ ತಜ್ಞ ಡಾ| ಜೆರಾರ್ಡ್‌ ಅಬ್ರಿಯೊ ಅವರ ಕುಟುಂಬ ವಯೋಲಿನ್‌ ವಾದನದಲ್ಲಿ ತೊಡಗಿಸಿಕೊಂಡವರು. ಜೆರಾಲ್ಡ್‌ ಅವರ ಪತ್ನಿ ನಿಕೋಲ್‌ ವಯೋಲಿನ್‌ ವಾದಕಿಯಾಗಿದ್ದರೆ, ಒಂಬತ್ತು ಮಕ್ಕಳು ಕೂಡ ವಯೋಲಿನ್‌ ವಾದನ ಕಲಿತು ನುಡಿಸುತ್ತಿದ್ದಾರೆ. ಮಂಗಳೂರಿನ ಸಿಟಿ ಸೆಂಟರ್‌ ಮಾಲ್‌ನ ಹಾಮ್ಸ್‌ ಮಾರ್ಟ್‌ ಮಳಿಗೆಯಲ್ಲಿ ಬುಧವಾರ ಈ ಮಕ್ಕಳು ವಯೋಲಿನ್‌ ನುಡಿಸಿದರು.

ಪಾಶ್ಚಾತ್ಯ ಶಾಸ್ತ್ರೀಯ ಶೈಲಿಗನುಗುಣ ವಾಗಿ ಮಕ್ಕಳು ವಯೋಲಿನ್‌ ತಂತಿಗಳ ಮೂಲಕ ಸಂಗೀತ ನುಡಿಸಿದರು. ಅಬ್ರಿಯೋ ಅವರ ಪ್ರಥಮ ಪುತ್ರ, 18ರ ಹರೆಯದ ಮೈಕಲ್‌, 17ರ ಹರೆಯದ ಡೇನಿಯಲ್‌, 15ರ ಹರೆಯದ ಕ್ರಿಸ್ತೀನಾ, 13ರ ಹರೆಯದ ಮರಿಯಾ, 11ರ ಹರೆಯದ ಜೇನ್‌, 9ರ ಹರೆಯದ ರಾಚೆಲ್‌, ಏಳರ ಹರೆಯದ ಜಾನ್‌, 5ರ ಹರೆಯದ ಲೂಕ್‌ ವಾಯ್ಲಿನ್‌ ಬಾರಿಸುತ್ತಾರೆ. ಇನ್ನು 3ರ ಹರೆಯದ ಜೋಸೆಫ್‌ ಕೂಡ ಇದೇ ಹಾದಿಯಲ್ಲಿ ಮುಂದುವರಿಯುತ್ತಿದ್ದು, ಕಳೆದ ಮೂರು ತಿಂಗಳಿನಿಂದ ವಯೋಲಿನ್‌ ಕಲಿಕೆ ಆರಂಭಿಸಿದ್ದಾರೆ.

ತಾಯಿಯೇ ಸಂಗೀತ ಗುರು!
ಮಕ್ಕಳಿಗೆ ತಾಯಿ ನಿಕೋಲ್‌ ಅವರೇ ಸಂಗೀತ ಗುರು. ಮೂರು ವರ್ಷ ತುಂಬುತ್ತಲೇ ಮಕ್ಕಳಿಗೆ ನಿಕೋಲ್‌ ವಯೋಲಿನ್‌ ಬಾರಿಸುವ ತರಬೇತಿ ಆರಂಭಿಸಿದ್ದಾರೆ. ಏಳನೇ ತರಗತಿಯ ಬಳಿಕ ಸಂಗೀತ ತರಗತಿಯ ಮೂಲಕ ತರಬೇತಿ ಕೊಡಿಸಲಾಗುತ್ತದೆ. ಮಕ್ಕಳು ಪಿಯಾನೊ ಕೂಡ ಬಾರಿಸುತ್ತಾರೆ ಎನ್ನುತ್ತಾರೆ ಡಾ| ಜೆರಾರ್ಡ್‌. ನಿಕೋಲ್‌ ಅಬ್ರಿಯೋ ಅವರ ಸಂಬಂಧಿ ಫ್ರಾಕ್‌ ಲೋಬೋ ಅವರು ಕಳೆದ 60 ವರ್ಷಗಳಿಂದ ವಯೋಲಿನ್‌ವಾದಕರಾಗಿ ಖ್ಯಾತರಾಗಿದ್ದಾರೆ. ಆರಂಭದಲ್ಲಿ ಅವರಿಂದಲೇ ನಿಕೋಲ್‌ ವಯೋಲಿನ್‌ ವಾದನ ಕಲಿತಿದ್ದರಲ್ಲದೇ, ನಿಕೋಲ್‌ ಅವರ ತಂದೆ ಜೆರಾಲ್ಡ್‌ ಲೋಬೋ ಸಂಗೀತಗಾರರಾಗಿದ್ದರಿಂದ ಕಲಿಕೆ ಸುಲಭವಾಯಿತು ಎನ್ನುತ್ತಾರೆ.

ಇಂದು ಬಜ್ಜೋಡಿ ವೃದ್ಧಾಶ್ರಮದಲ್ಲಿ ಸಂಗೀತ
ಡಾ| ಜೆರಾರ್ಡ್‌ ಅವರ ಕುಟುಂಬಿಕರು ಮಂಗಳೂರಿನಲ್ಲೇ ನೆಲೆಸಿರುವು ದರಿಂದ ಎರಡು ವರ್ಷಗಳಿಗೊಮ್ಮೆ ಪತ್ನಿ ಹಾಗೂ ಮಕ್ಕಳೊಂದಿಗೆ ಮಂಗಳೂರಿಗೆ ಆಗಮಿಸುತ್ತಾರೆ. ಹೀಗೆ ಬರುವಾಗ ನಗರದ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಭೇಟಿ ನೀಡಿ ಸಂಗೀತ ಕಛೇರಿ ಏರ್ಪಡಿಸುತ್ತಾರೆ.
ಡಾ| ಜೆರಾರ್ಡ್‌ ಅಬ್ರಿಯೊ ಅವರ ಮಕ್ಕಳಿಂದ ನಂತೂರು ಸಮೀಪದ ಬಜೊjàಡಿಯ ಲಿಟಲ್‌ ಸಿಸ್ಟರ್ಸ್‌ ಆಫ್ ದಿ ಪುವರ್‌- ವೃದ್ಧಾಶ್ರಮದಲ್ಲಿ ಜೂ. 15ರಂದು ಸಂಜೆ 3.30ಕ್ಕೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಟಾಪ್ ನ್ಯೂಸ್

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.