ಕಾರ್ಕಳ ಪುರಸಭೆ ಸಾಮಾನ್ಯ ಸಭೆ: ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯ

Team Udayavani, Jun 30, 2017, 3:45 AM IST

2906KAR1.jpg

ಕಾರ್ಕಳ: ಪುರಸಭೆಯ ಸಾಮಾನ್ಯ ಸಭೆ ಗುರುವಾರ ಜರಗಿತು. ಪುರಸಭೆಯಲ್ಲಿ  ಕಳೆದ ವಾರ ಪುರಸಭೆಯ ಅನುಮತಿ ಇಲ್ಲದೇ ರಾತ್ರಿ ವರೆಗೂ ಧರಣಿ ಕೂತ ಸದಸ್ಯರ ವಿರುದ್ದ ಕ್ರಮ ಕೈಗೊಳ್ಳಬೇಕು. ನಗರ ಬಸ್‌ ನಿಲ್ದಾಣದ ರಿಕ್ಷಾಗಳನ್ನು ನಿಲುಗಡೆಗೊಳಿಸಲು ಶಾಶ್ವತವಾದ ನಿಲ್ದಾಣದ ವ್ಯವಸ್ಥೆಯಾಗಬೇಕು ಎಂದು ಸದಸ್ಯರು ಆಗ್ರಹಿಸಿದರು. ಇಡೀ ಸಭೆಯಲ್ಲಿ ಧರಣಿ ಕೂತ ಸದಸ್ಯರ ವಿರುದ್ದ ಕ್ರಮ ಜರಗಿಸಲು ಸದಸ್ಯರು ಪಟ್ಟುಹಿಡಿದರು.ಉಳಿದಂತೆ ಅಂತಹ ಮಹತ್ವದ ವಿಚಾರಗಳು ಸಭೆಯಲ್ಲಿ ಪ್ರಸ್ತಾವವಾಗಲಿಲ್ಲ.

ಅನುಮತಿ ಕೊಟ್ಟವರ್ಯಾರು?
ಸದಸ್ಯ ಸುಭೀತ್‌ ಕುಮಾರ್‌ ಮಾತನಾಡಿ, ಪುರಸಭೆಯ ಅನುಮತಿ ಇಲ್ಲದೆಯೇ ಪುರಸಭಾ ಕಚೇರಿಯಲ್ಲಿಯೇ ರಾತ್ರಿ ಧರಣಿ ಕೂತ ಸದಸ್ಯರಿಗೆ ಧರಣಿ ಕೂರಲು ಅನುಮತಿ ಕೊಟ್ಟವರ್ಯಾರು? ಕಾನೂನಿನಲ್ಲಿ ಸರಕಾರಿ ಕಚೇರಿಯಲ್ಲಿ ಈ ರೀತಿ ಮಾಡಲು ಅವಕಾಶವಿದೆಯೇ?ಎಂದು ಪ್ರಶ್ನಿಸಿದರು.

ಇದು ಗಂಭೀರ ವಿಷಯ
ಸದಸ್ಯ ಶುಭದ್‌ ರಾವ್‌ ಮಾತನಾಡಿ, ಹೀಗೆ ರಾತ್ರಿ ಕೆಲ ಸದಸ್ಯರು ಪುರಸಭೆಗೆ ನುಗ್ಗುವುದರಿಂದಲೇ ಇಲ್ಲಿ ಕೆಲವು ಕಡತಗಳು ಕಾಣೆಯಾಗುತ್ತಿವೆ. ಇದು ಗಂಭೀರ ವಿಷಯ. ರಾತ್ರಿ ಸರಕಾರಿ ಕಚೇರಿಯಲ್ಲಿ ಧರಣಿ ಕೂತು ಕಾನೂನು ಉಲ್ಲಂಘಿಸಿದ ಸದಸ್ಯರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
 
ನಮಗೂ ಕಾಳಜಿ ಇದೆ
ಸದಸ್ಯ ನವೀನ್‌ ದೇವಾಡಿಗ ಮಾತನಾಡಿ, ರಿಕ್ಷಾ ಚಾಲಕರನ್ನು ಕೆಲ ಸದಸ್ಯರು ನಮ್ಮ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ನಮಗೂ ರಿಕ್ಷಾ ನಿಲ್ದಾಣ ಆಗಬೇಕು ಎನ್ನುವ ಕುರಿತು ಕಾಳಜಿ ಇದೆ ಎಂದರು.

ಪತ್ರ ಕಾಣೆ
ಸದಸ್ಯ ಪ್ರಕಾಶ್‌ ರಾವ್‌ ಮಾತನಾಡಿ, ರಿಕ್ಷಾ ನಿಲ್ದಾಣದ ಕುರಿತು ತಹಶೀಲ್ದಾರ್‌ ನೀಡಿದ ಪತ್ರವೊಂದು ಪುರಸಭೆಯಲ್ಲಿ ಕಾಣೆಯಾಗಿದೆ ಇದು ಗಂಭೀರ ವಿಚಾರ ಇದನ್ನು ವಿರೋಧಿಸಿ ಧರಣಿ ಕುಳಿತಿದ್ದ ತನ್ನ ವಿರುದ್ದ ಕ್ರಮ ಕೈಗೊಳ್ಳಬಹುದು ಎಂದರು. 

ಆಕ್ರೋಶ
ವಿಪಕ್ಷದ ಸದಸ್ಯರು ಧರಣಿ ಕೂತು ಕಾನೂನು ಉಲ್ಲಂಘಿಸಿದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದನದ ಬಾವಿಗಿಳಿದು ಇದೇ ಸಂದರ್ಭದಲ್ಲಿ  ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿಯವರು ಇದಕ್ಕೆ ಒಪ್ಪಿಗೆ ಸೂಚಿಸಿದರು.

ಆಗ್ರಹ
ಸದಸ್ಯ ಶುಭದ್‌ರಾವ್‌ ಮಾತನಾಡಿ, ನಗರದಲ್ಲಿ  ರಿಕ್ಷಾ ನಿಲ್ದಾಣ ಮಾಡಬೇಕು ಎನ್ನುವ ಕುರಿತು ನಮ್ಮ ಯಾವುದೇ ವಿರೋಧವಿಲ್ಲ. ರಿಕ್ಷಾ  ಸಂಘಟನೆಗಳಿಗೆ ಯಾವತ್ತೂ ನಮ್ಮ ಬೆಂಬಲವಿದೆ. ಈಗಲೂ ಅಷ್ಟೇ ಅವರನ್ನು ಬೆಂಬಲಿಸುತ್ತೇವೆ. ಆ. 15ರ ಒಳಗೆ ಪುರಸಭೆ ವತಿಯಿಂದ ರಿಕ್ಷಾ  ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರೂ ಕೂಡ ಇದನ್ನು ಬೆಂಬಲಿಸಿದರು.ಉಪಸ್ಥಿತಿ ಅಧ್ಯಕ್ಷೆ ಅನಿತಾ ಅಂಚನ್‌, ಉಪಾಧ್ಯಕ್ಷ ಗಿರಿಧರ್‌ ನಾಯಕ್‌, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಷಯ್‌ ರಾವ್‌, ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ ಉಪಸ್ಥಿತರಿದ್ದರು.

ಎಂ.ಬಿ. ಪುಸ್ತಕ, ಸಲಕರಣೆ ಕಾಣೆ
ಪುರಸಭೆಯಲ್ಲಿ  ಎಂ.ಬಿ ಪುಸ್ತಕ ಕಾಣೆಯಾಗಿದೆ. ಎಲ್ಲಾ ದಾಖಲೆಗಳಿರುವ ಎಂ.ಬಿ.ಪುಸ್ತಕವೇ ಇಲ್ಲಿ ಕಾಣೆಯಾಗುತ್ತದೆ ಎಂದರೆ ಪುರಸಭೆ ಅದೆಷ್ಟು ನಿಯತ್ತಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಗೊತ್ತಾಗುತ್ತದೆ.ಇಷ್ಟೊಂದು ಬೇಜವಾಬ್ದಾರಿ ಪುರಸಭೆಯನ್ನು ಇದುವರೆಗೆ ನೋಡಿಲ್ಲ ಎಂದು ಸದಸ್ಯ ಅಶ³ಕ್‌ ಅಹಮ್ಮದ್‌ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ಮಸ್ತಕಾಭಿಷೇಕದ ಸಂದರ್ಭದಲ್ಲಿ ಖರೀದಿಸಿದ  ಸಲಕರಣೆಗಳನ್ನು ಪುರಸಭೆಗೆ ತಂದು ಹಾಕಿದ್ದೇವೆ.ಆದರೆ ಇಂದು ಅವೆಲ್ಲಾ  ಕಾಣೆಯಾಗಿವೆ ಅವು ಎಲ್ಲಿ ಹೋಗಿವೆ ಎನ್ನುವ ಮಾಹಿತಿ ಬೇಕಿದೆ ಎಂದು ಹೇಳಿದರು.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.