CONNECT WITH US  

ಕಣ್ಣಿನ ಸೇವೆ ಜಗತ್ತಿನ ಸೇವೆ: ಪುತ್ತಿಗೆ ಶ್ರೀ

ಸಮಾರಂಭವನ್ನು ಪುತ್ತಿಗೆ ಶ್ರೀಗಳು ಉದ್ಘಾಟಿಸಿದರು.

ಉಡುಪಿ: ಮನುಷ್ಯನಿಗೆ ಕಣ್ಣೇ ಜಗತ್ತು. ಕಣ್ಣಿನ ಸೇವೆ ಮಾಡಿದರೆ ಜಗತ್ತಿನ ಸೇವೆ ಮಾಡಿದಂತೆ. ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಯನ್ನು ಕೊಡುವುದು ಸಂಸ್ಥೆಯ ಜವಾಬ್ದಾರಿ. ಆ ನಿಟ್ಟಿನಲ್ಲಿ ಪ್ರಸಾದ್‌ ನೇತ್ರಾಲಯದ ಕಾರ್ಯ ಶ್ಲಾಘನೀಯ ಎಂದು ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಅವರು ಬುಧವಾರ ಅಂಬಲಪಾಡಿ ರಾ.ಹೆ. 66ರ ಬಳಿಯ ಉಡುಪಿ ಪ್ರಸಾದ್‌ ನೇತ್ರಾಲಯ ಮತ್ತು ನೇತ್ರ ಚಾರಿಟೆಬಲ್‌ ಟ್ರಸ್ಟ್‌ನ ಸಹ ಸಂಸ್ಥೆಯಾದ "ನೇತ್ರ ಜ್ಯೋತಿ ಕಾಲೇಜ್‌ ಆಫ್‌ ಓಪ್ರೊಮೆಟ್ರಿ ಮತ್ತು ಪ್ಯಾರಾ ಮೆಡಿಕಲ್‌ ಸೈನ್ಸ್‌'ನ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಕಣ್ಣು ಮನಸ್ಸಿನ ಮೀಟರ್‌
ಕಣ್ಣು ಸತ್ಯವನ್ನು ಹೇಳುವ ಅಂಗ. ಮನುಷ್ಯನ ಮನಃಸ್ಥಿತಿಯನ್ನು ಕಣ್ಣಿನ ಮೂಲಕವೇ ಅರ್ಥೈಸಿಕೊಳ್ಳ ಬಹುದು. ಕಣ್ಣು ಮನಸ್ಸಿನ ಮೀಟರ್‌ ಇದ್ದಂತೆ. ಮನುಷ್ಯನ ಮನಸ್ಸಿನ ಪ್ರತಿನಿಧಿಯಾಗಿ ಕೆಲಸ ಮಾಡುತ್ತದೆ. ಅಂಥ ಕಣ್ಣಿನ ಸೇವೆ ಮಾಡುವುದು ಅತ್ಯಂತ ಮಹತ್ತರವಾದ ಕಾರ್ಯ ಎಂದರು.

ಜನಜಾಗೃತಿ ಅಗತ್ಯ
ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ನಾವು ಶ್ರೀಲಂಕಾದಿಂದ ಕಣ್ಣುಗಳನ್ನು ಪಡೆಯುತ್ತಿದ್ದೇವೆ. ದೇಶದಲ್ಲಿ ವರ್ಷಕ್ಕೆ 5 ಲಕ್ಷ ಅಪಘಾತಗಳಾಗುತ್ತಿದ್ದು, ಅದರಲ್ಲಿ ಸುಮಾರು 1.25 ಲಕ್ಷ ಜನ ಸಾವಿ ಗೀಡಾಗುತ್ತಾರೆ. ಅವರು ನೇತ್ರದಾನ ಮಾಡುವ ಬಗ್ಗೆ ಯೋಚಿಸಿದರೆ ಅಂಧತ್ವ ನಿವಾರಣೆ ಸಾಧ್ಯ. ಕಣ್ಣು ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದು ಆಪ್ಟಮೆಟ್ರಿ ಕಾಲೇಜು ಉದ್ಘಾಟಿಸಿದ ರಾಜ್ಯಸಭೆ ಸಂಸದ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು.

ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಪ್ಯಾರಾ ಮೆಡಿಕಲ್‌ ಸೈನ್ಸ್‌ ಕಾಲೇಜನ್ನು ಉದ್ಘಾಟಿಸಿದರು. ಬ್ಲೋಸಂ ಫೆರ್ನಾಂಡಿಸ್‌, ರಾಜ್ಯ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್‌, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ರಾಜೀವ್‌ ಗಾಂಧಿ ಆರೋಗ್ಯ ವಿ.ವಿ. ಸೆನೆಟ್‌ ಸದಸ್ಯ ಯು.ಟಿ. ಇಫ್ತಿಕರ್‌, ರೋಟರಿ ಜಿಲ್ಲಾ ಗವರ್ನರ್‌ ಅಭಿನಂದನ್‌ ಶೆಟ್ಟಿ, ಕಿದಿಯೂರು ಗ್ರಾ.ಪಂ. ಉಪಾಧ್ಯಕ್ಷೆ ಉಷಾ, ಕಟ್ಟಡ ಮಾಲಕ ಮಹಮ್ಮದ್‌ ಫಝಲುಲ್ಲಾ ಖಾಸಿ, ನಿರ್ದೇಶಕ ರಘುರಾಮ್‌ ರಾವ್‌ ಉಪಸ್ಥಿತರಿದ್ದರು. ಬಾಲಕೃಷ್ಣ ಮುಧ್ದೋಡಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ವಂದಿಸಿದರು.

ಗುಣಮಟ್ಟಕ್ಕೆ ಆದ್ಯತೆ : ಪ್ರಮೋದ್‌
ಲಾಭದ ದೃಷ್ಟಿಯನ್ನು ನೋಡುವುದಕ್ಕಿಂತಲೂ ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಕೆಲವೇ ಆಸ್ಪತ್ರೆಗಳಲ್ಲಿ ಪ್ರಸಾದ್‌ ನೇತ್ರಾಲಯವೂ ಒಂದು. ಉಡುಪಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುವುದರ ಜತೆಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಆ ಮೂಲಕ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. ಶಿಕ್ಷಣ ಸಮಾಜದ ಶಾಶ್ವತ ಆಸ್ತಿ. ಗುಣಮಟ್ಟದ ಶಿಕ್ಷಣ ಸಿಗದೆ ಹೋದರೆ, ಮುಂದಿನ ದಿನಗಳಲ್ಲಿ ಸಮಾಜದ ಸವಾಲು ಎದುರಿಸಲು ಸಾಧ್ಯವಿಲ್ಲ. ಹಾಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ನಮ್ಮ ಸಂಸ್ಥೆಯಿಂದ 3.70 ಲಕ್ಷ ಉಚಿತ ಕನ್ನಡಕ ವಿತರಿಸಲಾಗಿದೆ. 24,000 ಉಚಿತ ನೇತ್ರ ಚಿಕಿತ್ಸೆ ನಡೆದಿದೆ. 1 ಲಕ್ಷಕ್ಕೂ ಅಧಿಕ ನೇತ್ರದಾನ ನಡೆದಿದೆ. ಪ್ರತಿ ವರ್ಷ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತಿದ್ದೇವೆ.
ಡಾ| ಕೃಷ್ಣಪ್ರಸಾದ್‌ ಪ್ರಸಾದ್‌ ನೇತ್ರಾಲಯದ ವೈದ್ಯಕೀಯ ನಿರ್ದೇಶ

Trending videos

Back to Top