ಕಾರ್ಕಳ:ಕಾಬೆಟ್ಟು,ಬಂಗ್ಲೆಗುಡ್ಡೆಯಲ್ಲಿ ನೀರಿಲ್ಲ


Team Udayavani, Apr 2, 2018, 7:00 AM IST

karkala-Water-problems.jpg

ಕಾರ್ಕಳ: ಏರುತ್ತಿರುವ ಬಿಸಿಲು ಪುರಸಭೆ ವ್ಯಾಪ್ತಿಯ ಎರಡು ವಾರ್ಡ್‌ಗಳಲ್ಲಿ ನೀರಿನ ಅಭಾವ ಸೃಷ್ಟಿಸಿದೆ.ಇನ್ನು ಕೆಲವೆಡೆ ನೀರಿನ ಸಂಪರ್ಕ ಸರಿ ಇಲ್ಲದೇ ಸಮಸ್ಯೆಯಾಗಿದೆ. ಕಾಬೆಟ್ಟು ವಾರ್ಡ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನೀರಿನ ಕೊರತೆ ಬಿಸಿ ಮುಟ್ಟಿದೆ.ಬಂಗ್ಲೆಗುಡ್ಡೆ ವಾರ್ಡ್‌ನಲ್ಲಿ ಕಳೆದ ಐದಾರು ದಿನಗಳಿಂದ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು,ಕೆಲ ತಾಂತ್ರಿಕ ಸಮಸ್ಯೆಗಳನ್ನೂ ಈ ವಾರ್ಡ್‌ ಎದುರಿಸುತ್ತಿದೆ. 
 
ವಿದ್ಯುತ್‌ ಸಂಪರ್ಕವಿಲ್ಲ
ಕಾಬೆಟ್ಟು ವಾರ್ಡ್‌ನಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ಬಾವಿ ನಿರ್ಮಾಣವಾಗಿದೆ. ಪೈಪ್‌ಲೈನ್‌ ಕೂಡ ಮಾಡಲಾಗಿದ್ದು, ಆದರೆ ಅದಕ್ಕೆ ವಿದ್ಯುತ್‌ ಸಂಪರ್ಕವಿಲ್ಲ. ಈ ಬಾವಿಯಿಂದ ನೀರು ತೆಗೆದರೆ ಸಮಸ್ಯೆ ಸ್ವಲ್ಪ ಕಡಿಮೆಯಾಗಲಿದೆ.ಹತ್ತಿರದಲ್ಲಿ ಬೋರ್‌ವೆಲ್‌ ಇದ್ದರೂ ಅದರ ನೀರು ಸಾಲುತ್ತಿಲ್ಲ.ರೋಟರಿ ಕಾಲನಿ,ಭಾರತ್‌ ಬೀಡಿ ಕಾಲನಿ,ಕಾಬೆಟ್ಟು ಕುಚೇಲಪಾದೆ, ಪ್ರಶಾಂತ್‌ ನಗರ ಮೊದಲಾದ ಕಡೆ ನೀರಿನ ಆವಶ್ಯಕತೆ ಇದೆ.

ನಿತ್ಯ 3 ಎಂಎಲ್‌ಡಿ ನೀರು ಅಗತ್ಯ
ಪುರಸಭೆಯ ವ್ಯಾಪ್ತಿಗೆ ಮುಂಡ್ಲಿ ಜಲಾಶಯದಿಂದ ನೀರು ಒದಗಿಸಲಾಗುತ್ತದೆ.ಮುಂಡ್ಲಿಯಲ್ಲಿ ಇನ್ನೂ ಒಂದು ತಿಂಗಳ ಕಾಲ ನೀರು ಸಿಗಬಹುದು ಎನ್ನುವ ಲೆಕ್ಕಾಚಾರವಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಸದ್ಯ ಒಂದೂವರೆ ಮೀಟರ್‌ನಷ್ಟು ನೀರಿದೆ.ಅಲ್ಲಿನ ನೀರು ಕಡಿಮೆಯಾದರೆ ಸ್ವರಾಜ್ಯ ಮೈದಾನದ ಸಮೀಪವಿರುವ ರಾಮಸಮುದ್ರದಿಂದ ನೀರು ತೆಗೆಯಲಾಗುತ್ತದೆ. ಉಳಿದಂತೆ ಪುರಸಭೆಯ ವ್ಯಾಪ್ತಿಯಲ್ಲಿ 10 ಬೋರ್‌ವೆಲ್‌ಗ‌ಳು ಹಾಗೂ 8 ಬಾವಿಗಳಿವೆ. 8,127 ಮನೆಗಳಲ್ಲಿ 4,426 ಮನೆಗಳಿಗೆ ಪುರಸಭೆಯ ನೀರಿನ ಸಂಪರ್ಕವಿದೆ. ಪುರಸಭೆ ವ್ಯಾಪ್ತಿಯಲ್ಲಿ ಪ್ರತಿ ದಿನ 3 ಎಂಎಲ್‌ಡಿ ನೀರಿನ ಅಗತ್ಯವಿದೆ. 

ಪುರಸಭೆ ಎಚ್ಚೆತ್ತುಕೊಳ್ಳಲಿ
ಎರಡು ದಿನಗಳಿಗೊಮ್ಮೆ ನೀರು ಬರುತ್ತದೆ.ಆ ನೀರು ದಿನಬಳಕೆಗೆ ಸಾಕಾಗುವುದಿಲ್ಲ.ಕಳೆದ ಬಾರಿ ನಾವೇ ಹಣ ಖರ್ಚು ಮಾಡಿ ಟ್ಯಾಂಕರ್‌ ನೀರು ತರಿಸಿದ್ದೆವು.ಎಪ್ರಿಲ್‌, ಮೇ ತಿಂಗಳಲ್ಲಿ ನೀರಿನ ಅಭಾವ ತೀವ್ರವಾಗಿರುತ್ತದೆ. ಹೀಗಾಗಿ ಮುಂದಿನ ಎರಡು ತಿಂಗಳಲ್ಲಿ ಎದುರಾಗುವ ಸಮಸ್ಯೆ ಬಗೆಹರಿಸಲು ಪುರಸಭೆ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.

– ಪ್ರವೀಣ್‌ ಕುಮಾರ್‌,ಕಾಬೆಟ್ಟು ನಿವಾಸಿ

ದೊಡ್ಡ ಸಮಸ್ಯೆ ಇಲ್ಲ
ಪುರಸಭೆ ವ್ಯಾಪ್ತಿಗೆ ಸದ್ಯಕ್ಕೆ ದೊಡ್ಡಮಟ್ಟದಲ್ಲಿ ನೀರಿನ ಸಮಸ್ಯೆ ಇಲ್ಲ. ಮುಂಡ್ಲಿಯಲ್ಲಿ ನೀರು ಕಡಿಮೆಯಾದರೆ ರಾಮಸಮುದ್ರದಿಂದ ಪೂರೈಕೆ ಮಾಡಲಾಗುತ್ತದೆ.ಬಾವಿ, ಬೋರ್‌ವೆಲ್‌ಗ‌ಳಿವೆ. ಕೆಲವೊಂದು ಭಾಗಗಳಿಗೆ ಟ್ಯಾಂಕರ್‌ ಮೂಲಕವೂ ನೀರು ಪೂರೈಕೆ ಮಾಡಲಾಗಿದೆ.
– ಮೇಬಲ್‌ ಡಿಸೋಜಾ,ಪುರಸಭೆಯ ಮುಖ್ಯಾಧಿಕಾರಿ

– ಜಿವೇಂದ್ರ ಶೆಟ್ಟಿ

ಟಾಪ್ ನ್ಯೂಸ್

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.