ಬಜಗೋಳಿ ಪೇಟೆಯಲ್ಲಿ ರಾಶಿಬಿದ್ದಿದೆ ತ್ಯಾಜ್ಯ 

Team Udayavani, Jul 2, 2018, 6:00 AM IST

2906kar6a.jpg

ಕಾರ್ಕಳ: ಹರಿದ ಗೋಣಿ ಚೀಲಗಳು, ಪ್ಲಾಸ್ಟಿಕ್‌ ತೊಟ್ಟೆಗಳು, ಹುಡಿ ಯಾಗಿ ಬಿದ್ದಿರುವ ಗಾಜಿನ ಗ್ಲಾಸ್‌ಗಳು, ಬಿಯರ್‌ ಬಾಟಲ್‌ಗ‌ಳು, ರಟ್ಟು, ಪೇಪರ್‌ ತುಂಡುಗಳು, ಬೊಂಡದ ಚಿಪ್ಪುಗಳು, ತರಕಾರಿ ತ್ಯಾಜ್ಯಗಳು, ನೊಣಗಳು ಹಾರಾಡುತ್ತ, ನಾಯಿಗಳು ತಿನ್ನುತ್ತಿರುವ ಕೊಳೆತ ಆಹಾರ ಪದಾರ್ಥಗಳು  ಇಂತಹ ತ್ಯಾಜ್ಯ, ಕೊಳಕುಗಳ ದರ್ಶನವಾಗುತ್ತಿರುವುದು ತಾಲೂಕಿನ ಬಜಗೋಳಿ ಪೇಟೆಯಲ್ಲಿ…

ವಿಲೇವಾರಿ ಮಾಡಿದರೂ ಅಷ್ಟೇ !
ಇಲ್ಲಿ ಕಸ ವಿಲೇವಾರಿ ವಾಹನ ಪ್ರತಿ ದಿನ ಬರುತ್ತದೆ. ಅವರು ತುಂಬಿಸಿಟ್ಟ ತ್ಯಾಜ್ಯಗಳನ್ನು ಮಾತ್ರ ಸಾಗಿಸುತ್ತಾರೆ. ಅದರಲ್ಲೂ  ಕೆಲವು ಆಯ್ದ ಕಸವನ್ನು ಮಾತ್ರ ಕೊಂಡೊಯ್ಯುತ್ತಾರೆ ಎನ್ನುವ ಆರೋಪವಿದೆ. ಉಳಿದಂತೆ ಇಲ್ಲಿನ ಕಸ ವಿಲೇವಾರಿಯಾಗುವುದೇ ಇಲ್ಲ.  

ಸಾಂಕ್ರಾಮಿಕ ರೋಗದ ಭೀತಿ
ಸದ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಡೆಂಗ್ಯೂ, ಮಲೇರಿಯಾ ಬಾಧೆ ಹೆಚ್ಚಾಗುತ್ತಿದೆ. ಬಜಗೋಳಿಯಲ್ಲೂ  ಇದರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿದಂತಿಲ್ಲ. ಮಳೆಗಾಲಕ್ಕೂ ಮೊದಲೇ ಅಲ್ಲಿ ಬಿದ್ದಂತಹ ಕಸ ತ್ಯಾಜ್ಯಗಳು ಇನ್ನೂ ಹಾಗೆಯೇ ಇದ್ದು,  ಸೊಳ್ಳೆ ಉತ್ಪತ್ತಿ ಕೇಂದ್ರದಂತಿದೆ. ಪೇಟೆಯ ಆಸುಪಾಸಿನ ಜನತೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.

ಬಜಗೋಳಿ ಪೇಟೆಯಲ್ಲಿ ಒಳಚರಂಡಿ ವ್ಯವಸ್ಥೆ ಪ್ರಾರಂಭಿಸಿ ಐದಾರು ತಿಂಗಳುಗಳೇ ಕಳೆದು ಹೋಗಿದೆ. ಅದಿನ್ನೂ ನಿಧಾನವಾಗಿ ಸಾಗುತ್ತಿದ್ದು ಪ್ರಗತಿ ಕಂಡಿಲ್ಲ. ಹೀಗಾಗಿ ಒಳಚರಂಡಿ ವ್ಯವಸ್ಥೆಗೆಂದು ಅಗೆದು ಹಾಕಿರುವ ಮಣ್ಣಿನಿಂದಾಗಿ ಪೇಟೆ ಮತ್ತಷ್ಟು ಮಲೀನಗೊಳ್ಳುತ್ತಿದೆ ಎಂಬುದು ಸ್ಥಳೀಯರ ದೂರು.

ಎಲ್ಲರ ಜವಾಬ್ದಾರಿ
ಬಜಗೋಳಿ ಪೇಟೆಯಲ್ಲಿ ದಿನದಿಂದ ದಿನಕ್ಕೆ ಮಲೀನ ಹೆಚ್ಚಾಗುತ್ತಿದೆ. ಸ್ಥಳೀಯ ಪಂಚಾಯತ್‌ ಸ್ವಚ್ಛತೆಗೆ ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕು. ಪೇಟೆಯಲ್ಲಿ  ಸ್ವಚ್ಛತೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ.
– ಪ್ರವೀಣ್‌, ಸ್ಥಳೀಯ ನಿವಾಸಿ

ಇಡೀ ಪೇಟೆ ಸ್ವಚ್ಛವಾಗಲಿ  
ಅಂಗಡಿಗಳ ಮುಂಭಾಗದಲ್ಲಿದ್ದ ಕಸವನ್ನು ಮಾತ್ರ ವಿಲೇವಾರಿ ಮಾಡಿದರೆ ಸಾಕಾಗುವುದಿಲ್ಲ. ಸ್ವತ್ಛತೆ ಮಳೆ ಬರುವ ಮೊದಲೇ ಮಾಡಿದ್ದರೆ ಒಳ್ಳೇದಿತ್ತು. ನಂತರ ಕಸ ವಿಲೇವಾರಿ  ಸರಿಯಾಗಿ ಮಾಡಿದರೆ ಸ್ವಚ್ಛತೆ ಕಾಪಾಡಿಕೊಳ್ಳಬಹುದು. ಅಂಗಡಿಯ ಕಸ ಸಂಗ್ರಹಣೆಗೆ ತಿಂಗಳಿಗೆ 150 ರೂ. ಪಾವತಿಸುತ್ತೇವೆ.
– ಸ್ಥಳೀಯ ಅಂಗಡಿ ಮಾಲಕ

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.