CONNECT WITH US  

ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆ ಮಾನವನ ಸಂತಸಕ್ಕೆ ಪೂರಕವಾಗಲಿ

ನಿಟ್ಟೆ ವಿವಿ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಡಾ| ಕೆ. ಚಿದಾನಂದ ಗೌಡ

ಕಾರ್ಕಳ: ತಂತ್ರಜ್ಞಾನದ ಬೆಳ ವಣಿಗೆಯಲ್ಲಿ ಯಶಸ್ವೀ ಎಂಜಿನಿಯರ್‌ಗಳ ಪಾತ್ರ ಅಸ್ಮರಣೀಯವಾದುದು. 20ನೇ ಶತಮಾನದ ಹಲವಾರು ಆವಿಷ್ಕಾರಗಳು ಹಾಗೂ 21ನೇ ಶತಮಾನದ ತಾಂತ್ರಿಕ ಪ್ರವೃತ್ತಿಗಳು ತಂತ್ರಜ್ಞಾನದ ಬೆಳವಣಿಗೆಗೆ ಹಿಡಿದ ಕೈಗನ್ನಡಿಯಾಗಿವೆ. ಕ್ಷಿಪ್ರ ಬೆಳವಣಿಗೆ ಮಾನವನ ಸಂತಸಕ್ಕೆ ಪೂರಕವಾಗಿರಲಿ ಎಂದು ಕುವೆಂಪು ವಿವಿಯ ನಿವೃತ್ತ ಉಪಕುಲಪತಿ ಡಾ| ಕೆ.ಚಿದಾನಂದ ಗೌಡ ಹೇಳಿದರು.

ಜು. 7ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇ ಜಿನ  ಸದಾನಂದ ಸಭಾಂಗಣದಲ್ಲಿ ನಡೆದ 2017-18ನೇ ಶೈಕ್ಷಣಿಕ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ಮೌಲ್ಯಯುತವಾದ ತಾಂತ್ರಿಕ ಬೆಳ ವಣಿಗೆಯಿಂದ ರಾಜ್ಯ, ರಾಷ್ಟ್ರ ಮತ್ತು ವಿಶ್ವವನ್ನೇ ಪ್ರಗತಿಯ ಪಥದಲ್ಲಿ ನಡೆಸ ಬಹುದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ಮಾತನಾಡಿ, ಪದವಿ ಸ್ವೀಕಾರದ ನಿಜವಾದ ಸಾರ್ಥಕತೆಯು ತಮ್ಮ ಪ್ರಾಮಾಣಿಕ ಬದುಕಿನಲ್ಲಿ ಪ್ರತಿಬಿಂಬಿಸುತ್ತದೆ. ಪ್ರಾಮಾಣಿಕ ಪ್ರಯತ್ನವೇ ನಮ್ಮ ಯಶಸ್ಸಿಗೆ ಶಕ್ತಿ ಎನ್ನುವುದನ್ನು ಮರೆಯಬಾರದು. ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಇಂದಿನ ಯುವಕರಿಗಿದೆ ಎಂದರು.

ಬಿ.ಇ, ಎಂ.ಟೆಕ್‌ ಹಾಗೂ ಎಂ.ಸಿ.ಎ.ವಿದ್ಯಾರ್ಥಿಗಳಿಗೆ ಡಿಗ್ರಿ ಪ್ರದಾನ ಮಾಡಲಾಯಿತು. ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿಪದಕ ನೀಡಿ ಗೌರವಿಸಲಾಯಿತು.ಡಾ| ಪರಮೇಶ್ವರನ್‌, ಡಾ| ಸುಬ್ರಹ್ಮಣ್ಯ ಭಟ್‌, ಡಾ| ಐ.ಆರ್‌. ಮಿತ್ತಂತಾಯ ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್‌ ಎನ್‌. ಚಿಪ್ಳೂಣRರ್‌ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ| ಶ್ರೀನಿವಾಸ್‌ ರಾವ್‌ ಬಿ.ಆರ್‌. ವಂದಿಸಿದರು. ಶಶಾಂಕ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Trending videos

Back to Top