ಹೆಚ್ಚುತ್ತಿರುವ ಬಳಕೆದಾರರು: ಖಾಯಂ ಸಿಬಂದಿ ಕೊರತೆ


Team Udayavani, Jul 24, 2018, 9:28 AM IST

passport.jpg

*ಆನ್‌ಲೈನ್‌ ಮೂಲಕ ಅರ್ಜಿ * ಪಾಸ್‌ಪೋರ್ಟ್‌ಗೆ ಮಧ್ಯವರ್ತಿ ಅವಲಂಬಿಸಬೇಡಿ

ಬ್ರಹ್ಮಾವರ: ಇಲ್ಲಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಬಳಕೆ ದಾರರು ದಿನೇದಿನೆ ಹೆಚ್ಚುತ್ತಿದ್ದು, ಜಿಲ್ಲೆಯವ ರಲ್ಲದೇ ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪಾಸ್‌ಪೋರ್ಟ್‌ ಆಕಾಂಕ್ಷಿಗಳೂ ಆಗಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಖಾಯಂ ಸಿಬಂದಿ ಕೊರತೆ ಕಾಡತೊಡಗಿದೆ.

ಉಡುಪಿ ಜಿಲ್ಲೆಗೆ ಮಂಜೂರಾದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಐದು ತಿಂಗಳ ಹಿಂದೆ ಬ್ರಹ್ಮಾವರದಲ್ಲಿ ಆರಂಭವಾಗಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಮೂರೇ ದಿನಗಳಲ್ಲಿ ಸಂದರ್ಶನಕ್ಕೆ ಸಮಯ ನಿಗದಿಯಾಗುತ್ತಿದೆ. ದಿನಕ್ಕೆ 50 ಮಂದಿಗೆ ಟೋಕನ್‌ ನೀಡಲಾಗುತ್ತಿದ್ದು, ಎಲ್ಲರೂ ಸಂದರ್ಶನಕ್ಕೆ ಬರುತ್ತಿದ್ದಾರೆ. ವಾರದ ಆರು ದಿನವೂ ಟೋಕನ್‌ ಪಡೆದವರೆಲ್ಲ ಸಂದರ್ಶನಕ್ಕೆ ಬಂದರೆ ಕೇಂದ್ರ ಮೇಲ್ದರ್ಜೆ ಗೇರಲಿದೆ. ರಾಜ್ಯದ ಯಾವುದೇ ಜಿಲ್ಲೆಯವರು ಸಂದರ್ಶನಕ್ಕೆ ಈ ಕೇಂದ್ರವನ್ನು ಆರಿಸಬಹುದು. ಉಡುಪಿ ಜಿಲ್ಲೆಯವರೇ ಜಾಸ್ತಿ ಬಳಸುತ್ತಿದ್ದಾರೆ. ಅನಂತರದ ಸ್ಥಾನ ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯವರಿಗೆ.

3,995 ಮಂದಿ ಸಂದರ್ಶನ
ಜು. 23ರ ವರೆಗೆ 3,995 ಮಂದಿಯ ಸಂದರ್ಶನ ಪ್ರಕ್ರಿಯೆ ಪೂರ್ಣಗೊಂಡಿದೆ. 3,102 ದಾಖಲೆಗಳು ಬೆಂಗಳೂರು ಕೇಂದ್ರ ಕಚೇರಿಗೆ ರವಾನೆ ಯಾಗಿದ್ದು, ಸುಮಾರು 2,460 ಮಂದಿಗೆ ಪಾಸ್‌ಪೋರ್ಟ್‌ ಕೈ ಸೇರಿದೆ  ಎಂದು ಅಂದಾಜಿಸಲಾಗಿದೆ.  ಪಾಸ್‌ಪೋರ್ಟ್‌ಗೆ  ಆನ್‌ಲೈನ್‌ನಲ್ಲಿ 1,500 ರೂ. ಶುಲ್ಕ ಪಾವತಿಸಬೇಕು. ಆದರೆ ಮಧ್ಯವರ್ತಿಗಳು ಹೆಚ್ಚು ಹಣ ವಸೂಲು ಮಾಡುತ್ತಿರುವ ಆರೋಪವಿದೆ. ವಿದ್ಯಾವಂತರು, ಅಂತರ್ಜಾಲ ಬಳಕೆದಾರರೂ ಏಜೆನ್ಸಿಗಳ ಮೊರೆ ಹೋಗುತ್ತಿದ್ದಾರೆ ಎಂಬುದು ಕಂಡುಬಂದಿರುವ ಅಂಶ.

ಖಾಯಂ ಸಿಬಂದಿ ಅಗತ್ಯ
ಕೇಂದ್ರದಲ್ಲೀಗ ಓರ್ವ ಅಧಿಕಾರಿ, ಇಬ್ಬರು ಅಂಚೆ ಕಚೇರಿ ಸಿಬಂದಿ ಇದ್ದಾರೆ. ಈ ಇಬ್ಬರಲ್ಲಿ ಓರ್ವರನ್ನು ತುರ್ತು ಕಾರ್ಯ ನಿಮಿತ್ತ ಬೇರೆಡೆಗೆ ಕಳುಹಿಸಿದರೆ ಆ ದಿನ ಸಂದರ್ಶನ ವಿಳಂಬವಾಗುತ್ತದೆ. ಆದ್ದರಿಂದ ಮೂವರು ಸಿಬಂದಿ ಖಾಯಂ ಸೇವೆಗೆ ಒದಗಿಸಲು ಸಂಸದರು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ. ಇದರೊಂದಿಗೆ ಕೇಂದ್ರದ ಪರಿಸರದಲ್ಲಿ ವ್ಯವಸ್ಥಿತ ವಾಹನ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲೂ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯಾಡಳಿತ ಗಮನ ಹರಿಸಬೇಕಿದೆ.

ಕಾರ್ಯ ಚಟುವಟಿಕೆ
ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಮತ್ತು ಅಂಚೆ ಇಲಾಖೆ ಸಹಯೋಗದಲ್ಲಿ ಈ ಕೇಂದ್ರ ನಿತ್ಯವೂ ಬೆಳಗ್ಗೆ 9.30ರಿಂದ ಸಂಜೆ 6ರ ವರೆಗೆ ಕಾರ್ಯ ನಿರ್ವಹಿಸುತ್ತಿದೆ. ರವಿವಾರ ರಜೆ. 

ಪಾಸ್‌ಪೋರ್ಟ್‌ಗೆ ಅರ್ಜಿ:
ಹೀಗೆ ಮಾಡಿ
    ಪ್ರಾರಂಭದಲ್ಲಿ  www.passportindia.gov.in ವೆಬ್‌ಸೈಟ್‌ಗೆ ತೆರಳಿ ರೀಜನ್‌ ಬೆಂಗಳೂರು ಆಯ್ಕೆ ಮಾಡಬೇಕು. 
    ಅನಂತರ ನ್ಯೂ ಯೂಸರ್‌ ಲಾಗ್‌ ಇನ್‌ ಮಾಡಿ ಮೂಲ ಮಾಹಿತಿ ನೀಡಬೇಕು. 
    ಆಗ ಯೂಸರ್‌ ಐಡಿ ಹಾಗೂ ಪಾಸ್‌ವರ್ಡ್‌ ಲಭ್ಯ ವಾಗುತ್ತದೆ. ಬಳಿಕ ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಬೇಕು. 
    ಅನಂತರ ದೊರೆಯುವ ಆಯ್ಕೆಗಳಲ್ಲಿ ಉಡುಪಿ (ಬ್ರಹ್ಮಾವರ) ಕೇಂದ್ರವನ್ನು ಆರಿಸಬೇಕು. ಎಆರ್‌ಎನ್‌ ನಂಬರ್‌ ಹಾಗೂ ಸಂದರ್ಶನ ಸಮಯ ದೊರೆಯುತ್ತದೆ. 
    ಆಗ ದಾಖಲೆಗಳ ಜೆರಾಕ್ಸ್‌ ಹಾಗೂ ಮೂಲ ಪ್ರತಿಯೊಂದಿಗೆ ಬ್ರಹ್ಮಾವರಕ್ಕೆ ಹಾಜರಾಗಬೇಕು. 
    ಸಂಬಂಧಪಟ್ಟ ದಾಖಲೆಗಳನ್ನು ನೀಡಿದ ಬಳಿಕ ಪೊಲೀಸ್‌ ವೆರಿಫಿಕೇಶನ್‌ಗೆ ಕಳುಹಿಸಲಾಗುತ್ತದೆ. ಮಾಹಿತಿಗಳು ಸರಿಯಾಗಿದ್ದಲ್ಲಿ ತಿಂಗಳೊಳಗೆ ಪಾಸ್‌ಪೋರ್ಟ್‌ ದೊರೆಯುತ್ತದೆ.
ಬೇಕಾದ ದಾಖಲೆಗಳು
ಎಸ್‌ಎಸ್‌ಎಲ್‌ಸಿ ಅಥವಾ ಅನಂತರದ ಅಂಕಪಟ್ಟಿ, ವಿಳಾಸ ಹಾಗೂ ಜನನ ದಿನಾಂಕ ಸರಿಯಾಗಿ ಇರುವ ಆಧಾರ್‌ ಕಾರ್ಡ್‌ ಮುಖ್ಯ ದಾಖಲೆಗಳು.
ಕೇಂದ್ರದ ಸಂಪರ್ಕ ಸಂಖ್ಯೆ : 0820-2987020

*ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.