CONNECT WITH US  

ಶ್ರೀಕೃಷ್ಣ ಮಠ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರಕ್ಕೆ ತಡೆ

ಉಡುಪಿ: ಶ್ರೀಕೃಷ್ಣ ಮಠ ಹಾಗೂ ಅಷ್ಟ ಮಠಗಳ ವಿರುದ್ಧ ಮಾನಹಾನಿಕರ, ಅವಹೇಳನಕಾರಿ ದೃಶ್ಯ ಮತ್ತು ಸುದ್ದಿ ಪ್ರಸಾರ ಮಾಡುವುದಕ್ಕೆ ಉಡುಪಿಯ ನ್ಯಾಯಾಲಯವೊಂದು ತಡೆಯಾಜ್ಞೆ ನೀಡಿದೆ.  ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥರ ಅಸಹಜ ಸಾವಿನ ಬಳಿಕ ವಿವಿಧ ದೃಶ್ಯ ಮಾಧ್ಯಮಗಳಲ್ಲಿ ಅಷ್ಟಮಠದ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಸುದ್ದಿಗಳು ಪ್ರಸಾರವಾಗುತ್ತಿದ್ದು, ಇದರ ವಿರುದ್ಧ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ (ತುಶಿಮಾಮ) ಉಡುಪಿ ಘಟಕ ನ್ಯಾಯಾಲಯದ‌ಲ್ಲಿ ಮೊಕದ್ದಮೆ ದಾಖಲಿಸಿತ್ತು. ಇದರ ವಿಚಾರಣೆ ನಡೆಸಿದ ಉಡುಪಿಯ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ (ಕಿರಿಯ ವಿಭಾಗ) ಶುಕ್ರವಾರ ತಡೆಯಾಜ್ಞೆ ನೀಡಿತು. 

ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮ್‌ಪ್ರಶಾಂತ್‌, ಶೀರೂರು ಶ್ರೀಗಳ ವಿಷಯದಲ್ಲಿ ಕೃಷ್ಣ ಮಠ ಹಾಗೂ ಅಷ್ಟ ಮಠಾಧೀಶರ ವಿರುದ್ಧ 3 ಸ್ಥಳೀಯ ಸುದ್ದಿವಾಹಿನಿಗಳ ಸಹಿತ ರಾಜ್ಯದ 14 ದೃಶ್ಯಮಾಧ್ಯಮಗಳಲ್ಲಿ ಯಾವುದೇ ಮಾನಹಾನಿ ದೃಶ್ಯ ಮತ್ತು ಸುದ್ದಿಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಆದೇಶಿಸಿದರು. 

ತುಶಿಮಾಮ ಅಧ್ಯಕ್ಷ ಕೆ. ಅರವಿಂದ ಆಚಾರ್ಯ, ಕಾರ್ಯದರ್ಶಿ ರವಿಪ್ರಕಾಶ್‌ ಭಟ್‌, ಕೋಶಾಧಿಕಾರಿ ಉದ್ಯಾವರ ವಾದಿರಾಜ ಆಚಾರ್ಯ ಮೊಕದ್ದಮೆ ದಾಖಲಿಸಿದ್ದರು. ನ್ಯಾಯವಾದಿ ಪ್ರದೀಪ್‌ಕುಮಾರ್‌ ಅವರು ವಾದಿಸಿದ್ದರು. ಇದೇ ರೀತಿ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿಯೂ ಕೆಲವರು ಪ್ರಕರಣ ದಾಖಲಿಸಿದ್ದು ಸೋಮವಾರ ತೀರ್ಪು ಹೊರಬೀಳುವ ನಿರೀಕ್ಷೆ ಇದೆ. 


Trending videos

Back to Top