ಪಾಂಬೂರು: ಇನ್ನೊಂದು ಚಿರತೆ ಪ್ರತ್ಯಕ್ಷ !
Team Udayavani, Aug 9, 2018, 4:10 PM IST
ಶಿರ್ವ: ಪಾಂಬೂರು ಪರಿಸರದಲ್ಲಿ ಮತ್ತೂಂದು ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರ ನಿದ್ದೆಯನ್ನು ಕಸಿದುಕೊಂಡಿದೆ. ಪಡುಬೆಳ್ಳೆ, ಸಡಂಬೈಲು, ಪಾಂಬೂರು, ಬಂಟಕಲ್ಲು ಪರಿಸರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತ ಭೀತಿ ಮೂಡಿಸಿದ್ದ ದೊಡ್ಡ ಗಾತ್ರದ ಚಿರತೆ ಕೊನೆಗೂ ಮಂಗಳವಾರ ಅರಣ್ಯ ಇಲಾಖೆಯ ಬೋನಿಗೆ ಬೀಳುವ ಮೂಲಕ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿತ್ತು.
ಆದರೆ ಬುಧವಾರ ಪಾಂಬೂರು ದಿಂಡೊಟ್ಟು ಜಾರ್ಜ್ ಫ್ಲೋರಿನ್ ಸಲ್ದಾನ ಅವರ ಮನೆಯ ಸಮೀಪವೇ ಇನ್ನೊಂದು ಚಿರತೆ ಸಂಚರಿಸುವುದು ಕಂಡು ಬಂದಿದೆ. ಗಂಡು ಚಿರತೆ ಬಿದ್ದರೂ ಅದರ ಹೆಣ್ಣು ಚಿರತೆ ಮತ್ತು ಮರಿಗಳು ಇಲ್ಲೇ ಇವೆ ಎಂದು ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಬೆಳ್ಳೆ ಹರೀಶ್ ಶೆಟ್ಟಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಮತ್ತೂಮ್ಮೆ ಕಾರ್ಯಾಚರಣೆ ನಡೆಸಿ ನಾಗರಿಕರ ಆತಂಕ ದೂರಮಾಡುವಂತೆ ಆಗ್ರಹಿಸಿದ್ದಾರೆ.
ಪಾಂಬೂರು, ಪಡುಬೆಳ್ಳೆ ಪರಿಸರದಲ್ಲಿ ಹೈಸ್ಕೂಲು, ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿದ್ದು ಚಿರತೆ ಹಾವಳಿಯಿಂದ ಶಾಲೆಗೆ ಹೋಗುವ ಮಕ್ಕಳು ಹಾಗೂ ಸಾರ್ವಜನಿಕರು ನಡೆದಾಡಲು ಅಂಜುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು