CONNECT WITH US  

ಉಡುಪಿ: ರಸ್ತೆ ಮಧ್ಯೆ ಕೈಕೊಟ್ಟ  108 ಆ್ಯಂಬುಲೆನ್ಸ್‌ !

 ವಾಹನ ತಳ್ಳಿ ರೋಗಿಯ ಜೀವ ಉಳಿಸಿದ ಪೊಲೀಸರು, ಸಾರ್ವಜನಿಕರು

ಉಡುಪಿ: ನಗರದ ಜಂಕ್ಷನ್‌ನಲ್ಲಿ ಕೆಟ್ಟು ನಿಂತ 108 ಆರೋಗ್ಯ ಕವಚ ಆ್ಯಂಬುಲೆನ್ಸನ್ನು ಟ್ರಾಫಿಕ್‌ ಪೊಲೀಸರು ಮತ್ತು ಸಾರ್ವಜನಿಕರು ತಳ್ಳಿ ಚಾಲನೆಗೊಳಿಸಿ ರೋಗಿ ಸಕಾಲಕ್ಕೆ ಆಸ್ಪತ್ರೆ ಸೇರಲು ನೆರವಾದ ಘಟನೆ ಮಂಗಳವಾರ ನಡೆದಿದೆ.

ಮಂಗಳವಾರ ಸಂಜೆ 5.15ರ ಸುಮಾರಿಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಹೃದ್ರೋಗಿ  ಯೋರ್ವ ರನ್ನು 108 ಆ್ಯಂಬುಲೆನ್ಸ್‌ ಮೂಲಕ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಕಲ್ಸಂಕ ಜಂಕ್ಷನ್‌ನಲ್ಲಿ ಇದ್ದಕ್ಕಿದ್ದಂತೆ ವಾಹನ ನಿಂತು ಹೋಯಿತು. ಎಷ್ಟೇ ಪ್ರಯತ್ನಿಸಿದರೂ ವಾಹನ ಸ್ಟಾರ್ಟ್‌ ಆಗದೆ ಚಾಲಕ ಅಸಹಾಯಕನಾದ. ಆತಂಕಗೊಂಡ ರೋಗಿಯ ಮನೆಯವರು ಆ್ಯಂಬುಲೆನ್ಸ್‌ನೊಳಗೆ ಬೊಬ್ಬೆ ಹಾಕ ತೊಡಗಿದರು. ಕೂಡಲೇ ಸ್ಪಂದಿಸಿದ ಟ್ರಾಫಿಕ್‌ ಪೊಲೀಸ ರಿಬ್ಬರು ಆ್ಯಂಬುಲೆನ್ಸನ್ನು ತಳ್ಳಲಾರಂಭಿ ಸಿ ದರು. ಸ್ಥಳೀಯರೂ ಸೇರಿ ತಳ್ಳಿದಾಗ  ಆ್ಯಂಬುಲೆನ್ಸ್‌ ಸ್ಟಾರ್ಟ್‌ ಆಯಿತು. ರೋಗಿಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತು.

ಹಿಂದೆಯೂ ಆಗಿತ್ತು
ಅಜ್ಜರಕಾಡು ಆಸ್ಪತ್ರೆಯಲ್ಲಿ ನಿಲುಗಡೆ ಯಾಗುವ ಈ ಆ್ಯಂಬುಲೆನ್ಸ್‌ ಇತ್ತೀಚೆಗೆ ಮಂಗಳೂರಿಗೆ ರೋಗಿ ಯೋರ್ವರನ್ನು ಕರೆದೊಯ್ಯುವ ಸಂದರ್ಭದಲ್ಲೂ ಅರ್ಧದಾರಿಯಲ್ಲಿ ಕೈಕೊಟ್ಟಿತ್ತು ಎಂದು ತಿಳಿದುಬಂದಿದೆ. 

Trending videos

Back to Top