CONNECT WITH US  

ಶೀರೂರು ಸ್ವಾಮೀಜಿ ಆರಾಧನೆ

ಉಡುಪಿ: ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನ ಮಹೋತ್ಸವ ನಿಧನದ 48 ದಿನಗಳ ಬಳಿಕ ಮೂಲ ಶೀರೂರು ಮಠ ಮತ್ತು ಉಡುಪಿ ಶ್ರೀಕೃಷ್ಣ ಮಠದಲ್ಲಿ ಬುಧವಾರ ಜರಗಿತು. 

ಶೀರೂರು ಮಠದಲ್ಲಿ ಮಂಗಳವಾರ ರಾತ್ರಿ ಸ್ಥಳಶುದ್ಧಿ, ರಾಕ್ಷೋಘ್ನ ಹೋಮ ನಡೆದಿದ್ದು, ಬುಧವಾರ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಮಠದಲ್ಲಿರುವ ಪಟ್ಟಾಭಿ ರಾಮಚಂದ್ರ ದೇವರು, ಚಿಕ್ಕ ಪಟ್ಟದ ದೇವರಿಗೆ ಪಂಚಾಮೃತ ಅಭಿಷೇಕ, 108 ಸೀಯಾಳಾಭಿ ಷೇಕ, ಪವಮಾನ ಹೋಮ, ನವಕ ಪ್ರಧಾನಹೋಮ, ಶ್ರೀಗಳ ವೃಂದಾವನದಲ್ಲಿ ವಿರಜಾ ಮಂತ್ರ ಹೋಮ ನಡೆಸ ಲಾಯಿತು. ಗುರು ವಾರ ಉಡುಪಿ ಶೀರೂರು ಮಠ ದಲ್ಲಿ ಸ್ಥಳಶುದ್ಧಿ, ರಾಕ್ಷೋಘ್ನ ಹೋಮ ನಡೆಸಲಾಗುವುದು. 

ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಮಧೆಶ ತಂತ್ರಿ ನೇತೃತ್ವ ವಹಿಸಿದ್ದರು. ರತ್ನ ಕುಮಾರ್‌, ವೇದವ್ಯಾಸ ಆಚಾರ್ಯ, ಉದಯ ಸರಳತ್ತಾಯ, ಮಧು  ಸೂದನ ಪುತ್ತೂರಾಯ, ಸುದರ್ಶನ ಪುತ್ತೂರಾಯ, ಶ್ರೀನಿವಾಸ ಭಟ್‌, ಶೀರೂರು ಮಠದ ವಾದಿರಾಜ ಆಚಾರ್ಯ, ಶ್ರೀನಿವಾಸ ಆಚಾರ್ಯ, ಲಾತವ್ಯ ಆಚಾರ್ಯ, ವೃಜನಾಥ ಆಚಾರ್ಯ, ರಘುರಾಮ ಕೃಷ್ಣ ಬಲ್ಲಾಳ್‌, ವಾದಿರಾಜ ಆಚಾರ್ಯ, ಶ್ರೀವತ್ಸ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು,  ಮಧ್ಯ ಪ್ರದೇಶ ಔಷಂಗಾಬಾದ್‌ನ ಸನ್ಯಾಸಿ ವೆಂಕಟಚೈತನ್ಯ ಆಗಮಿಸಿದ್ದರು. 

ಕೃಷ್ಣ ಮಠದಲ್ಲಿ  ವಿಶೇಷ ಪೂಜೆ
ಪರ್ಯಾಯ ಪಲಿಮಾರು ಮಠದಿಂದ ಶೀರೂರು ಶ್ರೀಗಳ ಆರಾಧನೆ ಪ್ರಯುಕ್ತ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪರ್ಯಾಯ ಶ್ರೀ ಪಲಿಮಾರು ಮಠಾಧೀಶರು ಪೂಜೆ ಸಲ್ಲಿಸಿದ ಬಳಿಕ ರಾಜಾಂಗಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಜರಗಿತು.

Trending videos

Back to Top