CONNECT WITH US  

ಹೆಬ್ರಿ: ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ ಜಾಥಾ  

ಹೆಬ್ರಿ: ಹೆಬ್ರಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ತ್ಯಜಿಸುವ ಬಗ್ಗೆ ಗುರುವಾರ ಹೆಬ್ರಿ ಸರಕಾರಿ ಪ.ಪೂ.ಕಾಲೇಜು ವಿದ್ಯಾರ್ಥಿಗಳು,ಪಂಚಾಯತ್‌ ವತಿಯಿಂದ ಪ್ಲಾಸ್ಟಿಕ್‌ ನಿಷೇಧದ ಘೋಷಣೆ ಮೂಲಕ ಹೆಬ್ರಿ ಪ್ರಮುಖ ಬೀದಿಗಳಲ್ಲಿ  ಜಾಥಾ ನಡೆಯಿತು.

ಪ್ಲಾಸ್ಟಿಕ್‌ ಬಳಕೆ  ಮಾಡದೆ ಬಟ್ಟೆ,ಪೇಪರ್‌ ಬ್ಯಾಗ್‌ಗಳನ್ನು ಬಳಸಿ ಪರಿಸರ ಮೇಲೆ ಆಗುವ ಹಾನಿ ತಡೆಗಟ್ಟವ ಕುರಿತು ತಾ. ಪಂ.ಸದಸ್ಯರು,ಗ್ರಾ.ಪಂ.ಸದಸ್ಯರು,ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸೆ.15ರ ತನಕ ಗಡು  
ಹೆಬ್ರಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಯಾವುದೇ ಅಂಗಡಿಯವರು ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ನ್ನು ಮಾರಾಟ ಮಾಡುವುದು ಸಂಪೂರ್ಣ ನಿಲ್ಲಿಸಬೇಕು. ಈವರೆಗೆ ಇದ್ದ ಕ್ಯಾರಿಬ್ಯಾಗ್‌ನ್ನು ಹಿಂದಿರುಗಿಸಲು ಸೆ.15ರ ವರೆಗೆ ಕಾಲಾವಕಾಶ ಪಂಚಾಯತ್‌ನಿಂದ ನೀಡಲಾಗಿದೆ.ಅಂಗಡಿ ಮಾಲಕರು ಗ್ರಾಹಕರಿಗೆ ಬಟ್ಟೆ ಚೀಲ ತರುವಂತೆ  ವಿನಂತಿಸಬೇಕು ಎಂದು ಪಂಚಾಯತ್‌ ಅಂಗಡಿಗಳಿಗೆ ಸೂಚನೆ ನೀಡಿದೆ.

ತಪ್ಪಿದ್ದಲ್ಲಿ ದಂಡ 
ಹೆಬ್ರಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ ಮಾಡುವ ಗುರಿಯನ್ನು ಹೆಬ್ರಿ ಗ್ರಾ.ಪಂ.ಹೊಂದಿದ್ದು ಇದಕ್ಕೆ ಅಂಗಡಿ ಮಾಲಕರು ,ಗ್ರಾಹಕರು ಸಹಕರಿಸಬೇಕು. ತಪ್ಪಿದಲ್ಲಿ ಅಂಗಡಿ ಮಾಲಕರಿಗೆ ದಂಡ ವಿಧಿಸಲಾಗುವುದು ಎಂದು ಹೆಬ್ರಿ ಪಂಚಾಯತ್‌ ತಿಳಿಸಿದೆ.

 ಪ್ಲಾಸ್ಟಿಕ್‌ ಮುಕ್ತ ಗ್ರಾಮಕ್ಕೆ ಸಹಕರಿಸಿ
ಪ್ಲಾಸ್ಟಿಕ್‌ ಬಳಕೆಯಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜತೆಗೆ ಪರಿಸರ ಹಾಳುಗುತ್ತದೆ.
ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಪ್ರೇರಿತವಾಗಿ ಪ್ಲಾಸ್ಟಿಕ್‌ ಬಳಸುವುದಿಲ್ಲ ಎಂಬ ತೀ ರ್ಮಾನಕ್ಕೆ ಬಂದಾಗ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಲ್ಲಸಬಹುದಾಗಿದ್ದು ಗ್ರಾಮಸ್ಥರು , ಅಂಗಡಿ ಮಾಲಕರು ಪಂಚಾಯತ್‌ ಈ ಅಂದೋಲನಕ್ಕೆ ಸಹಕರಿಸಿ ಪ್ಲಾಸ್ಟಿಕ್‌ ಮುಕ್ತ ಗ್ರಾಮ ಮಾಡಲು ಕೈಜೋಡಿಸಬೇಕು 

- ವಿಜಯಾ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top